Tuesday , July 23 2019
Breaking News
Home / ಸಂಪಾದಕೀಯ / ತ್ರಿವಳಿ ತಲಾಕ್‌ಗೆ ಕಾನೂನು ಮಾಡುವ ಸರಕಾರ ಗಂಜಿಮಠದ ಸಮೀರ್‌ಗೆ ನ್ಯಾಯ ಕೊಡಿಸಲಿ

ತ್ರಿವಳಿ ತಲಾಕ್‌ಗೆ ಕಾನೂನು ಮಾಡುವ ಸರಕಾರ ಗಂಜಿಮಠದ ಸಮೀರ್‌ಗೆ ನ್ಯಾಯ ಕೊಡಿಸಲಿ

ಗಂಜಿಮಠದ ಸಮೀರ್ ಅವರಿಗಾದ ಕ್ರೂರ ಅನ್ಯಾಯದಿಂದ “ಮೋಸ ಹೆಣ್ಣು ಮತ್ತು ಗಂಡು ಎರಡೂ ಕಡೆಯಿಂದಲೂ ಸಂಭವಿಸಬಹುದು” ಎಂಬ ವಿಷಯವಂತೂ ಎಲ್ಲರಿಗೂ ಅರ್ಥವಾಗಿರಬಹುದು. ನಮ್ಮ ಸರಕಾರ ತ್ರಿವಳಿ ತಲಾಖ್‌ಗೆ ಕಾನೂನು ಮಾಡುತ್ತಿದೆ. ತಲಾಖ್ ಅನ್ನು ದೂರುತ್ತಿದೆ. ಆದರೆ ಇಂತಹ ಪ್ರಕರಣವನ್ನು ಇತ್ಯರ್ಥ ಮಾಡಲು ಯಾವ ಕಾನೂನು ಮಾಡಬಹುದು.

ಇಷ್ಟವಿಲ್ಲದೆ ದಾಂಪತ್ಯವು ದ್ವೇಷಕ್ಕೆ ಕಾರಣವಾಗುತ್ತದೆ ಎಂಬುದಕ್ಕಾಗಿಯೇ ಇಸ್ಲಾಮ್ ತಲಾಖ್ ಮತ್ತು ಕುಲ ಎಂಬ ಎರಡು ಅವಕಾಶವನ್ನು ದಂಪತಿಗಳಿಗೆ ನೀಡಿರುವುದು. ಆದರೆ ಸಮೀರ್ ಪ್ರಕರಣದಲ್ಲಿ ಆತನ ಪತ್ನಿ ಫಿರ್ದೌಸ್ ಕನಿಷ್ಟ ಪಕ್ಷ ಕುಲವನ್ನಾದರೂ ಬಳಸಿ ತನಗೆ ಬೇಕಾದ ದಾರಿಯನ್ನು ಹಿಡಿಯಬಹುದಾಗಿತ್ತು. ಅಯ್ಯೋ…ಅನ್ಯಾಯವಾಗಿ ಒಂದು ಜೀವವನ್ನು ಕೊಂದು ಬಿಟ್ಟರಲ್ಲ ಕ್ರೂರಿಗಳು.

ಸಮೀರ್‌ ಭಾವಿಸಿದ್ದು ಆತನದ್ದು ಸುಂದರ ಸಂಸಾರ ಎಂದಾಗಿತ್ತು. ಆತನಿಗೆ ತನ್ನ ಹಿಂದೆ ಮಲಸತ್ತು ನಡೆಯುತ್ತಿರುವ ಬಗ್ಗೆ ಮಾಹಿತಿ ಇಲ್ಲದೆ ಇರಬಹುದು. ಇಂತಹ ಹಲವು ಅನ್ಯಾಯಗಳು ದ್ರೋಹಗಳು ಈ ದೇಶದಲ್ಲಿ ಮಹಿಳೆಯರಿಂದ ಆಗಿದೆ. ಗಲ್ಫ್‌ನಲ್ಲಿ ತಮ್ಮ ಸಂಸಾರವು ಸುಖವಾಗಿರಲಿ ಎಂದು ರಕ್ತ ಬಸಿದು ದುಡಿಯುವ ಶ್ರಮಿಕ ಪ್ರವಾಸಿಗಳ ಊರಿನಲ್ಲಿರುವ ಮಡದಿಯರು ಅಕ್ರಮ ಸಂಬಂಧವಿಟ್ಟು ಮೋಸ ಮಾಡಿದ ಪ್ರಕರಣ ಅದೆಷ್ಟೋ ಇದೆ. ಇಂತಹ ಪ್ರಕರಣಗಳಲ್ಲಿ ಯಾವುದಾದರೂ ಸಂಘಟನೆ ಅಥವಾ ಸರಕಾರ ನ್ಯಾಯ ನೀಡಲು ಮುಂದಾಗಿದಾ..? ಖಂಡಿತಾ ಇಲ್ಲ..

ಮಹಿಳೆಯರು ಅನಾದಿಕಾಲದಿಂದಲೂ ದಮನಿತರು ಎಂಬ ಒಂದೇ ಕಾರಣವಿಟ್ಟು ಮಹಿಳೆಯರ ಮೇಲೆ ನಡೆಯುವ ಕ್ರೌರ್ಯಕ್ಕೆ ಸರಕಾರ ಕಠಿಣ ಕಾನೂನು ಜಾರಿಗೆ ತರುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಇಂತಹ ಕಾನೂನು ದುರ್ಬಳಕೆ ಯಾಗುವುದೇ ಹೆಚ್ಚು. ಇತ್ತೀಚೆಗೆ ಕೇಂದ್ರ ಸರಕಾರ ಸುಗ್ರೀವಾಜ್ಞೆಯ ಮೂಲಕ ಸಂಸತ್ತಿನಲ್ಲಿ ಮಂಡಿಸಿ ರಾಷ್ಟ್ರಪತಿಯವರಿಂದ ಅಂಕಿತ ಪಡೆದ ತ್ರಿವಳಿ ತಲಾಖ್ ಕಾನೂನು ಕೂಡ ಅಷ್ಟೆ… ಸುಳ್ಳು ಪ್ರಕರಣಗಳನ್ನು ದಾಖಲಿಸಿ ದ್ವೇಷದಿಂದ ಪುರುಷರನ್ನು ಜೈಲಿಗಟ್ಟುವ ಸಾಧ್ಯತೆಯೇ ಹೆಚ್ಚು. ಕಾನೂನು ಮಾಡಿದವರ ಉದ್ದೇಶವೂ ಅದೇ ಇರಬಹುದು.

ಗಂಜಿಮಠದ ಸಮೀರ್ ಪ್ರಕರಣದಲ್ಲಿ ಆತನ ಪತ್ನಿಯ ಕಡೆಯಿಂದ ಅನ್ಯಾಯ ನಡೆದಿರುವುದರಿಂದ ಈ ಪ್ರಕರಣ ಆಕೆ ಹೆಣ್ಣು ಎಂಬ ಕಾರಣಕ್ಕೆ ದುರ್ಬಲವಾಗಲೂ ಬಹುದು. ಅಥವಾ ವರದಕ್ಷಿಣೆ ಕಾನೂನುಗಳೆಲ್ಲ ಕಠಿಣವಾಗಿರುವ ಕಾರಣ ಅಂತಹ ಕಾರಣಗಳನ್ನು ಹುಡುಕಿ ಆಕೆ ಪಾರಾಗಲೂ ಬಹುದು. ಇಸ್ಲಾಮಿನಲ್ಲಿ ಮಾನ್ಯತೆಯೇ ಇಲ್ಲದ ವೇಗದ ತ್ರಿವಳಿ ತಲಾಖ್ ಎಂಬುದಕ್ಕೆ ಕಠಿಣ ಕಾನೂನು ಮಾಡುವ ಸರಕಾರ ಸಮೀರ್‌‍ನಂತಹ ದಾಂಪತ್ಯದ ಹೆಸರಲ್ಲಿ ಮೋಸ ಹೋದ ಪುರುಷರಿಗೂ ಸಹ ನ್ಯಾಯ ದೊರಕಿಸಿಕೊಡಲು ಕಾನೂನು ಮಾಡಲಿ. ಹೆಣ್ಣಾಗಲಿ ಗಂಡಾಗಲಿ ಅನ್ಯಾಯ ಯಾರು ಮಾಡಿದರೂ ಅನ್ಯಾಯವೇ ತಾನೇ..?

Check Also

ಕಾಂಗ್ರೇಸಿಗರೇ ಜನರ ಆಯ್ಕೆಗೆ ಮನ್ನಣೆ ನೀಡಿ

002ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಅಂತೂ ಮುಗಿದಿದೆ. ಈಗ ಏನಿದ್ದರೂ ಫಲಿತಾಂಶದ ಮೇಲೆ ಎಲ್ಲರ ಚಿತ್ತ. ಗೆಲ್ಲುವ ಮುನ್ನವೇ ಮುಂದಿನ …

Leave a Reply

Your email address will not be published. Required fields are marked *