Friday , November 15 2019
Breaking News
dr. kafeel khan
Home / ರಾಷ್ಟ್ರೀಯ / ಡಾಕ್ಟರ್‌ಗಳ ಮುಷ್ಕರ: ಡಾ. ಕಫೀಲ್ ಅಹ್ಮದ್ ಐಎಮ್‌ಎ ಬಗ್ಗೆ ಹೇಳಿದರು ಈ ಮಾತು

ಡಾಕ್ಟರ್‌ಗಳ ಮುಷ್ಕರ: ಡಾ. ಕಫೀಲ್ ಅಹ್ಮದ್ ಐಎಮ್‌ಎ ಬಗ್ಗೆ ಹೇಳಿದರು ಈ ಮಾತು

ಸಂದೇಶ ಇ-ಮ್ಯಾಗಝಿನ್: ಮಕ್ಕಳ ತಜ್ಞ ಡಾ.ಕಫೀಲ್ ಅಹ್ಮದ್ ಖಾನ್ ಇಂಡಿಯನ್ ಮೆಡಿಕಲ್ ಅಸೋಶಿಯೇಷನ್ (IMA) ವಿರುದ್ಧ ಉತ್ತರ ಪ್ರದೇಶದ ಗೋರಖ್ ಪುರದ ಆಸ್ಪತ್ರೆಯಲ್ಲಿ ನಡೆದ ಘಟನೆಯನ್ನು ತನ್ನ ಮೇಲೆ ಹೊರಿಸಿ ತಾನು ಸೇರಿದಂತೆ ಮೂವರು ಡಾಕ್ಟರ್‌ಗಳನ್ನು ಉತ್ತರ ಪ್ರದೇಶ ಸರಕಾರ ಅಮಾನತು ಗೊಳಿಸಿದಾಗ ತನ್ನ ಸಹಾಯಕ್ಕೆ ಆಗಮಿಸಿಲ್ಲ ಎಂದು ದೂರಿದ್ದಾರೆ. ಇದೀಗ ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆಯನ್ನು ದೇಶಾದ್ಯಂತ ಡಾಕ್ಟರ್‌ಗಳ ಮುಷ್ಕರ ನಡೆಸುವಂತೆ ಕರೆ ನೀಡುತ್ತಿರುವ ಇಂಡಿಯನ್ ಮೆಡಿಕಲ್ ಅಸೋಶಿಯೇಷನ್ ನನ್ನ ಸಹಾಯಕ್ಕೆ ಈಗಲಾದರೂ ಆಗಮಿಸಲಿ, ನಾನು ಕಳೆದ ಎರಡು ವರ್ಷಗಳಿಂದ ಅಮಾನತಿನಲ್ಲಿದ್ದೇನೆ. ನನ್ನ ಬರಬೇಕಾದ ಸಂಬಳದ ಬಾಕಿ ಮೊತ್ತ ಕೂಡ ತಡೆಹಿಡಿಯಲ್ಫಟ್ಟಿದೆ. ನನ್ನ ಪರವಾಗಿ ಇಂಡಿಯನ್ ಮೆಡಿಕಲ್ ಅಸೋಶಿಯೇಷನ್ ಧ್ವನಿ ಎತ್ತಲಿ ಎಂದು ಡಾ.ಕಫೀಲ್ ಅಹ್ಮದ್ ಖಾನ್ ಆಗ್ರಹಿಸಿದ್ದಾರೆ.

2017 ರ ಆಗಸ್ಟ್ 22 ರಂದು ಉತ್ತರ ಪ್ರದೇಶದ ಗೋರಾಕ್ಪುರದ ಬಾಬಾ ರಾಘವ್ ದಾಸ್ (ಬಿಆರ್ಡಿ) ಆಸ್ಪತ್ರೆಯಲ್ಲಿ ಆಕ್ಸಿಜನ್ ಸರಬರಾಜಿನಲ್ಲಿ ಅಡ್ಡಿಯಾದ ಕಾರಣ ಚಿಕಿತ್ಸೆಗೆಂದು ದಾಖಲಾಗಿದ್ದ ಸುಮಾರು 60 ಶಿಶುಗಳು ಮೃತಪಟ್ಟಿದ್ದವು. ಘಟನೆಯ ಸಮಯದಲ್ಲಿ ಮಕ್ಕಳ ಪ್ರಾಣ ರಕ್ಷಿಸಿದ ಹೀರೋ ಎಂದು ಬಿಂಬಿತವಾಗಿದ್ದ ಕಫೀಲ್ ಖಾನ್ ರನ್ನು ಹಾಗೂ ಉಳಿದ ಇಬ್ಬರು ಡಾಕ್ಟರ್ ಗಳನ್ನು ಬಳಿಕ ಅಮಾನತು ಮಾಡಲಾಗಿತ್ತು.

Check Also

ಗೋರಕ್‌ಪುರ ಮಕ್ಕಳ ಸಾವು ಪ್ರಕರಣ: ವೈದ್ಯ ಕಫೀಲ್ ಖಾನ್ ಆರೋಪ ಮುಕ್ತ

ಸಂದೇಶ ಇ-ಮ್ಯಾಗಝಿನ್: ಗೋರಕ್‌ಪುರದ ಬಿಆರ್‌ಡಿ ಮೆಡಿಕಲ್ ಕಾಲೇಜ್ ನಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ನಡೆದ ಮಕ್ಕಳ ಸಾಮೂಹಿಕ ಸಾವು …

Leave a Reply

Your email address will not be published. Required fields are marked *