ಸಂದೇಶ ಇ-ಮ್ಯಾಗಝಿನ್: ನಿನ್ನೆಯಿಂದ ವಿಶ್ವದಾದ್ಯಂತ ಫೇಸ್ ಆಪ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಫೇಸ್ ಬುಕ್ ನ ನ್ಯೂಸ್ ಫೀಡ್ ತುಂಬಾ ಫೇಸ್ ಆಪ್ ಚಿತ್ರಗಳೇ ತುಂಬಿ ಹೋಗಿದೆ. ವಾಸ್ತವದಲ್ಲಿ ಈ ಆಪ್ ಹೊಸದಾಗಿ ಲಾಂಚ್ ಆಗಿದ್ದೇನೂ ಅಲ್ಲ. ಇದು ಹಳೆಯ ಆಪ್. ಆದರೆ ನಿನ್ನೆಯಿಂದ ವೈರಲ್ ಆಗಿದೆ. ಕ್ರಿಕೆಟ್ ಆಟಗಾರರು, ಬಾಲಿವುಡ್ ನಟರು ಹಾಗೂ ಇನ್ನಿತರ ಸೆಲೆಬ್ರಿಟಿಗಳು ತಮ್ಮ ಫೋಟೋ ಗಳನ್ನು ವೃದ್ಧಾಪ್ಯದಲ್ಲಿ ಯಾವ ರೀತಿ ಕಾಣುತ್ತೆ ಅಂತ ಫೇಸ್ ಆಪ್ ನಲ್ಲಿ ಎಡಿಟ್ ಮಾಡಿ ಹಾಕಿದ್ದಾರೆ. ವಾಸ್ತವಕ್ಕೆ ತುಂಬಾ ಹತ್ತಿರವಾಗಿ ಕಾಣುವ ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಈ ಆಪ್ ಬಳಕೆ ದಾರರನ್ನು ಹೆಚ್ಚಿಸಿದೆ. ಫೇಸ್ಆಪ್ ಪ್ರಕಾರ, ಕಂಪನಿಯು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಟೆಕ್ನಾಲಜಿ ಬಳಸಿ ಬಳಕೆದಾರರ ಫೋಟೋಗಳನ್ನು ಮಗುವಿದ್ದಾಗ ಹೇಗೆ ಕಾಣುತ್ತಿದ್ದರು, ವೃದ್ಧಾಪ್ಯದಲ್ಲಿ ಹೇಗೆ ಕಾಣಲಿದ್ದಾರೆ. ಮತ್ತು ಹೆಣ್ಣಾಗಿದ್ದರೆ ಅಥವಾ ಗಂಡಾಗಿದ್ದರೆ ಹೇಗೆ ಕಾಣುತ್ತಿದ್ದರು ಎಂದು ಪರಿವರ್ತಿಸುತ್ತದೆ.
ಈ ಅಪ್ಲಿಕೇಶನ್ ಅನ್ನು 2017 ರಲ್ಲಿ ಪ್ರಾರಂಭಿಸಲಾಗಿದೆ. ಆದರೆ ಇದನ್ನು ಬಳಸುವುದರಿಂದ ನಿಮ್ಮ ಪ್ರೈವೆಸಿಗೆ ಅಪಾಯವಿದೆಯೇ? ಇದು ನಿಮ್ಮ ಫೋಟೋ ಲೈಬ್ರರಿಗೆ ಸಂಪೂರ್ಣ ಪ್ರವೇಶವನ್ನು ತೆಗೆದುಕೊಳ್ಳುತ್ತದೆಯೇ? ಇಂತಹ ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಉದ್ಬವಿಸಿದೆ.
ಫೇಸ್ ಆಪ್ ಪ್ರೈವಸಿ ಪಾಲಿಸಿಯ ಪ್ರಕಾರ, ನೀವು ನಮ್ಮ ಸೇವೆಯನ್ನು ಬಳಸಿದಾಗಲೆಲ್ಲಾ, ನಮ್ಮ ಸೇವೆಯು ಕೆಲವು ಲಾಗ್ ಫೈಲ್ ಮಾಹಿತಿಯನ್ನು ಸ್ವಯಂಚಾಲಿತವಾಗಿ ದಾಖಲಿಸುತ್ತದೆ. ಇದು ನಿಮ್ಮ ವೆಬ್ ವಿನಂತಿ, ಐಪಿ ವಿಳಾಸ, ಬ್ರೌಸರ್ ಪ್ರಕಾರ, URL ಮತ್ತು ಈ ಸೇವೆಯೊಂದಿಗೆ ನೀವು ಎಷ್ಟು ಬಾರಿ ಸಂವಹನ ನಡೆಸುತ್ತೀರಿ ಎಂಬ ಮಾಹಿತಿಯನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.
ಕಂಪನಿಯು ತನ್ನ ಬಳಕೆದಾರರ ಡೇಟಾವನ್ನು ಅವರ ಅನುಮತಿಯಿಲ್ಲದೆ ಯಾರಿಗೂ ಮಾರಾಟ ಮಾಡುವುದಿಲ್ಲ ಮತ್ತು ಅದನ್ನು ಬಾಡಿಗೆಗೆ ನೀಡುವುದಿಲ್ಲ ಎಂದು ಪ್ರೈವಸಿ ಪಾಲಿಸಿಯಲ್ಲಿ ತಿಳಿಸಲಾಗಿದೆ. ಆದಾಗ್ಯೂ, ನಿಮ್ಮ ಡೇಟಾವನ್ನು ಫೇಸ್ ಅಪ್ಲಿಕೇಶನ್ ಗುಂಪಿನ ಕಂಪನಿಗಳಿಗೆ ನೀಡಬಹುದು.
BE CAREFUL WITH FACEAPP – the face aging fad app. It immediately uploads your photos without asking, whether you chose one or not. https://t.co/LlqkDpy4ZO
— Joshua Nozzi 🇺🇸👨🏻💻 ⚣ (@JoshuaNozzi) July 16, 2019
ಈ ಅಪ್ಲಿಕೇಶನ್ ವೈರಲ್ ಆದ ನಂತರ, ಕೆಲವರು ಗೌಪ್ಯತೆಗೆ ಸಂಬಂಧಿಸಿದ ಪ್ರಶ್ನೆಗೆ ಕಾರಣ ವಾಗಬಹುದು ಎಂದು ಟ್ವಿಟರ್ನಲ್ಲಿ ಎಚ್ಚರಿಸಿದ್ದಾರೆ. ಆದರೆ ಭದ್ರತಾ ಸಂಶೋಧಕ ರಾಬರ್ಟ್ ಬ್ಯಾಪ್ಟಿಸ್ಟ್ ಪ್ರಕಾರ ಇದು ನಿರೂಪಿಸಲ್ಪಟ್ತ ಆರೋಪವಲ್ಲ ಮತ್ತು ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೂ ನೀವು ಯಾವ ಫೋಟೊವನ್ನು ಎಡಿಟ್ ಮಾಡುತ್ತೀರೋ ಆ ಫೋಟೋದ 100% ಅನುಮತಿ ಆ ಅಪ್ಲಿಕೇಶನ್ ಗೆ ನೀಡಿರುತ್ತೀರಿ.