Tuesday , October 15 2019
Breaking News
image credit: arabnews.com
Home / ವಿಶೇಷ / ಗಲೀಜು ವಿಮಾನದ ವೈರಲ್ ವೀಡಿಯೋ: ಸತ್ಯಾಸತ್ಯತೆ ಇಲ್ಲಿದೆ

ಗಲೀಜು ವಿಮಾನದ ವೈರಲ್ ವೀಡಿಯೋ: ಸತ್ಯಾಸತ್ಯತೆ ಇಲ್ಲಿದೆ

ಸಂದೇಶ ಇ-ಮ್ಯಾಗಝಿನ್: ಮುಸ್ಲಿಮರ ಪವಿತ್ರ ಹಜ್ಜ್ ಕರ್ಮ ಪ್ರಾರಂಭವಾಗಲು ಕೆಲವೇ ದಿನಗಳು ಬಾಕಿ ಇರುವುವಾಗ, ಇದೀಗ ಮೊನ್ನೆಯಿಂದ ವಾಟ್ಸಾಪ್ ಮತ್ತು ಇನ್ನಿತರ ಸೋಶಿಯಲ್ ಮೀಡಿಯಾಗಳಲ್ಲಿ ವೀಡಿಯೋ ಒಂದು ವೈರಲ್ ಆಗಿತ್ತು. ವೀಡಿಯೋದಲ್ಲಿ ಹಾಜಿಗಳು ಸೌದಿಗೆ ಹೋಗುವ ಏರ್ ಇಂಡಿಯಾ ವಿಮಾನವನ್ನು ಗಲೀಜು ಮಾಡಿದ್ದಾರೆ, ಇಂತಹ ಜನರನ್ನು ನಮ್ಮೊಂದಿಗೆ ಪ್ರಯಾಣಿಸಲು ಅನುಮತಿಸಬಾರದು ಎಂದು ಮೋದಿ ಸರಕಾರವನ್ನು ಮನವಿ ಮಾಡಿದ ಕೆಲವು ಪೋಸ್ಟ್ ತಲೆ ಬರಹಗಳು ಮತ್ತು ಸುಮ್ಮನೆ ಅಲ್ಲ ಇಂತಹ ಕೃತ್ಯ ಎಸಗಲು ಸಬ್ಸಿಡಿ ಕೂಡ ಉಂಟು ಎನ್ನುವ ಮೂದಲಿಕೆಯ ಕುಹಕ ಸ್ಟೇಟಸ್ ಗಳು ಅಪ್ಡೇಟ್ ಆಗಿದ್ದವು. ದೀಪಕ್ ಶೆಟ್ಟಿ ಎಂಬಾತ ಪೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಈ ವೀಡಿಯೋವನ್ನು ಎರಡು ಲಕ್ಷಕ್ಕಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಟ್ವಿಟ್ಟರ್ ನಲ್ಲೂ ಇದೇ ವೈರಲ್ ಟ್ರೆಂಡ್ ಕಾಣಬಹುದಾಗಿದೆ. ಆದರೆ ಸತ್ಯಾಸತ್ಯತೆ ಏನಿರಬಹುದು ಎಂದು ಹೆಚ್ಚಿನವರಿಗೆ ಗೊತ್ತಾಗಲೇ ಇಲ್ಲ. ಕೆಲವು ವೀಡಿಯೋ ನೋಡಿದ ಆವೇಶದಿಂದ ಮುಸ್ಲಿಮರ ಬಗ್ಗೆ ಹಾಗೂ ಹಜ್ ಬಗ್ಗೆ ಅವಾಚ್ಯ ಪದ ಬಳಸಿದ್ದಾರೆ. ಅದೇನೇ ಇದ್ದರು ಮಳಯಾಲಂ ಮಾಧ್ಯಮ ತೇಜಸ್ ಇದರ ಫ್ಯಾಕ್ಟ್ ಚೆಕ್ ಮಾಡಿ ಸತ್ಯಾಸತ್ಯತೆಯನ್ನು ಜನರ ಮುಂದೆ ತೆರೆದಿಟ್ಟಿದೆ.

ಸುದ್ದಿಯ ಹಿಂದೆ ಬಿದ್ದು ಹೂಡುಕಾಡಿದಾಗ ಇದು 2016 ರ ಸುದ್ದಿ ಎಂದು ಸ್ಪಷ್ಟವಾಗಿದೆ. 2016 ರ ಸೆಪ್ಟಂಬರ್‌ನಲ್ಲಿ ಈ ಸುದ್ದಿಯನ್ನು ಬ್ರಿಟೀಷ್ ಪತ್ರಿಕೆ ಮಿರರ್ ಪ್ರಕಟಿಸಿತ್ತು. ಮಾತ್ರವಲ್ಲ ಇದೇ ಸುದ್ದಿಯನ್ನು ಅರಬ್ ನ್ಯೂಸ್, ದಿ ಸನ್ , ಎಕ್ಸ್‌ಪ್ರೆಸ್ ಮುಂತಾದ ಪತ್ರಿಕೆಗಳೂ ಕೂಡ ಇದೇ ಸುದ್ದಿಯನ್ನು ಪ್ರಕಟಿಸಿತ್ತು. ವಿಷಯ ಏನಂದ್ರೆ ಈ ವಿಶ್ವಾಸಯೋಗ್ಯ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ ಈ ವಿಮಾನ ಜಿದ್ದಾ ದಿಂದ ಇಥಿಯೋಪಿಯನ್ ರಾಜಧಾನಿ ಅಡ್ಡಿಸ್ ಅಬಾಬಾ ಗೆ ತೆರಳುವ ಸೌದಿ ಅರೇಬಿಯನ್ ಏರ್‌ಲೈನ್ಸ್‌ನ ವಿಮಾನವಾಗಿತ್ತು. ಈ ವಿಮಾನದಲ್ಲಿ ಇದ್ದ ಹೆಚ್ಚಿನ ಪ್ರಯಾಣಿಕರು ಸೌದಿ ಅರೇಬಿಯಾದಲ್ಲಿ ಅಕ್ರಮವಾಗಿ ವಾಸ್ತವ್ಯ ಹೂಡಿ ಸಿಕ್ಕಿ ಬಿದ್ದು ಗಡಿಪಾರು ಮಾಡಲ್ಪಟ್ಟವರಾಗಿದ್ದರು ಎನ್ನಲಾಗಿದೆ. ಇದರ ವೀಡಿಯೋವನ್ನು ಬಳಸಿ ಹಜ್ ಮತ್ತು ಹಾಜಿಗಳ ವಿರುದ್ಧ ಕೆಲವು ಸಮಾಜಘಾತುಕರು ಸುಳ್ಳು ಸುದ್ದಿ ಹರಡಿ ಸಿಕ್ಕಿಬಿದ್ದಿದ್ದಾರೆ.

Check Also

ಕೆಎಸ್ಆರ್ಟಿಸಿ ಬಸ್ಸನ್ನು ಆಂಬುಲೆನ್ಸ್ ಮಾಡಿ ಮಹಿಳೆಯ ಜೀವ ರಕ್ಷಿಸಿದ ಚಾಲಕ ಮತ್ತು ನಿರ್ವಾಹಕ-ವ್ಯಾಪಕ ಪ್ರಶಂಸೆ

017ಸಂದೇಶ ಇ-ಮ್ಯಾಗಝಿನ್: ಕೇರಳದ ಕೆಎಸ್ಆರ್ಟಿಸಿ ಚಾಲಕ ಮತ್ತು ಕಂಡಕ್ಟರ್ ಬಸ್ಸಿನಲ್ಲಿ ಪ್ರಯಾಣಿಸುವಾಗ ಎದೆ ನೋವಿನಿಂದ ಅಸ್ವಸ್ಥರಾದ ಮಹಿಳಾ ಪ್ರಯಾಣಿಕರೊಬ್ಬರನ್ನು ಸಮಯಕ್ಕೆ …

Leave a Reply

Your email address will not be published. Required fields are marked *