Monday , August 26 2019
Breaking News
Home / ರಾಷ್ಟ್ರೀಯ / ನಾನು ಯಾರಿಗೂ ಭಯೋತ್ಪಾದಕರಾಗುವಂತೆ ಪ್ರೇರೇಪಿಸಿಲ್ಲ, ನನ್ನ ಈ ಶರತ್ತಿಗೆ ಒಪ್ಪುವುದಾದಲ್ಲಿ ದೇಶಕ್ಕೆ ಮರಳುವೆ: ಝಾಕಿರ್ ನಾಯ್ಕ್

ನಾನು ಯಾರಿಗೂ ಭಯೋತ್ಪಾದಕರಾಗುವಂತೆ ಪ್ರೇರೇಪಿಸಿಲ್ಲ, ನನ್ನ ಈ ಶರತ್ತಿಗೆ ಒಪ್ಪುವುದಾದಲ್ಲಿ ದೇಶಕ್ಕೆ ಮರಳುವೆ: ಝಾಕಿರ್ ನಾಯ್ಕ್

ಸಂದೇಶ ಇ-ಮ್ಯಾಗಝಿನ್: ದೇಶ ತೊರೆದಿರುವ ಇಸ್ಲಾಮಿಕ್ ಪ್ರಭೋಧಕ ಡಾ. ಝಾಕಿರ್ ನಾಯ್ಕ್ ಅವರು “ನಾನು ಭಾರತಕ್ಕೆ ಬಂದು ಕಾನೂನನ್ನು ಎದುರಿಸಲು ಸಿದ್ಧವಾಗಿದ್ದೇನೆ. ಆದರೆ ನ್ಯಾಯಾಲಯವು ನನ್ನನ್ನು ಆರೋಪಿ ಎಂದು ತೀರ್ಮಾನಿಸುವ ವರೆಗೆ ಸರ್ಕಾರವು ನನ್ನನ್ನು ಬಂಧಿಸಲ್ಲ ಎಂಬ ಶರತ್ತಿಗೆ ಒಪ್ಪಿಗೆ ಸೂಚಿಸಿದರೆ ಮಾತ್ರ ನಾನು ದೇಶಕ್ಕೆ ಮರಳುತ್ತೇನೆ ಎಂದು ಡಾ. ಝಾಕಿರ್ ನಾಯ್ಕ್ ಇಂಗ್ಲೀಷ್ ಪತ್ರಿಕೆ ‘ದ ವೀಕ್’ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಭಾರತದಲ್ಲಿ ಭಯೋತ್ಪಾದನಾ ಆರೋಪದ ಮೇಲೆ ಬಂಧಿತವಾಗಿರುವ 90% ಮುಸ್ಲಿಮರು ಅಮಾಯಕರಾದರೂ ಕೂಡ 15 ರಿಂದ 20 ವರ್ಷ ಶಿಕ್ಷೆ ಅನುಭವಿಸಿದ ಮೇಲೆ ಮಾತ್ರ ಜೈಲಿನಿಂದ ಬಿಡುಗಡೆಯಾಗಿದ್ದನು ನಾವೀಗಾಗಲೇ ನೋಡಿದ್ದೇವೆ. ಇಂತಹ ಸನ್ನಿವೇಶದಲ್ಲಿ ನಾನು ಕೂಡ ಕನಿಷ್ಟ ಎಂದರೂ ಹತ್ತು ವರ್ಷ ಜೈಲು ಪಾಲಾಗುವುದು ಖಂಡಿತ. ಹೀಗಾದಲ್ಲಿ ಇದು ನನ್ನ ಇಡೀ ಮಿಷನ್‌ಗೆ ಅಡ್ಡಿಯಾಗಬಹುದು. ನಾನು ಗೊತ್ತಿದ್ದೂ ಆ ರೀತಿ ಮಾಡಲು ನಾನೇನು ಮೂರ್ಖನೇ” ಎಂದು ಡಾ. ನಾಯ್ಕ್ ಪ್ರಶ್ನಿಸಿದ್ದಾರೆ.

NIA ಬಯಸುವುದಾದಲ್ಲಿ ನನ್ನನ್ನು ಮಲೆಷ್ಯಾದಲ್ಲೇ ತನಿಖೆ ಮಾಡಬಹುದು. ನಾನು ಭಾರತಕ್ಕೆ ಬಂದರೆ ನನ್ನನ್ನು ಬಂಧಿಸಲ್ಲ ಎಂದು ಸುಪ್ರಿಂ ಕೋರ್ಟ್ ಭರವಸೆ ನೀಡುವುದಾದರೆ ನಾನು ಭಾರತಕ್ಕೆ ಬರಲು ಸಿದ್ಧವಾಗಿರುವೆ. ನಾನು ಯಾರಿಗೂ ಭಯೋತ್ಪಾದನೆ ಮಾಡಲು ಅಥವಾ ಜನರನ್ನು ಕೊಲ್ಲುವಂತೆ ಬೋಧನೆ ಮಾಡಿಲ್ಲ. ನಿಮಗೆ ಸಂಶಯವಿದ್ದಲ್ಲಿ ನನ್ನ ಪ್ರವಚನದ ವಿಡಿಯೋ ಆಡಿಯೋಗಳನ್ನು ಪರೀಕ್ಷಿಸಬಹುದು ಎಂದು ಡಾ. ಝಾಕಿರ್ ನಾಯ್ಕ್ ಹೇಳಿದ್ದಾರೆ.

Check Also

ಕೈರಾನಾ: ಬಿಜೆಪಿ ವರ್ತಕರನ್ನು ಬಹಿಷ್ಕರಿಸುವಂತೆ ಮುಸ್ಲಿಮರನ್ನು ಒತ್ತಾಯಿಸಿದ ಎಸ್ಪಿ ಮುಖಂಡ

000ಸಂದೇಶ ಇ-ಮ್ಯಾಗಝಿನ್: ಉತ್ತರ ಪ್ರದೇಶದ ಕೈರಾನಾದ ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕ ನಹೀದ್ ಹಸನ್ ಅವರು ಈ ಪ್ರದೇಶದಲ್ಲಿ ವಾಸಿಸುವ …

Leave a Reply

Your email address will not be published. Required fields are marked *