Thursday , June 20 2019
Breaking News
Home / ಅಂತಾರಾಷ್ಟ್ರೀಯ / ಡಾ.ಝಾಕಿರ್ ನಾಯ್ಕ್ ಪ್ರಕರಣದಲ್ಲಿ ಮಲೇಷ್ಯಾ ಪ್ರಧಾನಿಯ ಮಹತ್ವದ ಹೇಳಿಕೆ

ಡಾ.ಝಾಕಿರ್ ನಾಯ್ಕ್ ಪ್ರಕರಣದಲ್ಲಿ ಮಲೇಷ್ಯಾ ಪ್ರಧಾನಿಯ ಮಹತ್ವದ ಹೇಳಿಕೆ

ಸಂದೇಶ ಇ-ಮ್ಯಾಗಝಿನ್: ಭಯೋತ್ಪಾದನೆಗೆ ಬೆಂಬಲ ಹಾಗೂ ಹಣ ಚಿಲುಮೆ ಪ್ರಕರಣಗಳಲ್ಲಿ ಭಾರತ ಸರಕಾರಕ್ಕೆ ಬೇಕಾದ ವ್ಯಕ್ತಿಯಾಗಿ ದೇಶತೊರೆದಿರುವ ಇಸ್ಲಾಮಿಕ್ ಪ್ರಭೋದಕ ಡಾ. ಝಾಕಿರ್ ನಾಯ್ಕ್ ಪ್ರಕರಣದಲ್ಲಿ ಮೌನ ಮುರಿದಿರುವ ಮಲೇಷ್ಯಾ ಪ್ರಧಾನಿ ಮಹಾತೀರ್ ಮುಹಮ್ಮದ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಮಲೇಷ್ಯಾ ಸರಕಾರ ಝಾಕಿರ್ ನಾಯ್ಕ್ ಅವರನ್ನು ಭಾರತಕ್ಕೆ ಹಸ್ತಾಂತರಿಸಿದಲ್ಲಿ ಪೂರ್ವಗ್ರಹ ಪೀಡಿತ ತನಿಖೆ ನಡೆಯಬಹುದಾದ ಸಾಧ್ಯತೆ ಇರುವುದರಿಂದ ಡಾ. ಝಾಕಿರ್ ನಾಯ್ಕ್ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಯಾವುದೇ ಉದ್ದೇಶ ಮಲೇಷ್ಯಾ ಸರಕಾರಕ್ಕಿಲ್ಲ ಎಂದು ಹೇಳಿದ್ದಾರೆ. ಇದಕ್ಕಾಗಿ ಅವರು ಮಂಗೋಲಿಯಾ ಮಾಡೆಲ್ ಒಬ್ಬರ ಹತ್ಯೆ ಪ್ರಕರಣದ ಮಲೇಷ್ಯಾದಲ್ಲಿ ಮರಣದಂಡನೆ ಶಿಕ್ಷೆಗೊಳಗಾಗಿರುವ ಪೊಲೀಸ್ ಕಮಾಂಡರ್ ಅಝರ್ ಉಮರ್ ಅವರ ಪ್ರಕರಣದೊಂದಿಗೆ ತುಲನೆ ಮಾಡಿದ್ದಾರೆ. ಅಝರ್ ಆಸ್ಟ್ರೇಲಿಯಾದಲ್ಲಿದ್ದು ಅವರನ್ನು ಆಸ್ಟ್ರೇಲಿಯಾ ಮಲೇಷ್ಯಾಗೆ ಹಸ್ತಾಂತರಿಸಲು ನಿರಾಕರಿಸಿದೆ. ಮಲೇಶ್ಯಾ ಅಝರ್‌ಗೆ ಮರಣದಂಡನೆ ನೀಡುತ್ತದೆ ಎಂಬ ಭಯದಿಂದ ಆಸ್ಟ್ರೇಲಿಯಾ ಈ ರೀತಿ ಮಾಡುತ್ತಿದೆ. ಝಾಕಿರ್ ನಾಯ್ಕ್ ಅವರ ಪ್ರಕರಣದಲ್ಲೂ ಮಲೇಷ್ಯಾ ಇದೇ ರೀತಿಯಲ್ಲಿ ಭಯ ಪಡುತ್ತಿದೆ ಎಂದು ಮಹಾತೀರ್ ಹೇಳಿದ್ದಾಗಿ ‘ದ ಸ್ಟಾರ್’ ವರದಿ ಮಾಡಿದೆ.

ಇಸ್ಲಾಮಿಕ್ ಪ್ರಭೋದಕರಾದ ಡಾ. ಝಾಕಿರ್ ನಾಯ್ಕ್ ಅವರ ಮೇಲೆ 2016 ರಲ್ಲಿ ಬಾಂಗ್ಲಾದಲ್ಲಿ ನಡೆದ ಸ್ಫೋಟ ಪ್ರಕರಣದ ಭಯೋತ್ಪಾದಕನಿಗೆ ಪ್ರೇರಣೆಯಾಗಿದ್ದಾರೆ ಎಂದು ಭಾರತ ಆರೋಪಿಸಿದೆ. ಇನ್ನೊಂದು ಪ್ರಕರಣದಲ್ಲಿ ಆದಾಯದ ಮೂಲವಿಲ್ಲದೆ ಬ್ಯಾಂಕ್ ಖಾತೆಗೆ ಕೋಟಿ ಗಟ್ಟಲೆ ಹಣ ವಿನಿಮಯ ಮಾಡಲಾಗಿದೆ ಎಂದೂ ಆರೋಪಿಸಲಾಗಿದೆ.

Check Also

ಎರ್ದೋಗಾನ್ ಈದ್ ಸಂದೇಶ; ಜಾಗತಿಕ ಮುಸಲ್ಮಾನರ ಬಗ್ಗೆ ಮಹತ್ವದ ಹೇಳಿಕೆ

004ಸಂದೇಶ ಇ-ಮ್ಯಾಗಝಿನ್: ತುರ್ಕಿ ರಾಷ್ಟ್ರಪತಿ ರೆಸೆಸ್ಪ್ ತೆಯ್ಯಿಬ್ ಎರ್ದೋಗಾನ್ ಸೋಮವಾರ ತಮ್ಮ ಈದುಲ್ ಫಿತ್ರ್ ಸಂದೇಶವನ್ನು ಜಾರಿ ಮಾಡಿದ್ದಾರೆ. ಜಗತ್ತು …

Leave a Reply

Your email address will not be published. Required fields are marked *