Tuesday , July 23 2019
Breaking News
Home / ಸಂಪಾದಕೀಯ / ಕಾಂಗ್ರೇಸಿಗರೇ ಜನರ ಆಯ್ಕೆಗೆ ಮನ್ನಣೆ ನೀಡಿ

ಕಾಂಗ್ರೇಸಿಗರೇ ಜನರ ಆಯ್ಕೆಗೆ ಮನ್ನಣೆ ನೀಡಿ

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಅಂತೂ ಮುಗಿದಿದೆ. ಈಗ ಏನಿದ್ದರೂ ಫಲಿತಾಂಶದ ಮೇಲೆ ಎಲ್ಲರ ಚಿತ್ತ. ಗೆಲ್ಲುವ ಮುನ್ನವೇ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಪ್ರಶ್ನೆಯಲ್ಲಿ ಎಲ್ಲಾ ಪಕ್ಷದವರೂ ಚರ್ಚೆ ಮಾಡುತ್ತಿದ್ದಾರೆ. ಇದರಲ್ಲಿ ಬಿಜೆಪಿ, ಜೆಡಿಎಸ್ ಮೊದಲೇ ಹೇಳಿರುವ ಹಾಗೆ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿಯನ್ನೇ ಮುಖ್ಯಮಂತ್ರಿ ಮಾಡುವೆವು ಎನ್ನುತ್ತಿದ್ದಾರೆ. ಆದರೆ ಕಾಂಗ್ರೇಸ್‌ನಲ್ಲಿ ಏನೋ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಈ ಮೊದಲಿಲ್ಲದ ಹೊಸ ಚರ್ಚೆ ಪ್ರಾರಂಭವಾಗಿದೆ.

ಚುನಾವಣೆಗೆ ಮುನ್ನ ಸಿದ್ಧರಾಮಯ್ಯ ನವರೇ ನಮ್ಮ ಮುಖ್ಯಮಂತ್ರಿ ಎನ್ನುತ್ತಿದ್ದ ಪಕ್ಷದಲ್ಲಿ ಈಗ ಜಾತಿ ಲೆಕ್ಕಾಚಾರದಲ್ಲಿ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಮಾತಾಗುತ್ತಿದೆ. ಇದು ನಿಜವೇ ಆದಲ್ಲಿ, ಇದು ಕಾಂಗ್ರೇಸ್ ರಾಜ್ಯದ ಜನತೆಗೆ ಹಾಗೂ ಸಿದ್ಧರಾಮಯ್ಯನವರ ಅಭಿಮಾನಿಗಳಿಗೆ ಮಾಡಿದಂತಹ ಮಹಾ ಮೋಸ ಎನ್ನಬಹುದು. ಏಕೆಂದರೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೇಸ್ ಮತ್ತೊಮ್ಮೆಅಧಿಕಾರಕ್ಕೆ ಬರುವುದೇ ಆದಲ್ಲಿ ಅದರಲ್ಲಿ ಏಕವ್ಯಕ್ತಿ ಪಾತ್ರ ಮಾತ್ರ ಕಾಣುತ್ತಿದೆ. ಖಂಡಿತಾ ಈ ಮಾತು ಸತ್ಯ, ದೇಶಾದ್ಯಂತ ನಶಿಸುತ್ತಿರುವ ಕಾಂಗ್ರೇಸ್ ಪಕ್ಷಕ್ಕೆ ಈ ಬಾರಿ ಜನ ಮತ ಹಾಕಿದ್ದು ಆ ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅಥವಾ ರಾಜ್ಯದಲ್ಲಿರುವ ಇತರ ನಾಯಕರನ್ನು ನೋಡಿ ಅಂತೂ ಅಲ್ಲವೇ ಅಲ್ಲ. ಈಗ ಏನಾದರೂ ಪಕ್ಷ ಚುನಾವಣೆಯಲ್ಲಿ ಗೆದ್ದು ಸಿದ್ಧರಾಮಯ್ಯನವರಿಗೆ ಮುಖ್ಯಮಂತ್ರಿ ಸ್ಥಾನ ನಿರಾಕರಿಸಲ್ಪಟ್ಟರೆ, ಮುಂದಿನ 2023ರ ಚುನಾವಣೆಗೆ ಕಾಂಗ್ರೇಸ್, ಜೆಡಿಎಸ್ ಒಟ್ಟಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಬೇಕಾದ ಪರಿಸ್ಥಿತಿ ಬರಬಹುದು.

ಕಾಂಗ್ರೇಸ್ ಪಕ್ಷ ತನ್ನ ಮೃದು ಹಿಂದುತ್ವ ಧೋರಣೆಯಿಂದಾಗಿ ದೇಶಾದ್ಯಂತ ಮುಸ್ಲಿಮ್ ಸಮುದಾಯದ ಒಲವು ಕಳೆದು ಕೊಂಡಿತ್ತು. ಇದರಿಂದಾಗಿ ಮುಸ್ಲಿಮರು ತಮ್ಮದೇ ಆದ ಪ್ರತ್ಯೇಕ ರಾಜಕೀಯ ಪಕ್ಷದ ಬಗ್ಗೆ ಯೋಚಿಸುವಂತಾಗಿತ್ತು. ಆದರೆ ಸಿದ್ಧರಾಮಯ್ಯನವರು ರಾಜ್ಯ ಕಾಂಗ್ರೇಸ್‌ನ ಸಾರಥಿಯಾದ ನಂತರ ಮುಸ್ಲಿಮರು ಮಾತ್ರ ವಲ್ಲದೇ ಕಾಂಗ್ರೇಸ್ ನಿಂದ ಬೇರೆಯಾಗಿದ್ದ ದಲಿತರು ಸೇರಿದಂತೆ ಇತರ ಹಿಂದಳಿದ ವರ್ಗದ ಮತದಾರರನ್ನು ಕಾಂಗ್ರೇಸ್‌ನತ್ತ ಸೆಳೆಯಲು ಯಶಸ್ವಿಯಾಗಿದ್ದರು. ಇಂತಹ ಒಬ್ಬ ನಾಯಕ ಕಾಂಗ್ರೇಸ್‌ಗೆ ದೊರೆತಿರುವುದು ಆ ಪಕ್ಷದ ಭಾಗ್ಯ ಅನ್ನಬಹುದಷ್ಟೇ. ಯಾಕೆಂದರೆ ಇದೀಗ ದೇಶದಲ್ಲಿ ಫ್ಯಾಶಿಸ್ಟ್‌ಗಳನ್ನು ಸಮರ್ಥವಾಗಿ ಎದುರಿಸುವ ಧೈರ್ಯ ಸಿದ್ಧರಾಮಯ್ಯನವರ ಹೊರತು ಇನ್ಯಾರಿಗೂ ಇಲ್ಲವೋ ಅಂತನಿಸುತ್ತಿದೆ.

ಕಾಲದ ಬೇಡಿಕೆಯ ಪ್ರಕಾರ ಸಿದ್ಧರಾಮಯ್ಯನಂತಹ ಒಬ್ಬ ಅಪ್ಪಟ ಜಾತ್ಯಾತೀತ ವಾದಿ ನಾಯಕನ ಅಗತ್ಯ ಈಗ ಸಂವಿಧಾನ ಅಪಾಯದಲ್ಲಿರುವ ರಾಷ್ಟ್ರ ರಾಜಕಾರಣಕ್ಕೆ ಅಗತ್ಯವಿದೆಯಾದರೂ, ಒಂದು ವೇಳೆ ರಾಜ್ಯದಲ್ಲಿ ಕಾಂಗ್ರೇಸ್ ಗೆದ್ದರೆ ರಾಜ್ಯದ ಜನ ಸಿದ್ಧರಾಮಯ್ಯನವರನ್ನು ಯಾವುದೇ ಕಾರಣಕ್ಕೂ ಕಳಕೊಳ್ಳಲು ಇಷ್ಟ ಪಡಲಾರರು. ಆದುದರಿಂದ ಈ ಸಂದರ್ಭದಲ್ಲಿ ಕಾಂಗ್ರೇಸ್ ಜಾತಿ ನೋಡಿ ನಾಯಕತ್ವ ಸ್ಥಾನ ಕೊಡುವುದು ಸರಿಯಲ್ಲ. ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡ ಬೇಡಿ ಎಂದು ಹೇಳುತ್ತಿಲ್ಲ. ಆದರೆ ಅದಕ್ಕಿಂತಲೂ ಮುಂಚೆ ಕಾಂಗ್ರೇಸ್ ರಾಜ್ಯದ ಜನತೆಯ ಆಯ್ಕೆಗೆ ಮನ್ನಣೆ ನೀಡಬೇಕು. ಏಕೆಂದರೆ ಈ ಬಾರಿಯ ಚುನಾವಣೆ ಕಾಂಗ್ರೇಸ್ ವರ್ಸಸ್ ಬಿಜೆಪಿ ಆಗಿರುವುದಲ್ಲ. ಸಿದ್ಧರಾಮಯ್ಯ ವರ್ಸಸ್ ಬಿಜೆಪಿ ಆಗಿರುವುದು. ಇದನ್ನು ಕಾಂಗ್ರೇಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು.

Check Also

ಪ್ರತಾಪ ಸಿಂಹ ಅತ್ತಾಗ!

004ಹೌದು! ನಿನ್ನೆ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದಾಗ ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಅವರು ಬಿಕ್ಕಿ ಬಿಕ್ಕಿ ಅತ್ಬಿಟ್ರು! …

Leave a Reply

Your email address will not be published. Required fields are marked *