Thursday , June 20 2019
Breaking News
Home / ಗಲ್ಫ್ ಸುದ್ದಿ / ದುಬೈ: ಭೀಕರ ಬಸ್ ಅಪಘಾತ: 8 ಭಾರತೀಯರೂ ಸೇರಿದಂತೆ 17 ಮಂದಿ ಸಾವು

ದುಬೈ: ಭೀಕರ ಬಸ್ ಅಪಘಾತ: 8 ಭಾರತೀಯರೂ ಸೇರಿದಂತೆ 17 ಮಂದಿ ಸಾವು

ಸಂದೇಶ ಇ-ಮ್ಯಾಗಝಿನ್: ಒಮಾನಿನಿಂದ ಬಂದಿದ್ದ ಪ್ರವಾಸಿ ಬಸ್ ಒಂದು ದುಬೈಯಲ್ಲಿ ರಸ್ತೆಯ ಸೈನ್ ಬೋರ್ಡ್‌ಗೆ ಡಿಕ್ಕಿ ಹೊಡೆದ ಪರಿಣಾಮ 8 ಮಂದಿ ಭಾರತೀಯರು ಸೇರಿದಂತೆ 17 ಮಂದಿ ಸಾವನ್ನಪ್ಪಿರುವುದಾಗಿ ಶುಕ್ರವಾರದಂದು ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ (ಸಿಜಿಐ) ಸ್ಪಷ್ಟಪಡಿಸಿದೆ. “ಸ್ಥಳೀಯ ಅಧಿಕಾರಿಗಳು ಮತ್ತು ಸಂಬಂಧಿಕರ ಪ್ರಕಾರ ಎಂಟು ಭಾರತೀಯರು ದುಬೈ ಬಸ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಲು ನಾವು ವಿಷಾದಿಸುತ್ತೇವೆ. ಸತ್ತವರ ಕೆಲವು ಸಂಬಂಧಿಗಳೊಂದಿಗೆ ಕಾನ್ಸುಲೇಟ್ ಸಂಪರ್ಕದಲ್ಲಿದೆ ಮತ್ತು ಇತರರಿಗೆ ತಮ್ಮ ಕುಟುಂಬಗಳ ಬಗ್ಗೆ ತಿಳಿಸಲು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ “ಎಂದು ಸಿಜಿಐ ದುಬೈ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ.

ಮೃತಪಟ್ಟ ಭಾರತೀಯರ ಹೆಸರುಗಳೆಂದರೆ: ರಾಜಗೋಪಾಲನ್, ಫಿರೋಜ್ ಖಾನ್ ಪಠಾಣ್, ರೆಶ್ಮಾ ಫಿರೋಜ್ ಖಾನ್ ಪಠಾಣ್, ದೀಪಕ್ ಕುಮಾರ್, ಜಮಾಲುದೀನ್ ಅರಕ್ಕವೀತಿಲ್, ಕಿರಣ್ ಜಾನಿ, ವಾಸುದೇವ್, ತಿಲಕ್ರಂ ಜವಾಹರ್ ಠಾಕೂರ್” ಎಂದು ತಿಳಿದು ಬಂದಿದೆ.

Check Also

ಹುಟ್ಟಿದ್ದೂ ಜೊತೆಯಾಗಿ ಸಾವೂ ಜೊತೆಯಾಗಿ-ಅವಳಿ ಮಕ್ಕಳ ದುರಂತ ಸಾವು

0014ಸಂದೇಶ ಇ-ಮ್ಯಾಗಝಿನ್: ಯುಎಇಯ ರಾಸ್ ಅಲ್ ಖೈಮಾದ ಖುಝಾಮಾ ಪ್ರದೇಶದ ಈಜುಕೊಳವೊಂದರಲ್ಲಿ ಗುರುವಾರ ಇಬ್ಬರು ಅವಳಿ ಮಕ್ಕಳ ಮೃತ ದೇಹ …

Leave a Reply

Your email address will not be published. Required fields are marked *