Monday , September 16 2019
Breaking News
Home / ಗಲ್ಫ್ ಸುದ್ದಿ / ಸೌದಿ ದೊರೆ ಸಲ್ಮಾನ್ ಅವರ ಈದ್ ಸಂದೇಶ; ಜಾಗತಿಕ ಮುಸ್ಲಿಮರು ಹಾಗೂ ಪ್ರವಾಸಿಗಳ ಉಲ್ಲೇಖ

ಸೌದಿ ದೊರೆ ಸಲ್ಮಾನ್ ಅವರ ಈದ್ ಸಂದೇಶ; ಜಾಗತಿಕ ಮುಸ್ಲಿಮರು ಹಾಗೂ ಪ್ರವಾಸಿಗಳ ಉಲ್ಲೇಖ

ಸಂದೇಶ ಇ-ಮ್ಯಾಗಝಿನ್: ಸೌದಿ ದೊರೆ ಹಾಗೂ ಎರಡು ಪವಿತ್ರ ಮಸೀದಿಗಳ ಪರಿಚಾರಕರು ಆದ ಕಿಂಗ್ ಸಲ್ಮಾನ್ ಬಿನ್ ಅಬ್ಧುಲ್ ಅಝೀಝ್ ಈದುಲ್‌ ಫಿತ್ರ್ ಮುನ್ನಾ ದಿನವಾದ ಸೋಮವಾರ ಸಂಜೆ ವಿಶ್ವದಾದ್ಯಂತ ಇರುವ ಮುಸ್ಲಿಮ್ ಸಮುದಾಯಕ್ಕೆ ಈದ್ ಶುಭ ಹಾರೈಸಿದರು. ದೊರೆ ಸಲ್ಮಾನ್ ಪರವಾದಿ ಅವರ ಹೇಳಿಕೆಗಳನ್ನು ಓದಿದ ಮಾಧ್ಯಮ ಸಚಿವ ತುರ್ಕಿ ಅಲ್ ಶಬಾನಾ ದೊರೆ ಸಲ್ಮಾನ್ ಈ ಸುಸಂದರ್ಭದಲ್ಲಿ ಸೌದಿ ಹಾಗೂ ಜಗತ್ತಿನಲ್ಲಿರುವ ಮುಸ್ಲಿಮ್ ಸಮುದಾಯಕ್ಕೆ ಶಾಂತಿ ಸಮೃದ್ಧಿಯನ್ನು ಬಯಸಿದ್ದಾರೆ ಎಂದು ಹೇಳಿದರು. ಸಂವಹನ, ಸಾಮರಸ್ಯ, ಐಕಮತ್ಯ, ಸಹಿಷ್ಣುತೆ ಮತ್ತು ಸಂತೋಷಕ್ಕಾಗಿ ಅಲ್ಲಾಹನು ಈ ಈದನ್ನು ಒಂದು ದೊಡ್ಡ ಸಂದರ್ಭವನ್ನಾಗಿ ಮಾಡಲಿ. ಈ ಅನುಗ್ರಹಿಸುರುವ ರಾತ್ರಿಯಲ್ಲಿ ನಮ್ಮ ದೇಶದ ಎಲ್ಲಾ ನಾಗರಿಕರು, ವಲಸಿಗರು ಮತ್ತು ಪ್ರವಾಸಿಗರು ಮತ್ತು ಪ್ರಪಂಚದಾದ್ಯಂತದ ಎಲ್ಲ ಮುಸ್ಲಿಮರಿಗೆ ಅಲ್ಲಾಹನ ಪವಿತ್ರ ಭವನದ ಸಮೀಪದಿಂದ ಶುಭಹಾರೈಸಲು ನಾನು ಹೆಮ್ಮೆ ಪಡುತ್ತೇನೆ ಎಂದರು.

ಸೌದಿ ಅರೇಬಿಯಾ ರಾಜ್ಯವನ್ನು ಅಲ್ಲಾಹನು ವಿಶೇಷವಾಗಿ ಗೌರವಿಸಿದ್ದಾನೆ, ಏಕೆಂದರೆ ಅಬ್ದುಲ್ ಅಝೀಝ್ ಅವರು ಈ ರಾಜ್ಯವನ್ನು ಸ್ಥಾಪಿಸಿದ ನಂತರ, ಎರಡು ಪವಿತ್ರ ಮಸೀದಿಗಳ ಮತ್ತು ಹಜ್ ಮತ್ತು ಉಮ್ರಾ ಯಾತ್ರಾರ್ಥಿಗಳಿಗೆ ಸೇವೆ ಸಲ್ಲಿಸುವುದರ ಮೂಲಕ ಅವರ ಸುರಕ್ಷತೆ, ಭದ್ರತೆ ಮತ್ತು ಆರಾಮವನ್ನು ಕಾಪಾಡಿಕೊಳ್ಳುತ್ತಾ ಬಂದಿರುವುದು ಒಂದು ಅನನ್ಯ ಗೌರವ. ದೇವರ ಅತಿಥಿಗಳು ತಮ್ಮ ಆಚರಣೆಗಳನ್ನು ಸುಲಭವಾಗಿ ಮತ್ತು ಆರಾಮವಾಗಿ ನಿರ್ವಹಿಸಲು ಶಕ್ತರಾಗಿರುವ ಎಲ್ಲಾ ಸಾಮರ್ಥ್ಯಗಳನ್ನು ಒದಗಿಸಲು ನಮಗೆ ಸಹಾಯ ಮಾಡಿದ್ದಕ್ಕಾಗಿ ಆ ದೇವನನ್ನು ಸ್ತುತಿಸುತ್ತೇವೆ ಎಂದರು.

Check Also

ಕ್ರೈಸ್ಟ್ ಚರ್ಚ್ ದಾಳಿ ಸಂತ್ರಸ್ತರ 200 ಕುಟುಂಬಸ್ಥರಿಗೆ ದೊರೆ ಸಲ್ಮಾನ್ ರಿಂದ ಹಜ್ ಕೊಡುಗೆ

103ಸಂದೇಶ ಇ-ಮ್ಯಾಗಝಿನ್: ಕ್ರೈಸ್ಟ್‌ಚರ್ಚ್ ಭಯೋತ್ಪಾದಕ ದಾಳಿಯ ಸಂತ್ರಸ್ತರ 200 ಕುಟುಂಬ ಸದಸ್ಯರಿಗೆ ಈ ಬಾರಿಯ ಹಜ್ ಆತಿಥ್ಯ ವಹಿಸುವಂತೆ ಸೌದಿ …

Leave a Reply

Your email address will not be published. Required fields are marked *