Tuesday , July 23 2019
Breaking News
Home / ಸಂಪಾದಕೀಯ / ಪ್ರತಾಪ ಸಿಂಹ ಅತ್ತಾಗ!

ಪ್ರತಾಪ ಸಿಂಹ ಅತ್ತಾಗ!

ಹೌದು! ನಿನ್ನೆ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದಾಗ ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಅವರು ಬಿಕ್ಕಿ ಬಿಕ್ಕಿ ಅತ್ಬಿಟ್ರು! ಒಂದೊಂಮ್ಮೆ ಇವರು ಟಿಯರ್ ಗ್ಯಾಸ್ ಹೊಡೆದು ಲಾಠಿಜಾರ್ಜ್ ಮಾಡುವ ಹಾಗೆ ಮಾಡ್ಬಿಟ್ಟು ಬಡವರನ್ನು ಅಳಿಸುವ ಪ್ಲಾನ್ ಮಾಡಿದ್ರು ಆದ್ರೆ ಇವತ್ತು ಇವರಿಗೆ ನೋವಾಗಿದೆ ಅಂತೆ ಅದಕ್ಕೆ ಅತ್ತಿದ್ದಾರೆ.

ಸಾಮಾನ್ಯವಾಗಿ ನೋಡುವಾಗ ಈ ಪ್ರತಾಪ್ ಸಿಂಹ ಅವರು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದ ಅಂತ ಅನಿಸುವುದೇ ಇಲ್ಲ. ಅದು ಅವರ ಮಿಸ್ಟೇಕಾ ಅಥವಾ ಅವರ ಪಕ್ಷದ ಮಿಸ್ಟೇಕಾ ಅಂತ ಗೊತ್ತಿಲ್ಲ. ಮೊನ್ನೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದಾಗ “ಇನ್ನು ಕಾರ್ಯಕರ್ತರನ್ನು ಮುಟ್ಟಿದರೆ ಜೋಕೆ!” ಅಂತ ಟ್ವೀಟ್ ಮಾಡ್ತಾರೆ. ಕಳೆದ ವರ್ಷ ವೈರಲ್ ಆದ ಒಂದು ವೀಡಿಯೋದಲ್ಲಿ “ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ರಾಜ್ಯದಲ್ಲಿ ಗಲಾಟೆ ಮಾಡಕ್ಕೆ ಹೇಳಿದ್ದಾರೆ. ಅದಕ್ಕೆ ಇನ್ನು ಮುಂದೆ ನಾವು ಟಿಯರ್ ಗ್ಯಾಸ್, ಲಾಠಿ ಚಾರ್ಜ್ ಆಗೋ ರೀತಿಯಲ್ಲಿ ಗಲಾಟೆ ಎಬ್ಬಿಸುತ್ತೇವೆ” ಅಂತ ಹೇಳಿದ್ರು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಕಿಡಿಗೇಡಿಗಳ ಹಾಗೆ ಮಾತಾಡಬಾರದು ಮತ್ತು ವರ್ತಿಸಬಾರದು. ಅದು ಆ ಸ್ಥಾನದ ಗೌರವವನ್ನು ಕಡಿಮೆ ಮಾಡುತ್ತದೆ.

ಇನ್ನು ನೆನ್ನೆಯ ವೀಡಿಯೋದಲ್ಲಿ ಪ್ರತಾಪ ಸಿಂಹ ಹೇಳಿದ ಹಾಗೆ ಯಡಿಯೂರಪ್ಪನವರಂತಹ ರಾಜಕಾರಣಿಗಳು ಕರ್ನಾಟಕದಲ್ಲಿ ಇಲ್ಲ ಎಂದಿರುವುದು ಶುದ್ಧ ಸುಳ್ಳು. ಹೌದು ಖಂಡಿತಾ ಸುಳ್ಳು. ಆದ್ರೆ ಯಡಿಯೂರಪ್ಪನವರಂತಹ ರಾಜಕಾರಣಿಗಳು ಬಿಜೆಪಿಯಲ್ಲಿ ಇಲ್ಲ ಎನ್ನುವ ಮಾತನ್ನು ಒಂದು ಹಂತದಲ್ಲಿ ಒಪ್ಪಿಕೊಳ್ಳಬೇಕಾಗುತ್ತದೆ. ಯಾಕಂದ್ರೆ ಯಡಿಯೂರಪ್ಪನವರು ಭ್ರಷ್ಟರಿದ್ದಾರೆ ಹೌದು. ಆದರೆ ಇತರ ಬಿಜೆಪಿ ನಾಯಕರ ಹಾಗೆ ಕೋಮುವಾದಿ ಅಲ್ಲ. ಜನಾಂಗೀಯ ದ್ವೇಷಿಯೂ ಅಲ್ಲ. ಅವರು ಮಾತನಾಡುವಾಗ ಯಾವತ್ತೂ ಹಿಂದೂ -ಮುಸ್ಲಿಮರನ್ನು ಎತ್ತಿಕಟ್ಟುವ ಕೆಲಸ ಮಾಡಿಲ್ಲ. ನಿನ್ನೆ ಅವರು ಸದನದಲ್ಲಿ ಮಾಡಿದ ವಿದಾಯ ಭಾಷಣದಲ್ಲೂ ಹಿಂದೂ ಮುಸ್ಲಿಮ್ ರಾಜಕೀಯದ ಮಾತಾಡಿಲ್ಲ. ಅವರು ರೈತರ ಬಗ್ಗೆ ಮಾತಾಡಿದ್ದಾರೆ. ಅಭಿವೃದ್ಧಿಯ ಬಗ್ಗೆ ಮಾತಾಡಿದ್ದಾರೆ. ಅವರ ಈ ಗುಣ ಪಕ್ಷ ಭೇದ ಮರೆತು ಎಲ್ಲರೂ ಒಪ್ಪಿಕೊಳ್ಳುವಂತಹದ್ದು. ಇದೇ ಜಾಗದಲ್ಲಿ ಪ್ರತಾಪ ಸಿಂಹ ಅಥವಾ ಅನಂತ್ ಕುಮಾರ್ ಹೆಗಡೆ ಅಥವಾ ಸ್ವತಃ ಮೋದಿಯೇ ಇದ್ದಿದ್ರೆ ನನ್ನ ರಾಜಿನಾಮೆ ಹಿಂದೂಗಳ ಸೋಲು ಮುಸ್ಲಿಮರ ಗೆಲುವು ಅಂತ ಹೇಳ್ಬಿಡ್ತಿದ್ರು.

ಇನ್ನು ಯಡಿಯೂರಪ್ಪನವರಂತಹ ಭ್ರಷ್ಟ ರಾಜಕಾರಣಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರೊಂದಿಗೆ ಹೋಲಿಕೆ ಮಾಡುವುದು ಅಕ್ಷಮ್ಯ ಅಪರಾಧ. ಇಂತಹ ಮಾತು ಪ್ರತಾಪ ಸಿಂಹ ನಂತಹವರಿಂದ ಮಾತ್ರ ನಿರೀಕ್ಷೆ ಮಾಡಬಹುದು. ನಿನ್ನೆ ಯಡಿಯೂರಪ್ಪ ರಾಜ್ಯದ ಬಗ್ಗೆ ಏನೇನೋ ಕನಸು ಕಂಡಿದ್ದೆ ಎಲ್ಲ ನುಚ್ಚು ನೂರಾಗೋಯ್ತು ಅಂದ್ರಲ್ಲ. ಇವರಿಗೆ ಮೂರು ವರ್ಷ ಸಿಕ್ಕಾಗ ಏನು ಮಾಡಿದ್ದಾರೆ? ಗಣಿ ಧನಿಗಳನ್ನು ಬೆಳೆಸಿದ್ದಾರೆ. ಆಪರೇಷನ್ ಕಮಲ ಮಾಡಿದ್ದಾರೆ. ಬಿಡಿಎ ಸೈಟ್‌ಗಳನ್ನು ಡೀನೋಟಿಫಿಕೇಷನ್ ಮಾಡಿದ್ದಾರೆ. ಜೈಲಿಗೂಗಿದ್ದಾರೆ. ಅಷ್ಟೇ ಅಲ್ವ..? ಅಲ್ಲ ಇನ್ನೂ ಏನಾದ್ರೂ ಇದೆಯಾ?

ಆದ್ರೆ ಸಿದ್ಧರಾಮಯ್ಯನವರು ಐದು ವರ್ಷದ ಸುಭದ್ರ ಸರಕಾರ ನೀಡಿದ್ರು. ಬಿಜೆಪಿಯವರ ಕೆಟ್ಟ ಆಡಿಳಿತದಿಂದಾಗಿ ಅಭಿವೃದ್ಧಿ ಕಾಣದೆ ಬಡವಾದ ರಾಜ್ಯವನ್ನು ದೇಶದಲ್ಲೇ ನಂಬರ್ ವನ್ ರಾಜ್ಯ ಮಾಡಿದ್ರು. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ರು. ಹಲವಾರು ಜನಪರ ಅದರಲ್ಲೂ ಮುಖ್ಯವಾಗಿ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಅಂತಹ ಹಸಿದವರ ಪರ ಯೋಜನೆ ಜಾರಿಗೆ ತಂದ್ರು. ಇಂತಹ ವ್ಯಕ್ತಿಯನ್ನು ಒಬ್ಬ ಭ್ರಷ್ಟಾಚಾರಿ ಜೈಲಿಗೆ ಹೋದ ವ್ಯಕ್ತಿಯೊಂದಿಗೆ ಹೋಲಿಸಬಹುದೇ ಪ್ರತಾಪಸಿಂಹ ಅವರೇ..? ಇದು ತಪ್ಪಲ್ವೇ..?

ನಾನು ಕಾಂಗ್ರೇಸ್ ಪಕ್ಷವನ್ನು ವೈಯುಕ್ತಿವಾಗಿ ಇಷ್ಟಪಡುವವನಲ್ಲ. ಆದ್ರೂ ಸಿದ್ಧರಾಮಯ್ಯ ಅಂದ್ರೆ ನನಗೂ ಇಷ್ಟ. ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ ಬೇಸರವಾಗಿತ್ತು. ಆದ್ರೆ ಒಬ್ಬ ಭ್ರಷ್ಟಾಚಾರಿಗಾಗಿ ಅಳುವ ನಿಮ್ಮನ್ನು ನೋಡಿ ನನಗೆ ಆಶ್ಚರ್ಯವಾಯ್ತು.

ಬೇಜಾರ್ ಅಕ್ಡಾ..

Posted by Kemmai Rauf on Saturday, 19 May 2018

Check Also

ಕಾಂಗ್ರೇಸಿಗರೇ ಜನರ ಆಯ್ಕೆಗೆ ಮನ್ನಣೆ ನೀಡಿ

002ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಅಂತೂ ಮುಗಿದಿದೆ. ಈಗ ಏನಿದ್ದರೂ ಫಲಿತಾಂಶದ ಮೇಲೆ ಎಲ್ಲರ ಚಿತ್ತ. ಗೆಲ್ಲುವ ಮುನ್ನವೇ ಮುಂದಿನ …

Leave a Reply

Your email address will not be published. Required fields are marked *