Sunday , September 22 2019
Breaking News
rahul ghandhi
Home / ರಾಜಕೀಯ / ಲೋಕಸಭಾ ಚುನಾವಣೆ ಫಲಿತಾಂಶ: ಅಮೇಥಿ ಕಾಂಗ್ರೇಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಹಿನ್ನಡೆ

ಲೋಕಸಭಾ ಚುನಾವಣೆ ಫಲಿತಾಂಶ: ಅಮೇಥಿ ಕಾಂಗ್ರೇಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಹಿನ್ನಡೆ

ಸಂದೇಶ ಇ-ಮ್ಯಾಗಝಿನ್: 2019 ರ ಲೋಕಸಭಾ ಚುನಾವಣೆಯ ಮತಎಣಿಕೆ ಪ್ರಾರಂಭವಾಗಿದ್ದು, ನಿರೀಕ್ಷೆಯಂತೆ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಭರ್ಜರಿ ಬಹುಮತದತ್ತ ಸಾಗಿದೆ. ಅಚ್ಚರಿ ಎಂಬಂತೆ ಕಾಂಗ್ರೇಸ್ ಪಕ್ಷದ ರಾಷ್ಟ್ರಿಯ ಅಧ್ಯಕ್ಷ ರಾಹುಲ್ ಗಾಂಧಿ ಅಮೇಥಿಯಲ್ಲಿ ಬಿಜೆಪಿಯ ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರಂಭಿಕವಾಗಿ ಮುನ್ನಡೆಯನ್ನು ಕಾಯ್ದು ಕೊಂಡಿದ್ದಾರೆ. ಆರಂಭಿಕ ಮುನ್ನಡೆ ಸುಮಾರು 5000 ಮತಗಳ ಅಂತರದ್ದು ಎಂದು ಹೇಳಲಾಗುತ್ತಿದ್ದು, ರಾಹುಲ್ ಗಾಂಧಿಯವರು ಸ್ಪರ್ಧಿಸಿದ ಮತ್ತೊಂದು ಕ್ಷೇತ್ರವಾದ ಕೇರಳದ ವಯನಾಡಿನಲ್ಲಿ ರಾಹುಲ್ ಮುನ್ನಡೆ ಸಾಧಿಸಿದ್ದಾರೆ. ರಾಹುಲ್ ಅವರ ಈ ಹಿನ್ನಡೆ ಪಕ್ಷದ ಕಾರ್ಯಕರತರನ್ನು ಆತಂಕಕ್ಕೆ ತಳ್ಳಿದ್ದು, ಸೋನಿಯಾ ಗಾಂಧಿಯವರು ರಾಯ್ ಬರೇಲಿಯಲ್ಲಿ ಮನ್ನಡೆ ಸಾಧಿಸಿದ್ದಾರೆ.

ಒಂದು ವೇಳೆ ರಾಹುಲ್ ಗಾಂಧಿ ಅಮೇಥಿಯಲ್ಲಿ ಸೋತರೆ ಕಾಂಗ್ರೇಸ್ ಪಕ್ಷಕ್ಕೆ ಭಾರೀ ಮುಖಭಂಗವಾಗಲಿದೆ. ಅವರು ಸೋಲಿನ ಭಯದಿಂದಾಗಿಯೇ ವಯನಾಡ್‌ನಲ್ಲಿ ಸ್ಪರ್ಧಿಸಿದ್ದಾರೆ ಎಂದು ಬಿಜೆಪಿ ಈಗಾಗಲೇ ವ್ಯಂಗವಾಡಿದೆ. ಇನ್ನುಳಿದಂತೆ ವಾರಣಾಸಿಯಲ್ಲಿ ಪ್ರಧಾನಿ ಮೋದಿ ಮುನ್ನಡೆ ಸಾಧಿಸಿದ್ದಾರೆ. ಗುಜರಾತಿನ ಗಾಂಧಿ ನಗರದಲ್ಲಿ ಅಮಿತ್ ಶಾ ಮುನ್ನಡೆ ಸಾಧಿಸಿದ್ದಾರೆ.a

Check Also

ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಮರಲ್ಲ: ಮುಕ್ತಾರ್ ಅಬ್ಬಾಸ್ ನಖ್ವಿ

101ಸಂದೇಶ ಇ-ಮ್ಯಾಗಝಿನ್: ಅಲ್ಪಸಂಖ್ಯಾತ ಪದವು ಮುಸ್ಲಿಮರನ್ನು ಮಾತ್ರ ಸೂಚಿಸುವುದಿಲ್ಲ ನಮ್ಮ ದೇಶದಲ್ಲಿ ಜೈನರು, ಬೌದ್ಧರು, ಕ್ರಿಶ್ಚಿಯನ್ನರು, ಪಾರ್ಸಿಗಳು ಮತ್ತು ಸಿಖ್ಖರು …

Leave a Reply

Your email address will not be published. Required fields are marked *