Thursday , June 20 2019
Breaking News
Home / ರಾಜ್ಯ / ಅಪಘಾತವಾದರೂ ಹನಿ ನೀರು ಕುಡಿಯದೆ ಮೃತಪಟ್ಟ ಉಪವಾಸಿಗ ಶಿಕ್ಷಕ

ಅಪಘಾತವಾದರೂ ಹನಿ ನೀರು ಕುಡಿಯದೆ ಮೃತಪಟ್ಟ ಉಪವಾಸಿಗ ಶಿಕ್ಷಕ

ಸಂದೇಶ ಇ-ಮ್ಯಾಗಝಿನ್: ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ಶಾಲಾ ಶಿಕ್ಷಕರೊಬ್ಬರು ಅಪಘಾತವಾದರೂ ಉಪವಾಸ ಮುರಿಯುತ್ತೆ ಎಂದು ಹನಿ ನೀರು ಮುಟ್ಟದೆ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಇಂಗ್ಲೀಷ್ ಶಿಕ್ಷಕ ಫೈಸಲ್ ಅಲಿ ಕೋಲಾಕಾರ ಎಂಬವರು ಮೊನ್ನೆ ಸಂಜೆ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಹಾವೆರಿಯ ತೋಟದ ಯಲ್ಲಾಪುರ ಎಂಬಲ್ಲಿ ಹೋಗುತ್ತಿದ್ದಾಗ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ತೀವ್ರ ಗಾಯಗೊಂಡಿದ್ದು, ಕಿವಿ ಬಾಯಿ ಮೂಗಿನಲ್ಲಿ ತೀವ್ರ ರಕ್ತ ಸ್ರಾವವಾಗುವುದನ್ನು ನೋಡಿದ ಬಸ್ಸಿನಲ್ಲಿದ್ದವರು ಫೈಸಲ್ ಅಲಿ ಅವರಿಗೆ ನೀರು ಕುಡಿಸಲು ಪ್ರಯತ್ನಿಸಿದಾಗ ನಾನು ಉಪವಾಸಿಗ ನೀರು ಕುಡಿಯುವ ಹಾಗಿಲ್ಲ ಎಂದು ಹೇಳಿದ್ದಾರೆ. ಆ ನಂತರ ಜನರು ಬಲವಂತವಾಗಿ ಫೈಸಲ್ ಅಲಿ ಅವರಿಗೆ ನೀರು ಕುಡಿಸಲು ಪ್ರಯತ್ನಿಸಿದರೂ ಅದನ್ನು ಕುಡಿಯದೆ ಉಗುಳಿದ ಫೈಸಲ್ ಅಲಿ ಅವರು ಬಳಿಕ ಮೃತ ಪಟ್ಟಿದ್ದಾರೆ.

ಫೈಸಲ್ ಅಲಿಯವರು ಸಾವಿನಲ್ಲೂ ಧರ್ಮ ನಿಷ್ಟೆ ಪಾಲಿಸಿದ್ದಾರೆ ಎಂದು ಕೆಲವರು ಈ ಘಟನೆಯನ್ನು ಶ್ಲಾಘಿಸಿದರೆ. ಇನ್ನು ಕೆಲವರು ಇದು ಇಸ್ಲಾಮ್ ಧರ್ಮದ ಬಗ್ಗೆ ಅಜ್ಞಾನದ ಪರಮಾವಧಿ ಎಂದಿದ್ದಾರೆ. ವಾಸ್ತವದಲ್ಲಿ ಮುಸ್ಲಿಮರಿಗೆ ರಮದಾನ್ ತಿಂಗಳಲ್ಲಿ ಉಪವಾಸ ಕಡ್ಡಾಯವಾದರೂ ಕೆಲವು ಅಗತ್ಯ ಕಾರಣಗಳಿಗಾಗಿ ಉಪವಾಸ ತೊರೆಯುವುದು ಧರ್ಮವೇ ಅನುವದಿಸಿದ ಪುಣ್ಯಕಾರ್ಯವಾಗಿದೆ. ಆದರೆ ಅದರ ಬಗ್ಗೆ ಜ್ಞಾನವಿಲ್ಲದವರು ಅನಗತ್ಯ ತೊಂದರೆ ತೆಗೆದು ಕೊಂಡು ತಮ್ಮ ದೇಹವನ್ನು ದಂಡಿಸುತ್ತಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Check Also

ಗಡ್ಡ ಬಿಟ್ಟವರೆಲ್ಲಾ ಭಯೋತ್ಪಾದಕರಲ್ಲ, ವದಂತಿಗೆ ಕಿವಿಗೊಡಬೇಡಿ: ಬೆಂಗಳೂರು ಪೊಲೀಸರ ಮನವಿ

206ಸಂದೇಶ ಇ-ಮ್ಯಾಗಝಿನ್: ಶ್ರೀಲಂಕಾದಲ್ಲಿ ಈಸ್ಟರ್ ದಿನದಂದು ಸರಣಿ ಬಾಂಬ್ ಸ್ಫೋಟ ಮಾಡಿದ್ದ ಉಗ್ರರು ಬೆಂಗಳೂರಿನ ಮೆಟ್ರೊ ರೈಲ್ವೇ ನಿಲ್ದಾಣನಕ್ಕೆ ಬಂದಿದ್ದಾರೆ …

Leave a Reply

Your email address will not be published. Required fields are marked *