Tuesday , July 23 2019
Breaking News
Home / ವಿಶೇಷ / ಬೆಕ್ಕು ಬಿದ್ದಿದೆ ಎಂದು ಬಾವಿಗೆ ಹಾರಿದ ಕುಡುಕ, ಅಗ್ನಿಶಾಮಕ ದಳದವರು ಸುಸ್ತೋ ಸುಸ್ತು

ಬೆಕ್ಕು ಬಿದ್ದಿದೆ ಎಂದು ಬಾವಿಗೆ ಹಾರಿದ ಕುಡುಕ, ಅಗ್ನಿಶಾಮಕ ದಳದವರು ಸುಸ್ತೋ ಸುಸ್ತು

ಸಂದೇಶ ಇ-ಮ್ಯಾಗಝಿನ್: ಕೋಟ್ಟಾಯಂ ಜಿಲ್ಲೆಯ ಎಟ್ಟುಮನೂರ್ ಎಂಬಲ್ಲಿಂದ ಕುಡುಕನೊಬ್ಬ ಬೆಕ್ಕು ಬಿದ್ದಿದೆ ಎಂದು ಬಾವಿಗೆ ಹಾರಿ ಆನಂತರ ಮೇಲೆ ಬರಲು ಒಪ್ಪದೆ ಅಗ್ನಿ ಶಾಮಕದಳದ ಸತಾಯಿಸಿದ ಸ್ವಾರಸ್ಯಕರ ಘಟನೆ ವರದಿಯಾಗಿದೆ. ಭಾನುವಾರ ಸಂಜೆ ಕೊಟ್ಟಮುರಿ ನಿವಾಸಿ ಮಧು ಎಂಬ ಕುಡುಕನೊಬ್ಬ ಬಾವಿಗೆ ಬೆಕ್ಕು ಬಿದ್ದಿದೆ ಎಂದು ಬೊಬ್ಬೆ ಹೊಡೆಯುತ್ತಾ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮನೆಯಂಗಳದಲ್ಲಿದ್ದ ಬಾವಿಗೆ ಧುಮುಕಿದ್ದಾನೆ. ಊರವರು ಈತನನ್ನು ತಡೆಯಲು ಯತ್ನಿಸಿದರೂ ಕೇಳದ ಮಧು ಬಾವಿಗೆ ಧುಮುಕಿದ ತುಂಬಾ ಸಮಯದ ವರೆಗೂ ಯಾವುದೇ ಸುದ್ದಿಯಿಲ್ಲದೆ ನೀರಲ್ಲೇ ಅವಿತುಕೊಂಡಿದ್ದ ಎನ್ನಲಾಗಿದೆ. ಬಳಿಕ ಊರವರು ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಕರೆ ಮಾಡಿದರು. ಅಗ್ನಿ ಶಾಮಕ ದಳದವರ ಸತತ ಪ್ರಯತ್ನದ ಬಳಿಕ ಮಧು ನೀರಿನಿಂದ ಮೇಲೆ ಬಂದನಾದರೂ ಬಾವಿಯಿಂದ ಮೇಲೆ ಬರಲು ಒಪ್ಪಲಿಲ್ಲ. ಇಲ್ಲಿ ಬೆಕ್ಕಿದೆ ನಾನು ಅದನ್ನು ಹುಡುಕಿ ಮೇಲೆ ಬರುವುದಾಗಿ ಹಠ ಮಾಡಿದ್ದಾನೆ ಎನ್ನಲಾಗಿದೆ.

ಕೊನೆಗೆ ಪೊಲೀಸರು ಬಂದ ಮೇಲೆ ಪೊಲೀಸ್ ಅಧಿಕಾರಿಯೊಬ್ಬರು ಬಾವಿಯಿಂದ ಹೊರಗೆ ಬರದೇ ಇದ್ದಲ್ಲಿ ಅರೆಸ್ಟ್ ಮಾಡುವುದಾಗಿ ಬೆದರಿಸಿದ ನಂತರ ಮಧು ಅಗ್ನಿಶಾಮಕ ದಳವರು ಎಸೆದ ಬಲೆಯನ್ನು ಹಿಡಿದು ಮೇಲೆ ಬಂದಿದ್ದಾನೆ ಎನ್ನಲಾಗಿದೆ.

Check Also

ಬ್ರೈನ್ ಟ್ಯೂಮರ್ ಪೀಡಿತ ಮಗುವಿನ ಆಟಿಕೆ ಕದ್ದ ಕಳ್ಳರು ಕೊನೆಗೆ ಮಾಡಿದ ಕೆಲಸವೇನು ನೋಡಿ

001ಸಂದೇಶ ಇ-ಮ್ಯಾಗಝಿನ್: ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿರುವ 5 ವರ್ಷದ ಬಾಲಕನಿಗೆ ಸೇರಿದ ರೆಸ್ಲಿಂಗ್ ಬೆಲ್ಟನ್ನು ಕದ್ದ ಕಳ್ಳರು ನಂತರ …

Leave a Reply

Your email address will not be published. Required fields are marked *