Monday , September 16 2019
Breaking News
Home / ವೀಡಿಯೋ / ರಮದಾನ್‌ನಲ್ಲಿ ವೈರಲ್ ಆಯಿತು ಎರ್ದೋಗಾನ್ ಅವರ ಸುಮಧುರ ಆಝಾನ್

ರಮದಾನ್‌ನಲ್ಲಿ ವೈರಲ್ ಆಯಿತು ಎರ್ದೋಗಾನ್ ಅವರ ಸುಮಧುರ ಆಝಾನ್

ಸಂದೇಶ ಇ-ಮ್ಯಾಗಝಿನ್: ರಸೆಪ್ ತೆಯ್ಯಿಬ್ ಎರ್ದೋಗಾನ್ ಇವರನ್ನು ಮುಸ್ಲಿಮ್ ಜಗತ್ತು ಬಹಳ ಹತ್ತಿರದಿಂದ ಬಲ್ಲದು. ತನ್ನ ನೇರಾ ನೇರ ಮಾತಿನಿಂದ ಜನರಿಗೆ ಬಹಳ ಹತ್ತಿರವಾಗಿರುವ ತುರ್ಕಿ ಅಧ್ಯಕ್ಷ ಎರ್ದೋಗಾನ್ ಅವರು ಇತ್ತೀಚೆಗೆ ಉದ್ಘಾಟನೆ ಗೊಂಡಿರುವ ತುರ್ಕಿಯ ಅತಿ ದೊಡ್ದ ಮಸೀದಿಯಲ್ಲಿ ಮೊನ್ನೆ ರಮದಾನಿನ ಮಗ್ರಿಬ್ ನಮಾಝ್ ನೀಡಿದ್ದಾರೆ. ಎರ್ದೋಗಾನ್ ಅವರ ಕಂಠ ಸಿರಿಯಿಂದ ಬಹಳ ಮಧುರವಾದ ಆಝಾನ್ ಕೇಳಿದ ಜನರು ಬಳಿಕ ಆ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಎರ್ದೋಗಾನ್‌ರ ಈ ಆಝಾನನ್ನು ಕೇಳಿ ಅವರ ಅಭಿಮಾನಿಗಳು ಎರ್ದೋಗಾನ್ ಅವರನ್ನು ಶ್ಲಾಘಿಸಿದ್ದಾರೆ. ಮುಸ್ಲಿಮರ ವಿರುದ್ಧ ಜಗತ್ತಿನಲ್ಲಿ ನಡೆಯುವ ಅನ್ಯಾಯದ ಬಗ್ಗೆ ಇತ್ತಿಚೆಗೆ ಮೊತ್ತ ಮೊದಲನೇಯವರಾಗಿ ಎರ್ದೋಗಾನ್ ಧ್ವನಿ ಎತ್ತುತ್ತಿದ್ದು, ಇದು ಜಾಗತಿಕ ಮುಸ್ಲಿಮರ ಮಧ್ಯೆ ಅವರ ಅಭಿಮಾನವನ್ನು ಇನ್ನಷ್ಟು ಉತ್ತುಂಗಕ್ಕೆ ಏರಿಸಿದೆ. ಎರ್ದೋಗಾನ್ ಅವರ ಈ ಸುಂದರವಾದ ಆಝಾನ್ ಕೇಳಿ ನೀವೂ ಹೆಮ್ಮೆ ಪಡುವಿರಿ.

Check Also

ಕೋರ್ಟ್ ವಿಚರಣೆಯನ್ನು ತಪ್ಪಿಸಿ ಈದ್ ಆಚರಿಸಿದ ಸಾಧ್ವಿ ಪ್ರಜ್ಞಾ

3111ಸಂದೇಶ ಇ-ಮ್ಯಾಗಝಿನ್: ಭೋಪಾಲ್ ಸಂಸದೆ ಹಾಗೂ ಮಾಲೇಗಾಂವ್ ಸ್ಪೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತೊಮ್ಮೆ ವಿವಾದದ …

Leave a Reply

Your email address will not be published. Required fields are marked *