Friday , April 3 2020
Breaking News
Home / ಇಸ್ಲಾಮಿಕ್ ಲೇಖನಗಳು / ಉತ್ತಮ ಸಮುದಾಯದ ಈದ್ (ಸಹಾಬಿಗಳ ಮಾದರಿ)

ಉತ್ತಮ ಸಮುದಾಯದ ಈದ್ (ಸಹಾಬಿಗಳ ಮಾದರಿ)

ಇಸ್ಲಾಂ ಜೀವನದ ಪರಮ ಗುರಿಯನ್ನು ತಝ್ಕಿಯ ಎಂದಿದೆ. ಹೀಗೆ ಜೀವನದ ಸಕಲ ರಂಗ ಪಾವನವಾಗಿರಬೇಕು. ಇದುವೇ ಧರ್ಮದ ಉದ್ದೇಶ ಮತ್ತು ಸಾರವಾಗಿದೆ. ಇಸ್ಲಾಮ್ ತನ್ನ ಈ ತತ್ವವನ್ನು ಹಬ್ಬದಲ್ಲಿಯೂ ಕೇಂದ್ರೀಕರಿಸಿದೆ. ಪ್ರವಾದಿಯವರ(ಸ) ಪ್ರವಾದಿತ್ವಕ್ಕಿಂತ ಮುಂಚೆ ಅರೇಬಿಯಾದಲ್ಲಿ ಬಹಳಷ್ಟು ಹಬ್ಬಗಳನ್ನು ಆಚರಿಸಲಾಗುತ್ತಿತ್ತು. ಅಂತಹ ಹಬ್ಬಗಳನ್ನೂ `ಈದ್’ ಎಂದೇ ಕರೆಯಲಾಗುತ್ತಿತ್ತು. ಬಹಳಷ್ಟು ಹಬ್ಬಗಳನ್ನು ಯಹೂದಿ, ಕ್ರೈಸ್ತರೂ ಆಚರಿಸುತ್ತಿದ್ದರು. ಅವುಗಳನ್ನು `ಈದ್’ ಎಂದೇ ಕರೆಯಲಾಗುತ್ತಿತ್ತು.

ತಕ್ಬೀರ್ ಹೇಳುವುದು:
ಈದುಲ್ ಫಿತ್ರ್‍ನ ಈ ಹಬ್ಬದಲ್ಲಿ ಅಲ್ಲಾಹನ ಸ್ಮರಣೆ ಇದೆ. ಕೃತಜ್ಞತೆಯೂ ಇದೆ ಮತ್ತು ಸಂತೋಷಾ ಚರಣೆಯೂ ಇದೆ.

ಅಲ್ಲಾಹನ ಸ್ಮರಣೆಗಾಗಿ ತಕ್ಬೀರ್ ಎಂಬ ಚರ್ಯೆಯನ್ನು ಪ್ರವಾದಿಯವರು(ಸ) ಕಲಿಸಿದ್ದಾರೆ. ಈ ತಕ್ಬೀರನ್ನು ನಾವು ಬೆಳಿಗ್ಗೆ, ಸಂಜೆ ಮಾಡುತ್ತೇವೆ. ಈದ್ ನಮಾಝ್‍ಗೆ ತೆರಳುವಾಗ ಮಾಡುತ್ತೇವೆ. ನಮಾಝ್‍ನಿಂದ ಮರಳಿ ಬರುವಾಗ ಮಾಡುತ್ತೇವೆ. ಈದ್‍ನ ಖುತ್ಬಾದಲ್ಲಿ ಹೇಳುತ್ತೇವೆ. ಹೀಗೆ ವಿವಿಧ ಸಂದರ್ಭಗಳಲ್ಲಿ ಅಲ್ಲಾಹನ ಮಹಾನತೆಯನ್ನು ಕೊಂಡಾಡುತ್ತೇವೆ. ನಮ್ಮ ಸೃಷ್ಟಿಕರ್ತನಾದ ಅಲ್ಲಾಹನೇ ಮಹಾನನು. ಅಲ್ಲಾಹನಿಗಿಂತ ಮಿಗಿಲು ಯಾವುದೂ ಇಲ್ಲ ಎಂಬುದಾಗಿ ಘೋಷಣೆಯ ಮೂಲಕ ಸಾಕಾರಗೊಳಿಸು ತ್ತೇವೆ. ಅವನೇ ನಮ್ಮ ಸೃಷ್ಟಿಕರ್ತ, ಅವನೇ ನಮ್ಮ ಮಾಲಿಕ, ಎಲ್ಲ ಅನುಗ್ರಹಗಳು ಅವನಿಂದ ಲಭಿಸಿದ್ದಾಗಿವೆ. ಎಲ್ಲ ಸ್ತುತಿ ಆ ಅಲ್ಲಾಹನಿಗೆ ವಿೂಸಲು…ಹೀಗೆ ಮನುಷ್ಯರೆಲ್ಲರೂ ಆ ಸೃಷ್ಟಿಕರ್ತನ ಸೃಷ್ಟಿಗಳು..ಯಾರೂ ಮೇಲು ಕೀಳು ಅಲ್ಲ..ಯಾರೂ ಉಚ್ಚ ನೀಚತೆ ಇಲ್ಲ..ಎಲ್ಲರೂ ಆ ಭಗವಂತನ ದಾಸರು ಎಂಬುದನ್ನು ಈ ತಕ್ಬೀರ್ ಕಲಿಸುತ್ತದೆ. ಹೀಗೆ ಮನುಷ್ಯ ತನ್ನ ಜೀವನದಲ್ಲಿ ದೇವನು ನೀಡಿದ ಒಂದೊಂದು ಅನುಗ್ರಹಗಳಿಗೆ ಕಣ್ಣೋಡಿಸಿದರೆ ಆ ಪ್ರಭುವಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ ಎಂಬುದು ಅವನಿಗೆ ಭಾಸವಾಗುತ್ತದೆ. ಇದೇ ಉದ್ದೇಶಕ್ಕೆ ಎರಡು ರಕಅತ್ ನಮಾಝನ್ನು ನಮಗೆ ಆದೇಶಿಸಲಾಗಿದೆ. ಇದರಲ್ಲೂ ಸಾಮಾನ್ಯ ನಮಾಝ್‍ಗಿಂತ ಹೆಚ್ಚುವರಿ ತಕ್ಬೀರನ್ನು ಮೊಳಗಿಸುತ್ತೇವೆ.

ಕುರ್‍ಆನ್ ಹೇಳುತ್ತದೆ, ಲಿತುಕಬ್ಬಿರಲ್ಲಾಹು ಅಲಾ ಮಾ ಹದಾಕುಮ್ ಅಲ್ಲಾಹನು ನಿಮಗೆ ಕುರ್‍ಆನ್ ಎಂಬ ದೊಡ್ಡ ಹಿದಾಯತ್ ನೀಡಿದ್ದಾನೆ. ಅದ್ದರಿಂದ ನೀವು ಅಲ್ಲಾಹನ ಮಹಾನತೆಯನ್ನು ಕೊಂಡಾಡಿರಿ.” ಹೀಗೆ ಈದುಲ್ ಫಿತ್ರ್ ‘ಹಬ್ಬವು’ ಬೆಳಗ್ಗಿನಿಂದ ಸಂಜೆಯ ವರೆಗೆ ಇಡೀ ದಿನ ಇಂತಹ ಮಾರ್ಗದರ್ಶವನ್ನು ಪರಿಪೂರ್ಣ ರೂಪದಲ್ಲಿ ನೀಡುತ್ತದೆ. ಆದ್ದರಿಂದ ಈ ದಿನದಂದು ಮುಸ್ಲಿಮರು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ಶುಭ್ರ ಬಟ್ಟೆಯನ್ನು ಧರಿಸಿ ಮಸೀದಿಗೆ ತೆರಳುತ್ತಾರೆ. ಇದು ಪ್ರವಾದಿಚರ್ಯೆಯೂ ಹೌದು. ಪ್ರವಾದಿಯವರು(ಸ) ಸಾಮಾನ್ಯವಾಗಿ ಸ್ವಲ್ಪ ಖರ್ಜೂರವನ್ನು ತಿಂದು ಮಸೀದಿಗೆ ತೆರಳುತ್ತಿದ್ದರು ಮತ್ತು ಮುಸ್ಲಿಮರ ಜನಸ್ತೋಮದ ಮುಂದೆ ಅಲ್ಲಾಹನ ಮಹಾನತೆಯ ಕೊಂಡಾಡುತ್ತಿದ್ದರು. (ತಕ್ಬೀರ್ ಮೊಳಗಿಸುತ್ತಾರೆ) ಮತ್ತು ನಮಾಝಿಗೆ ನೇತೃತ್ವ ನೀಡುತ್ತಾರೆ. ನಂತರ ಖುತ್ಬಾ ನೀಡುತ್ತಾರೆ. ಖುಲಫಾಉರ್ರಾಶಿದೀನ್‍ಗಳ ಕಾಲದಲ್ಲೂ ಇದೇ ಚರ್ಯೆಯಿತ್ತು. ಈಗಲೂ ಅದೇ ಇದೆ.

ಸಂತೋಷ ಪ್ರಕಟ:
ಈದ್ ಸಂತೋಷಾಚಾರಣೆಯೂ ಹೌದು. ಇಸ್ಲಾಮ್ ಪ್ರಕೃತಿ ಧರ್ಮವಾಗಿದೆ. ಆದ್ದರಿಂದ ಅಲ್ಲಾಹನ ಮೇರೆ ಯೊಳಗಿದ್ದು ವಿನೋದವನ್ನು ಹೊಂದಲು ಪ್ರವಾದಿ(ಸ) ಅನುಮತಿಸಿದ್ದಾರೆ. ಆಯಿಷಾರ(ರ) ಮನೆಯಲ್ಲಿ ಅವರ ಸ್ನೇಹಿತೆಯರಾದ ಅನ್ಸಾರ್ ಹುಡುಗಿಯರು ಹಾಡನ್ನು ಹಾಡುತ್ತಿದ್ದರು. ದಫ್ ಗಳನ್ನು ಬಾರಿಸುತ್ತಿದ್ದರು. ಪ್ರವಾದಿಯವರು(ಸ) ಈ ಹಾಡುಗಳನ್ನು ಕೇಳುತ್ತಿದ್ದರು. ಅಬೂಬಕರ್(ರ) ಆ ಹುಡುಗಿಯರನ್ನು ಆಕ್ಷೇಪಿಸಿದಾಗ ಪ್ರವಾದಿಯವರು(ಸ) ಹೇಳಿದರು, ಅಬೂಬಕರ್ ಇವರಿಗೆ ಏನು ಹೇಳದಿರಿ ಎಲ್ಲ ಸಮುದಾಯಕ್ಕೆ ಒಂದು ಹಬ್ಬವಿದೆ. ಸಂತೋಷ ದಿನವಿರುತ್ತದೆ. ಇದು ನಮ್ಮ ಹಬ್ಬ ದಿನವಾಗಿದೆ -ಬುಖಾರಿ. ಪ್ರವಾದಿ ಸ ಆಯಿಶಾ ರ ರಿಗೆ ಇತಿಯೋಪಿಯಾದ ಕವಾಯತನ್ನು ತೋರಿಸಿದ್ದರು. ಅವರು ಈ ಕವಾಯತನ್ನು ತಮ್ಮ ಸಾಂಪ್ರದಾಯಿಕ ರೀತಿಯಲ್ಲಿ ಮದೀನದ ಮಸೀದಿಯಲ್ಲಿ ಮಾಡುತ್ತಿದ್ದರು. ಉಮರ್(ರ) ಅವರನ್ನು ತಡೆದರು. ಪ್ರವಾದಿಯವರು(ಸ) ಹೇಳಿದರು, “ಓ ಉಮರ್ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿರಿ, ಯಹೂದಿಗಳು ತಿಳಿಯಲಿ, ನಮ್ಮ ಧರ್ಮವೂ ಸಂಚುಕಿತವಲ್ಲ ವೈಶಾಲ್ಯತೆಯನ್ನು ಹೊಂದಿದೆ – ಮಸ್ನದ್, ಹಾಗೂ ಧರ್ಮವು ಬಹಳ ಸರಳವಾಗಿದೆ ಎಂದು ಹೇಳಿದರು.

ಆದ್ದರಿಂದ ದಿನವಿಡೀ ಸ್ನೇಹಿತರೊಂದಿಗೆ ಅಥವಾ ಮನೆಯಲ್ಲೇ ಕಳೆಯುವ ಪುರುಷರು ಈದ್‍ನಂದು ಮಹಿಳೆಯರಿಗೆ ಸಹಾಯ ಮಾಡಬೇಕು. ಮತ್ತು ಪತ್ನಿ-ಮಕ್ಕಳನ್ನು ವಿಹಾರಕ್ಕೆ ಕರೆದುಕೊಂಡು ಹೋಗಬೇಕು. ಈ ಎಲ್ಲ ಸಂದರ್ಭದಲ್ಲಿ ಇಸ್ಲಾಮ್ ಕಲಿಸಿರುವ ಮೇರೆಗಳನ್ನು ಗಮನದಲ್ಲಿಡಬೇಕು. ನಿರಂತರ ಒಂದು ತಿಂಗಳ ತರಬೇತಿ ಪಡೆದ ಈ ಸಮುದಾಯ, ತನ್ನಲ್ಲಿ ದೇವಭಯವನ್ನು ಉಂಟು ಮಾಡಿದ ಸಮುದಾಯ ಎಂಬುದನ್ನು ಜಗತ್ತಿಗೆ, ದೇಶಬಾಂಧವ ಸಹೋದರರಿಗೆ ವ್ಯಕ್ತಪಡಿಸಬೇಕು. ಆ ಮೂಲಕ ಒಂದು ಉತ್ತಮ ಸಮುದಾಯ ಹೇಗೆ ತರಬೇತಿಯನ್ನು ಪಡೆಯಿತು ಮತ್ತು ಹೇಗೆ ಹಬ್ಬವನ್ನು ಆಚರಿಸುತ್ತದೆ ಮತ್ತು ಅದರ ಶಿಷ್ಟಾಚಾರ ಎಷ್ಟೊಂದು ಉತ್ತಮ ಎಂಬುದನ್ನು ಮನಗಾಣಬೇಕು. ಎಲ್ಲರಿಗೂ ಈದ್‍ನ ಶುಭಾಶಯಗಳು.

-ಅಬೂಕುತುಬ್

Check Also

ನಾನೆಂದಿಗೂ ಅನ್ಯಪುರುಷರನ್ನು ನೋಡಿಲ್ಲ-ಪ್ರವಾದಿ ಪುತ್ರಿಯ ಅಂತಿಮ ಇಚ್ಛೆ

ಪ್ರವಾದಿ ಮುಹಮ್ಮದ್(ಸ.ಅ)ರವರ ಪ್ರೀತಿಯ ಮಗಳು ಹಾಗೂ ಹಝ್ರತ್ ಅಲಿ(ರ.ಅ)ರವರ ಪ್ರೀತಿಯ ಮಡದಿಯಾಗಿದ್ದಾರೆ ಪ್ರಪಂಚದ ಸರ್ವ ಸ್ರೀಯರಿಗೂ ಮಾದರಿಯಾದ ಮಹಿಳಾಮಣಿ ಫಾತಿಮಾ …

Leave a Reply

Your email address will not be published. Required fields are marked *