Tuesday , October 15 2019
Breaking News
Home / ಗಲ್ಫ್ ವಿಶೇಷ / ಯುಎಇ: 25 ವರ್ಷ ದುಡಿದ ಉಳಿತಾಯದ ಹಣವನ್ನು ಕೇವಲ ನಿಮಿಷದಲ್ಲಿ ಎಗರಿಸಿದ ಕಳ್ಳರು

ಯುಎಇ: 25 ವರ್ಷ ದುಡಿದ ಉಳಿತಾಯದ ಹಣವನ್ನು ಕೇವಲ ನಿಮಿಷದಲ್ಲಿ ಎಗರಿಸಿದ ಕಳ್ಳರು

ಸಂದೇಶ ಇ-ಮ್ಯಾಗಝಿನ್: ಅಬ್ದುಲ್ ಕಯ್ಯೂಮ್ ಅಬ್ದುಲ್ ಹಕ್ 69 ವರ್ಷ ವಯಸ್ಸಿನ ಪಾಕಿಸ್ತಾನಿ ವ್ಯಕ್ತಿ ದುಬೈನಲ್ಲಿ ಕ್ರೇನ್ ಆಪರೇಟರ್ ಆಗಿ ಕಳೆದ 25 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. 1972 ರಲ್ಲಿ ತನ್ನ ಕುಟುಂಬವನ್ನು ಪೋಷಿಸುವ ಉದ್ದೇಶದಿಂದ ದುಬೈಗೆ ಬಂದ ಇವರು, ಹಣಕ್ಕೆ ಹಣ ಕೂಡಿಸಿ ತನ್ನ ಜೀವ ಮಾನದ ಉಳಿತಾಯವನ್ನು ಕೂಡಿಟ್ಟಿದ್ದರು. ಇದೀಗ ವಂಚನೆಗೊಳಗಾಗಿ ತನ್ನ ಎಲ್ಲಾ ಉಳಿತಾಯದ ಹಣವನ್ನು ಕೇವಲ 15 ನಿಮಿಷದಲ್ಲಿ ಕಳೆದುಕೊಂಡಿದ್ದಾರೆ. ಅರಬ್ ಎಮಿರೇಟ್ಸ್ ದಿರ್ಹಮ್ 127,500 ನ್ನು ತನ್ನ ಬ್ಯಾಂಕ್ ಖಾತೆಯಿಂದ ಮೋಸದಿಂದ ವರ್ಗಾಯಿಸಲಾಗಿದೆ ಎಂದು ಅಬ್ದುಲ್ ಕಯ್ಯೂಮ್ ಅಬ್ದುಲ್ ಹಕ್ ಬಹಿರಂಗಪಡಿಸಿದ್ದಾರೆ. ದುಬೈಗೆ ಬಂದಾಗಿನಿಂದ ತಾನು ಇದೇ ಬ್ಯಾಂಕ್ ಅಕೌಂಟನ್ನು ಬಳಸುತ್ತಿದ್ದು, ಎಟಿಎಂ ಪಿನ್ ಅಥವಾ ಇತರ ಖಾತೆಗಳ ವಿವರಗಳನ್ನು ಯಾರೊಂದಿಗೂ ಹಂಚಿಕೊಂಡಿಲ್ಲ. ಮತ್ತು ಎಂದಿಗೂ ಆನ್‌ಲೈನ್ ವಹಿವಾಟುಗಳನ್ನು ಕೂಡ ಮಾಡಿಲ್ಲ ಎಂದು ಅಬ್ದುಲ್ ಕಯ್ಯೂಮ್ ಹೇಳಿದ್ದಾರೆ.

ಕಳೆದ ಏಪ್ರಿಲ್ 30 ರಂದು ದುಬೈನ ಜೆಬೆಲ್ ಅಲಿ ಫ್ರೀ ಝೋನ್ ನಲ್ಲಿ ಕ್ರೇನ್ ಚಲಾಯಿಸುತ್ತಿದ್ದಾಗ ನನ್ನ ಮೊಬೈಲ್‌ಗೆ ಹಲವು ಸಂದೇಶಗಳು ಬರುತ್ತಿದ್ದವು. ಫೋನಿನ ಬೀಪ್ ಶಬ್ದ ನನಗೆ ಕೇಳಿತ್ತಾದರೂ, ಕೆಲಸದಲ್ಲಿ ತಲ್ಲೀನನಾಗಿದ ಕಾರಣ ನನಗೆ ಮೊಬೈಲ್ ನೋಡಲು ಸಾಧ್ಯವಾಗಲಿಲ್ಲ. ಆದರೆ ನಂತರ ನೋಡಿದಾಗ ಆಘಾತವಾಯಿತು. ನನ್ನ ಖಾತೆಯಲ್ಲಿದ್ದ ಎಲ್ಲಾ ಹಣವನ್ನು ಮೂರು ವಿಭಿನ್ನ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಸಂದೇಶ ಬಂದಿದ್ದವು ಎಂದು ಅಬ್ದುಲ್ ಕಯ್ಯೂಮ್ ಅಬ್ದುಲ್ ಹಕ್ ಘಟನೆಯ ಬಗ್ಗೆ ವಿವರಿಸಿದ್ದಾರೆ.

ಈ ಘಟನೆಯಿಂದಾಗಿ ಎಂದಿಗೂ ಆನ್‌ಲೈನ್ ಮೋಡ್ ಬ್ಯಾಂಕ್ ವಹಿವಾಟುಗಳನ್ನು ಬಳಸದಿದ್ದ ವ್ಯಕ್ತಿಯನ್ನು ವಂಚಕರು ತಮ್ಮ ಜಾಲದಲ್ಲಿ ಹೇಗೆ ಕೆಡವಲು ಸಾಧ್ಯ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಕಯ್ಯೂಮ್ ಅವರ ಖಾತೆಯಿಂದ ಹಣ ಲೂಟಿ ಮಾಡಿದ ಕಳ್ಳನ ಒಟಿಪಿ (ಒನ್-ಟೈಮ್ ಪಾಸ್ವರ್ಡ್) ನ ಮೊದಲ ಎರಡು ಪ್ರಯತ್ನಗಳು ವಿಫಲವಾಗಿವೆ ಎಂದು ಹೇಳುವ ಸಂದೇಶಗಳು ಕಯ್ಯೂಮ್ ಅವರ ಮೊಬೈಲ್‌ಗೆ ಬಂದಿದೆ. ಆದರೆ ಕಳ್ಳ ತನ್ನ ಮೂರನೆಯ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾನೆ.

Check Also

ಆಕೆ ತನ್ನ ಮಕ್ಕಳ ಹೊಟ್ಟೆ ತುಂಬಿಸಲು ಮದೀನಾದ ಬೀದಿಯಲ್ಲಿ ಟೀ ಮಾರುತ್ತಾಳೆ

2010ಸಂದೇಶ ಇ-ಮ್ಯಾಗಝಿನ್: ಇದು ಅಸಹಾಯಕ ತಾಯಿಯೊಬ್ಬಳ ನೈಜ ಜೀವನಗಾಥೆ. ಪತಿ ಮರಣ ಹೊಂದಿದ ನಂತರ ತನ್ನ ಸಣ್ಣವರಾದ ಆರು ಮಕ್ಕಳನ್ನು …

Leave a Reply

Your email address will not be published. Required fields are marked *