Monday , August 26 2019
Breaking News
Home / ಗಲ್ಫ್ ವಿಶೇಷ / ಸೋದರಳಿಯನಿಗೆ ತನ್ನ ಲಿವರ್ ದಾನ ಮಾಡಿ ರಕ್ತ ಸಂಬಂಧಕ್ಕೆ ಹೊಸ ಭಾಷ್ಯ ಬರೆದ ಈದ್ ಫಹದ್

ಸೋದರಳಿಯನಿಗೆ ತನ್ನ ಲಿವರ್ ದಾನ ಮಾಡಿ ರಕ್ತ ಸಂಬಂಧಕ್ಕೆ ಹೊಸ ಭಾಷ್ಯ ಬರೆದ ಈದ್ ಫಹದ್

ಸಂದೇಶ ಇ-ಮ್ಯಾಗಝಿನ್: ಕುಟುಂಬದ ಸಂಬಂಧ ಇದ್ದರೂ ಕೂಡ ಅದನ್ನು ಮುರಿದು ಅಹಂಕಾರ ಪ್ರತಿಷ್ಟೆಯನ್ನೇ ತೋರಿಸುವ ಜನರಿರುವ ಈ ಕಾಲ ಘಟ್ಟದಲ್ಲಿ ಸೌದಿ ಅರೇಬಿಯಾದ ವ್ಯಕ್ತಿಯೊಬ್ಬ ತನ್ನ ಅಕ್ಕನ ಮಗುವಿಗೆ ತನ್ನ ದೇಹದ ಬಹು ಮುಖ್ಯ ಭಾಗವಾದ ಲಿವರ್ (ಯಕೃತ್ತು) ನ್ನು ದಾನ ಮಾಡಿ ಮಗುವಿನ ಜೀವ ಉಳಿಸಿ, ಕುಟುಂಬ ಸಂಬಂಧದ ಪ್ರೀತಿಗೆ ಒಂದು ಉತ್ತಮ ಭಾಷ್ಯ ಬರೆದಿದ್ದಾರೆ. ಸೌದೀ ಅರೇಬಿಯಾದ ಅಲ್ ಕಸ್ಸೀಮ್ ನ ಅಲ್ ಸಹಲೀಯಾ ಎಂಬಲ್ಲಿನ ನಿವಾಸಿ ಈದ್ ಫಹದ್ ಅಲ್ ಮುತಯಿರಿ ಅವರು ತಮ್ಮ ಅಕ್ಕನ ಮೂರು ತಿಂಗಳ ಮಗುವಾದ ವಲೀದ್ ಮಝೀನ್ ಮುತಯಿರಿಗೆ ಹುಟ್ಟುವಾಗಲೇ ಹೊಟ್ಟೆಗೆ ಸಂಬಂಧಿಸಿದ ಸಿರೋಸಿಸ್ ಎಂಬ ರೋಗವಿತ್ತು. ಈ ರೋಗದ ಕಾರಣದಿಂದಾಗಿ ಮಗುವಿನ ಲಿವರ್ ಕೊಳೆತು ಹೋಗಿತ್ತು. ಈ ಸಂದರ್ಭದಲ್ಲಿ ಮಗುವಿನ ಮಾವ ಈದ್ ಫಹದ್ ಅಲ್ ಮುತಯಿರಿ ಮಗುವಿನ ಜೀವ ಉಳಿಸಲು ತನ್ನ ಜೀವವನ್ನು ಪಣಕ್ಕಿಟ್ಟರು.

ಈ ಇಬ್ಬರ ಶಸ್ತ್ರಚಿಕಿತ್ಸೆ ಇದೀಗ ಸೌದಿಯ ರಾಜಧಾನಿ ರಿಯಾದ್‌ನ ಕಿಂಗ್ ಫೈಸಲ್ ಸ್ಪೆಷಲಿಸ್ಟ್ ಹಾಸ್ಪಿಟಲ್ ನಲ್ಲಿ ನಡೆಯಿತು. ಇದೀಗ ಮಾವ ಮತ್ತು ಸೋದರಳಿಯ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಸೌದಿ ಗ್ಯಾಝೆಟ್ ವರದಿ ಮಾಡಿದೆ.

Check Also

ಯುಎಇ: ರಮದಾನ್‌ನಲ್ಲಿ ಬ್ರಿಟನ್ ಮಹಿಳೆಯಿಂದ ಇಸ್ಲಾಮ್ ಸ್ವೀಕಾರ

204ಸಂದೇಶ ಇ-ಮ್ಯಾಗಝಿನ್: ಯುಕೆ ರಾಷ್ಟ್ರೀಯಳಾದ ಮ್ಯಾಕ್ಸಿನ್ ಬ್ರಾಡಾಕ್ ಯುಎಇಯಲ್ಲಿ ತಮ್ಮ ಜೀವನದ ಒಂಬತ್ತನೇ ರಮದಾನ್ ಉಪವಾಸ ವೃತಾಚರಣೆ ಮಾಡುತ್ತಿದ್ದಾರೆ. ಇದು …

Leave a Reply

Your email address will not be published. Required fields are marked *