Tuesday , July 23 2019
Breaking News
Home / ಸಂಪಾದಕೀಯ / ಭಾರತ್ ಬಂದ್‌ನಲ್ಲಿ ಬೆತ್ತಲಾದ ದೇಶ ಪ್ರೇಮ!

ಭಾರತ್ ಬಂದ್‌ನಲ್ಲಿ ಬೆತ್ತಲಾದ ದೇಶ ಪ್ರೇಮ!

ಹಿಂದೆಂದೂ ಜನರಿಗೆ ಅನ್ಯಾಯವಾದಾಗ ಭಾರತ್ ಬಂದ್‌ಗೆ ಕರೆಕೊಟ್ಟರೆ ಅದನ್ನು ವಿರೋಧಿಸಿ ಸಮರ್ಥಿಸುವಷ್ಟು ಸಂವೇದನಾ ರಹಿತರಾಗಿರಲಿಲ್ಲ ಭಾರತೀಯರು. ಆದರೆ ಇತ್ತೀಚಿನ ದಿನಗಳಲ್ಲಿ ಅದನ್ನೂ ನೋಡುವಂತಾಗಿದೆ. ಬಂದ್ ಒಳ್ಳೆಯದಲ್ಲ ಸರಿ…ಆದರೆ ಸರಕಾರ ತನ್ನಿಷ್ಟದಂತೆ ಅಗತ್ಯವಸ್ತುಗಳ ಬೆಲೆ ಏರಿಸುತ್ತಾ ಹೋದಾಗ ಜನ ಸಾಮಾನ್ಯರ ಬಳಿ ಸರಕಾರದ ವಿರುದ್ಧ ಪ್ರತಿಭಟಿಸುವ ಬೇರೆ ಯಾವುದೇ ಮಾರ್ಗವಿಲ್ಲ ಅಲ್ಲವೇ… ಕಳೆದ ಮೂವತ್ತು ದಿನಗಳ ಅಂತರದಲ್ಲಿ ಸುಮಾರು ಎಂಟಕ್ಕಿಂತಲೂ ಹೆಚ್ಚು ಬಾರಿ ತೈಲ ಬೆಲೆಯನ್ನು ಸರಕಾರ ಏರಿಸಿದೆ. ಅದರ ವಿರುದ್ಧ ಜನರು ಪ್ರತಿಭಟಿಸೋದು ತಪ್ಪಾ? ಖಂಡಿತಾ ತಪ್ಪಾಗಲಾರದು. ಆದರೂ ಸರಕಾರ ನಡೆಸುತ್ತಿರುವ ಪಕ್ಷದ ಸಮರ್ಥಕರಿಗೆ ಈ ಬಂದ್ ಪಥ್ಯವಾಗುತ್ತಿಲ್ಲ. ಈಗ ಬಂದ್ ಆಚರಿಸುತ್ತಿರುವವರು ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ದೇಶ ದ್ರೋಹಿಗಳಾಗಿ ಕಾಣುತ್ತಿದ್ದಾರೆ.

ಇಂತಹ ಮನಸ್ಥಿತಿ ತುಂಬಾ ಘೋರವಾದುದು. ಹಿಟ್ಲರ್ ಮಾದರಿಯ ಆಡಳಿತಕ್ಕೆ ಇದು ನಾಂದಿಯಾಗಬಹುದು. ಹಾಗಂತ ಹಿಂದಿನ ಯುಪಿಎ ಸರಕಾರ ಇದ್ದಾಗಲೂ ಕೂಡ ಬೆಲೆ ಏರಿಕೆ ಯಾದಾಗ ಸರಕಾರದ ವಿರುದ್ಧ ಪ್ರತಿಭಟನೆ ಆಗಿತ್ತು. ಭಾರತ್ ಬಂದ್ ಕೂಡ ಆಗಿತ್ತು. ಆಗೆಲ್ಲ ಅದಕ್ಕೆ ನೇತೃತ್ವ ಕೊಡುತ್ತಿದ್ದ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಇವತ್ತು ತಮ್ಮದೇ ಪಕ್ಷ ಅಧಿಕಾರದಲ್ಲಿದೆ ಎಂಬ ಕಾರಣಕ್ಕೆ ಜನರಿಗೆ ಆದ ಅನ್ಯಾಯದ ವಿರುದ್ಧ ಪ್ರತಿಭಟಿಸುವುದಕ್ಕೆ ಅವಕಾಶ ನಿರಾಕರಿಸುತ್ತಿದ್ದಾರೆ. ಕೆಲವು ವರ್ತಕರು ಸೆಪ್ಟಂಬರ್ 10ರ ಬಂದ್‌ಗೆ ನಮ್ಮ ಬೆಂಬಲವಿಲ್ಲ. ಒಂದು ಗಂಟೆ ಹೆಚ್ಚುವರಿ ಕೆಲಸ ಮಾಅಡುತ್ತೇವೆ ಎಂದು ನಾಮಫಲಕ ಹಾಕಿದ್ದಾರೆ. ಇದು ದೇಶ ಪ್ರೇಮವೇ ಅಥವಾ ಪಕ್ಷ ಪ್ರೇಮವೇ ಎಂಬುದು ಈಗ ಮನದಟ್ಟಾಗುತ್ತಿದೆ.

ಕಚ್ಚಾತೈಲ ಬೆಲೆ ನಿರ್ಧಾರವಾಗುವುದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಾಗಿದೆ ಆದರೂ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರವಿದ್ದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಗಗನಕ್ಕೇರಿತ್ತು. ಆಗ ಭಾರತದಲ್ಲಿ 82ರೂ ಗೆ ಒಂದು ಲೀಟರ್ ಮಾರುವ ಪರಿಸ್ಥಿತಿ ಬಂದಿತ್ತು. ಆಗ ಪ್ರತಿಭಟನೆಯೂ ಆಗಿತ್ತು. ಆದರೆ ಇವತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿದಿದೆ. ತೈಲ ಉತ್ಪಾದಿಸುವಂತಹ ದೇಶಗಳು ದಿವಾಳಿ ಎದ್ದು ಹೋಗುವ ಪರಿಸ್ಥಿತಿಗೆ ತಲುಪಿದೆ. ಆದರೆ ಈಗ ಯಾವ ಕಾರಣಕ್ಕೆ ಭಾರತಲ್ಲಿ ಒಂದು ಲೀಟರ್‌ಗೆ 82ರೂ ವಸೂಲಿ ಮಾಡುತ್ತಾರೋ ಗೊತ್ತಿಲ್ಲ. ಇದರ ಹಿಂದೆ ಆಯಿಲ್ ಕಂಪೆನಿ ಮಾಫಿಯಾಗಳ ಕೈವಾಡವಿರಬಹದು ಎಂಬ ಶಂಕೆ ಜನರದ್ದು, ಸಬ್ಸಿಡಿ ಸಹಿತ ಅಡುಗೆ ಅನಿಲದ ಬೆಲೆ ಕೂಡ ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 300ರೂ ನಷ್ಟು ಹೆಚ್ಚಾಗಿದೆ. ಜನರೇ ಆರಿಸಿದ ಸರಕಾರದ ವಿರುದ್ಧ ಪ್ರತಿಭಟಿಸುವ ಹಕ್ಕು ಜನರಿಗಿದೆ.

Check Also

ಕಾಂಗ್ರೇಸಿಗರೇ ಜನರ ಆಯ್ಕೆಗೆ ಮನ್ನಣೆ ನೀಡಿ

002ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಅಂತೂ ಮುಗಿದಿದೆ. ಈಗ ಏನಿದ್ದರೂ ಫಲಿತಾಂಶದ ಮೇಲೆ ಎಲ್ಲರ ಚಿತ್ತ. ಗೆಲ್ಲುವ ಮುನ್ನವೇ ಮುಂದಿನ …

Leave a Reply

Your email address will not be published. Required fields are marked *