Friday , April 3 2020
Breaking News
Home / ಗಲ್ಫ್ ವಿಶೇಷ / ಯುಎಇ: ಕಳೆದ ಆರು ವರ್ಷಗಳಿಂದ ರಮ್‌ಝಾನ್ ಉಪವಾಸಿಗರಿಗೆ ಇಫ್ತಾರ್ ಮಾಡಿಸುತ್ತಿದೆ ಗುರುದ್ವಾರ

ಯುಎಇ: ಕಳೆದ ಆರು ವರ್ಷಗಳಿಂದ ರಮ್‌ಝಾನ್ ಉಪವಾಸಿಗರಿಗೆ ಇಫ್ತಾರ್ ಮಾಡಿಸುತ್ತಿದೆ ಗುರುದ್ವಾರ

ಸಂದೇಶ ಇ-ಮ್ಯಾಗಝಿನ್: ಯುಎಇಯ ಏಕೈಕ ಸಿಖ್ಖ್ ಗುರುದ್ವಾರ ಕಳೆದ ಆರು ವರ್ಷಗಳಿಂದ ಪವಿತ್ರ ರಮಝಾನ್ ತಿಂಗಳಲ್ಲಿ ಪ್ರತಿದಿನ ಉಪವಾಸಿಗರಿಗೆ ಇಫ್ತಾರ್ ಕೂಟ ಏರ್ಪಡಿಸುತ್ತಿದೆ. ದುಬಾಯಿಯ ಜಬಲ್ ಅಲಿ, ಅಲ್ ಮುಂತಝದಲ್ಲಿರುವ ಗುರುನಾನಕ್ ದರ್ಬಾರ್‌ನಲ್ಲಿ ಸಸ್ಯಹಾರಿ ಆಹಾರಗಳನ್ನು ನೀಡಿ ಉಪವಾಸಿಗರ ಇಫ್ತಾರ್ ಕಾರ್ಯ ಏರ್ಪಡಿಸುತ್ತಾ ಬಂದಿದೆ. ಗುರುದ್ವಾರದ ಚೇರ್‌ಮ್ಯಾನ್ ಸುರೇಂದರ್ ಸಿಂಗ್ ಕಂದಾರಿ ರವಿವಾರ ಬೈಸಾಕಿ ಉತ್ಸವದಂದು ಮಾಧ್ಯಮದವರ ಜೊತೆ ಮಾತನಾಡಿ ಗುರುದ್ವಾರದಲ್ಲಿ ಕಳೆದ ಆರು ವರ್ಷಗಳಿಂದ ಇಫ್ತಾರ್ ಕೂಟ ನಡೆಸುತ್ತಾ ಬಂದಿರುವುದರ ಬಗ್ಗೆ ಮಾಹಿತಿ ನೀಡಿದರು. ಈ ಭಾಗದಲ್ಲಿ ಅತೀ ಹೆಚ್ಚು ಮುಸ್ಲಿಮ್ ಕಾರ್ಮಿಕರು ನೆಲೆಸುತ್ತಿದ್ದು, ಆದರೆ ಇಲ್ಲಿ ಉಪವಾಸ ಹಿಡಿದವರಿಗೆ ತಮ್ಮ ಉಪವಾಸವನ್ನು ತೊರೆಯಲು ಬೇಕಾದಂತಹ ವ್ಯವಸ್ಥೆ ಇಲ್ಲ. ಆಕಾರಣದಿಂದಾಗಿ ಯಾರಾದರೂ ಕಷ್ಟ ಪಡುತ್ತಿದ್ದರೆ ಯಾವುದೇ ತೊಂದರೆ ಇಲ್ಲದೆ ನಾವು ಏರ್ಪಡಿಸುವ ಇಫ್ತಾರ್ ಕೂಟದಲ್ಲಿ ಪಾಗಲ್ಗೊಳ್ಳಬಹುದು ಎಂದು ತಿಳಿಸಿದ್ದಾರೆ.

ಯುಎಇಯ ದುಬಾಯಿಯಲ್ಲಿ ಹೆಚ್ಚಿನ ಸಿಖ್ಖರಿದ್ದು, ಇವರ ಸಂಖ್ಯೆ ಸುಮಾರು 50 ಸಾವಿರ ಎಂದು ಹೇಳಲಾಗುತ್ತಿದೆ. ಇವರು ಭಾರತದ ಪಂಜಾಬ್ ಹಾಗೂ ಪಾಕಿಸ್ತಾನದಿಂದ ಬಂದು ಇಲ್ಲಿ ನೆಲೆಸಿದ್ದಾರೆ. ಇವರು ತಮಗೆ ಒಂದು ಗುರುದ್ವಾರ ಬೇಕೆಂದು ಕೇಳಿದಾಗ ಯುಎಇ ದೊರೆ ರಾಷಿದ್ ಅಲ್ ಮಖ್ತೂಮ್ ಜಬಲ್ ಅಲಿಯಲ್ಲಿ 25,400 ಸ್ಕ್ವಾರ್ ಫೀಟ್ ಜಾಗ ನೀಡಿದ್ದರು. ಇದರ ನಿರ್ಮಾಣ 2010ರಲ್ಲಿ ಆಗಿತ್ತು.

Check Also

ಯುಎಇ: ರಮದಾನ್‌ನಲ್ಲಿ ಬ್ರಿಟನ್ ಮಹಿಳೆಯಿಂದ ಇಸ್ಲಾಮ್ ಸ್ವೀಕಾರ

ಸಂದೇಶ ಇ-ಮ್ಯಾಗಝಿನ್: ಯುಕೆ ರಾಷ್ಟ್ರೀಯಳಾದ ಮ್ಯಾಕ್ಸಿನ್ ಬ್ರಾಡಾಕ್ ಯುಎಇಯಲ್ಲಿ ತಮ್ಮ ಜೀವನದ ಒಂಬತ್ತನೇ ರಮದಾನ್ ಉಪವಾಸ ವೃತಾಚರಣೆ ಮಾಡುತ್ತಿದ್ದಾರೆ. ಇದು …

Leave a Reply

Your email address will not be published. Required fields are marked *