Friday , November 15 2019
Breaking News
Home / ಅಂತಾರಾಷ್ಟ್ರೀಯ / ಈಜಿಪ್ಟ್ ಮಾಜಿ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ನಿಧನ

ಈಜಿಪ್ಟ್ ಮಾಜಿ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ನಿಧನ

ಸಂದೇಶ ಇ-ಮ್ಯಾಗಝಿನ್: ಈಜಿಪ್ಟಿನ ಮಾಜಿ ಅಧ್ಯಕ್ಷ ಮೊಹಮ್ಮದ್ ಮೊರ್ಸಿಯವರು ಸೋಮವಾರ ನಿಧನರಾಗಿದ್ದಾರೆ. ಸೋಮವಾರ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದ ಮೊರ್ಸಿ ನ್ಯಾಯಾಧೀಶರ ಮುಂದೆ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದರು. ಬಳಿಕ ಅವರನ್ನು ಕೈರೋದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಅವರು ಮೃತಪಟ್ಟಿದ್ದಾಗಿ ಘೋಷಿಸಲಾಯಿತು. ತಮ್ಮ ವಿರುದ್ಧದ ಕೋರ್ಟ್ ಮಾರ್ಷಲ್‌ಗೆ ಹಾಜರಾಗಿದ್ದ ಮೊರ್ಸಿ ಕುಸಿದು ಬೀಳುವ ಮುನ್ನ 20 ನಿಮಿಷ ನ್ಯಾಯಾಧೀಶರೊಂದಿಗೆ ಸುಧೀರ್ಘವಾಗಿ ಮಾತನಾಡಿದ್ದರು. ಈಜಿಪ್ಟಿನ ಇತಿಹಾಸದಲ್ಲೇ ಮೊದಲ ಬಾರಿಗೆ ಲೋಕತಾಂತ್ರಿಕವಾಗಿ ಚುನಾಯಿತರಾಗಿದ್ದ ಅಧ್ಯಕ್ಷರಾಗಿದ್ದ ಮೊಹಮ್ಮದ್ ಮೊರ್ಸಿ 2011 ರಲ್ಲಿ ಅಧಿಕಾರಕ್ಕೆ ಬಂದು ಆ ಬಳಿಕ 2013 ರಲ್ಲಿ ಅವರನ್ನು ಪದಚ್ಯುತಿ ಗೊಳಿಸಿ ಅವರನ್ನೂ ಸೇರಿದಂತೆ ಹಲವಾರು ಬ್ರದರ್ ಹುಡ್ ಮುಖಂಡರಿಗೆ ಗಲ್ಲು ಶಿಕ್ಷೆ ಘೋಷಿಸಲಾಗಿತ್ತು.

ಈಜಿಪ್ಟ್ ಮಾಜಿ ಅಧ್ಯಕ್ಷರ ಮರಣಕ್ಕೆ ತೀವ್ರ ಸಂತಾಪ ಸೂಚಿಸಿರುವ ಟರ್ಕಿ ಅಧ್ಯಕ್ಷ ರಸೆಪ್ ತೈಯ್ಯಿಬ್ ಎರ್ದೋಗಾನ್ ‘ಅಲ್ಪಾವಧಿಗೆ ಈಜಿಪ್ಟ್ ಅಧ್ಯಕ್ಷರಾಗಿದ್ದರೂ ಕೂಡ ಅವರು ನನ್ನ ಆಪ್ತ ಮಿತ್ರರಾಗಿದ್ದರು ಎಂದಿರುವ ಎರ್ದೋಗಾನ್ ಮೊರ್ಸಿಯವರನ್ನು ‘ಹುತಾತ್ಮ’ ಎಂದು ಕರೆದಿದ್ದಾರೆ.

Check Also

ಸೌದಿ ರಾಜಕುಮಾರಿಯ ವಿರುದ್ಧ ಫ್ರಾನ್ಸ್ ನಲ್ಲಿ ಮೊಕದ್ದಮೆ-ಕಾರಣವೇನು ನೋಡಿ

ಸಂದೇಶ ಇ-ಮ್ಯಾಗಝಿನ್: ಸೌದಿ ಅರೇಬಿಯಾದ ದೊರೆ ಸಲ್ಮಾನ್ ಅವರ ಏಕೈಕ ಪುತ್ರಿ ರಾಜಕುಮಾರಿ ಹಸ್ಸಾ ಬಿಂತ್ ಸಲ್ಮಾನ್ ಅವರ ವಿರುದ್ಧ …

Leave a Reply

Your email address will not be published. Required fields are marked *