Saturday , April 4 2020
Breaking News
Home / ಮಹಿಳೆ / ಲವ್ ಜಿಹಾದ್ ಪ್ರಕರಣದಲ್ಲಿ ಸುದ್ದಿಯಾಗಿದ್ದ ಹಾದಿಯಾ ಈಗ ಹೀಗಿದ್ದಾರೆ ನೋಡಿ

ಲವ್ ಜಿಹಾದ್ ಪ್ರಕರಣದಲ್ಲಿ ಸುದ್ದಿಯಾಗಿದ್ದ ಹಾದಿಯಾ ಈಗ ಹೀಗಿದ್ದಾರೆ ನೋಡಿ

ಸಂದೇಶ ಇ-ಮ್ಯಾಗಝಿನ್: ವಿವಾದಾತ್ಮಕ ‘ಲವ್-ಜಿಹಾದ್’ ಪ್ರಕರಣದಿಂದ ರಾಷ್ಟ್ರವ್ಯಾಪಿ ಗಮನ ಸೆಳೆದಿದ್ದ ಕೇರಳದ ಮಹಿಳೆ ಅಖಿಲಾ ಅಶೋಕನ್ ಅಲಿಯಾಸ್ ಹಾದಿಯಾ ಅವರು ಇದೀಗ ಹೋಮಿಯೋಪಥಿಕ್ ವೈದ್ಯಕೀಯ ಪದವಿ ಪೂರ್ಣ ಗೊಳಿಸಿ ವೈದ್ಯೆಯಾಗಿದ್ದು, ನಿನ್ನೆ ಮಲಪ್ಪುರಂನ ಕೋಟ್ಟಕ್ಕಲ್ ರಸ್ತೆಯಲ್ಲಿ ತಮ್ಮದೇ ಹೆಸರಿನಲ್ಲಿ ಹೋಮಿಯೋಪಥಿಕ್ ಕ್ಲಿನಿಕ್ ತೆರೆದಿದ್ದಾರೆ. ಶುಕ್ರವಾರ ಒತುಕುಂಗಲ್ ಪಂಚಾಯತ್ ಅಧ್ಯಕ್ಷರು ಹಾದಿಯಾ ಅವರ ನೂತನ ‘ಹಾದಿಯಾ ಹೋಮಿಯೋಪಥಿಕ್ ಕ್ಲಿನಿಕ್’ ನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಸಮಾರಂಭದಲ್ಲಿ ಹಲವು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ಕಳೆದ ಫೆಬ್ರವರಿಯಲ್ಲಿ ಹೋಮಿಯೋಪಥಿಕ್ ವೈದ್ಯಕೀಯ ಪದವಿಯನ್ನು ಪೂರ್ಣಗೊಳಿಸಿದ್ದ ಹಾದಿಯಾ ಅವರ ಪತಿ ಶಫೀನ್ ಜಹಾನ್ ಈ ಸಂದರ್ಭದಲ್ಲಿ ತಮ್ಮ ಪತ್ನಿಯು ಪದವಿ ಪಡೆದ ಕೋಟಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಹಾರೈಸಿದ್ದರು.

ಹಿಂದೂ ಧರ್ಮದಲ್ಲಿ ಜನಿಸಿದ ಅಖಿಲಾ ಅಶೋಕನ್ ಅವರು ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡು 2016 ರ ಡಿಸೆಂಬರ್‌ನಲ್ಲಿ ಮುಸ್ಲಿಂ ವ್ಯಕ್ತಿಯಾದ ಶಫಿನ್ ಜಹಾನ್ ಅವರನ್ನು ವಿವಾಹವಾಗಿದ್ದರು. ಆ ಬಳಿಕ ಆಕೆಯನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ. ಇದು ಲವ್ ಜಿಹಾದ್ ಪ್ರಕರಣ ಎಂದು ಆರೋಪಿಸಿ ಆಕೆಯ ತಂದೆ ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹೈಕೋರ್ಟ್ 2017 ರ ಮೇ ತಿಂಗಳಲ್ಲಿ ಮದುವೆಯನ್ನು ರದ್ದುಗೊಳಿಸಿ ಆಕೆಯನ್ನು ಮತ್ತೆ ಹೆತ್ತವರ ಮನೆಗೆ ಕಳುಹಿಸುವಂತೆ ಆದೇಶಿಸಿತ್ತು. ಇದರ ವಿರುದ್ಧ ಶಫೀನ್ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರು. ಮಾರ್ಚ್ 8, 2018ರಲ್ಲಿ ಸುಪ್ರಿಂ ಕೋರ್ಟ್ ಇವರಿಬ್ಬರ ಮದುವೆಯನ್ನು ಮಾನ್ಯ ಮಾಡಿ ಹಾದಿಯಾಗೆ ಪತಿ ಜೊತೆ ತೆರಳುವಂತೆ ಸೂಚಿಸಿತ್ತು.

Check Also

ತಂದೆ ಇಲ್ಲದೆ ಬೆಳೆದ ಇಲ್ಮಾ ಅಫ್ರೋಝ ಅವರ ಯಶಸ್ವಿ IPS ಪಯಣ

ಸಂದೇಶ ಇ-ಮ್ಯಾಗಝಿನ್: ನಾನು ಬಡ ಕುಟುಂಬದಲ್ಲಿ ಹುಟ್ಟಿದ್ದು, ನನ್ನ ಬಡತನವೇ ನನ್ನ ಸಾಧನೆಗೆ ಅಡ್ಡಿ ಇಲ್ಲದಿದ್ದಲ್ಲಿ ಸಾಧನೆ ಮಾಡುತ್ತಿದ್ದೆ ಎಂದು …

Leave a Reply

Your email address will not be published. Required fields are marked *