Monday , July 22 2019
Breaking News
Home / ಗಲ್ಫ್ ಸುದ್ದಿ / ದುಬೈ ದೊರೆಯ ಪತ್ನಿ ಹಯಾ ಹುಸೇನ್ 31 ಮಿಲಿಯನ್ ಪೌಂಡ್‌ಗಳೊಂದಿಗೆ ಪರಾರಿ

ದುಬೈ ದೊರೆಯ ಪತ್ನಿ ಹಯಾ ಹುಸೇನ್ 31 ಮಿಲಿಯನ್ ಪೌಂಡ್‌ಗಳೊಂದಿಗೆ ಪರಾರಿ

ಸಂದೇಶ ಇ-ಮ್ಯಾಗಝಿನ್: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನ ಪ್ರಧಾನ ಮಂತ್ರಿ ಹಾಗೂ ದುಬಾಯಿ ದೊರೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಆರನೇ ಪತ್ನಿ ಜಾರ್ಡನ್ ರಾಜಕುಮಾರಿ ಹಯ ಬಿಂತ್ ಅಲ್ ಹುಸೇನ್ 31 ಮಿಲಿಯನ್ ಪೌಂಡ್‌ಳೊಂದಿಗೆ ದೇಶವನ್ನು ತೊರೆದಿದ್ದಾರೆ ಎಂದು ವರದಿಯಾಗಿದೆ. ಅವರು ತಮ್ಮ ಇಬ್ಬರು ಮಕ್ಕಳಾದ ಪ್ರಿನ್ಸಸ್ ಜಲೀಲಾ ಹಾಗೂ ಪ್ರಿನ್ಸ್ ಝಾಯೆದ್ ರೊಂದಿಗೆ ದೇಶವನ್ನು ತೊರೆದು ಲಂಡನ್‌ನಲ್ಲಿ ಅಭಯ ಯಾಚಿಸಿದ್ದಾರೆ ಎಂದು ಗಾರ್ಡಿಯನ್ ವರದಿ ಮಾಡಿದೆ. ಇದು ಜರ್ಮನಿ ಮತ್ತು ಯುಎಇಯ ದೇಶಗಳ ನಡುವೆ ಉದ್ವಿಗ್ನತೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಏಕೆಂದರೆ ಜರ್ಮನ್ ರಾಯಭಾರ ಕಚೇರಿಯು ಹಯಾ ಬಿಂತ್ ಹುಸೇನ್‌ಗೆ ದೇಶವನ್ನು ತೊರೆಯಲು ಸಹಾಯ ಮಾಡಿದೆ ಎಂದು ತಿಳಿದು ಬಂದಿದೆ.

ದುಬೈ ದೊರೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರಿಂದ ಪ್ರಿನ್ಸಸ್ ಹಯಾ ಇದೀಗಾಗಲೇ ವಿಚ್ಛೇಧನಕ್ಕಾಗಿ ಮನವಿ ಮಾಡಿದ್ದಾರೆ ಎನ್ನಲಾಗಿದ್ದು, ಆದರೆ ದಂಪತಿಗ ನಡುವೆ ಇನ್ನೂ ವಿಚ್ಛೇಧನ ನಡೆದಿಲಲ್ ಎಂದು ತಿಳಿದ್ ಬಂದಿದೆ. ಜೋರ್ಡಾನ್ ದೊರೆ ಅಬ್ದುಲ್ಲಾರ ಮಲ ಸಹೋದರಿಯಾಗಿರುವ ಹಯ ದೇಶವನ್ನು ತೊರೆದ ನಂತರ ಜರ್ಮನಿಯಲ್ಲಿ ಆಶ್ರಯಕ್ಕಾಗಿ ವಿನಂತಿಯನ್ನು ಮಾಡಿದ್ದರು ಎನ್ನಲಾಗಿದೆ.

Check Also

ಹಜ್: ಶಾಂತಿ ಭಂಗ ಮಾಡುವವರ ವಿರುದ್ಧ ಕ್ರಮ; ಸಚಿವ ಸಂಪುಟದ ತೀರ್ಮಾನ

000ಸಂದೇಶ ಇ-ಮ್ಯಾಗಝಿನ್: ಹಜ್ ಅನ್ನು ರಾಜಕೀಯಗೊಳಿಸುವ ಯಾವುದೇ ಕೃತ್ಯವು ಸ್ವೀಕಾರಾರ್ಹವಲ್ಲ ಎಂದು ಮಂಗಳವಾರ ಜಿದ್ದಾದಲ್ಲಿ ನಡೆದ ಸೌದಿ ಮಂತ್ರಿ ಪರಿಷತ್ತಿನ …

Leave a Reply

Your email address will not be published. Required fields are marked *