Friday , May 24 2019
Breaking News
Home / ಅಂತಾರಾಷ್ಟ್ರೀಯ / ಕಳೆದ ಎರಡು ವರ್ಷಗಳಲ್ಲಿ ಚೀನಾ ಸರಕಾರ ಕೆಡವಿದ ಮಸೀದಿಗಳ ಸಂಖ್ಯೆ ಎಷ್ಟು ನೋಡಿ: ಶಾಕಿಂಗ್ ವರದಿ

ಕಳೆದ ಎರಡು ವರ್ಷಗಳಲ್ಲಿ ಚೀನಾ ಸರಕಾರ ಕೆಡವಿದ ಮಸೀದಿಗಳ ಸಂಖ್ಯೆ ಎಷ್ಟು ನೋಡಿ: ಶಾಕಿಂಗ್ ವರದಿ

ಸಂದೇಶ ಇ-ಮ್ಯಗಝಿನ್: ಚೀನಾದ ಕಮ್ಯುನಿಸ್ಟ್ ಸರಕಾರವು ಅಲ್ಲಿನ ಮುಸ್ಲಿಮರ ವಿರುದ್ಧ ನಡೆಸುತ್ತಿರುವ ದಮನಕಾರಿ ನೀತಿಗಳು ಒಂದೊಂದಾಗಿ ಹೊರಬರುತ್ತಲೇ ಇದ್ದು, ಮಂಗಳವಾರ ಈ ಬಗ್ಗೆ ‘ಗಾರ್ಡಿಯನ್’ ಪತ್ರಿಕೆ ಉಪಗ್ರಹ ಚಿತ್ರಗಳನ್ನು ಆಧರಿಸಿ ವರದಿ ಪ್ರಕಟಿಸಿದೆ. ಪತ್ರಿಕೆಯು ಉಪಗ್ರಹ ಚಿತ್ರಗಳನ್ನು ಆಧರಿಸಿ ಸುಮಾರು 91 ಮಸೀದಿಗಳನ್ನು ಗುರುತಿಸಿದ್ದು, ಇವುಗಳಲ್ಲಿ 2016 ರಿಂದ 2018 ರ ನಡುವೆ ಸುಮಾರು 31 ಮಸೀದಿಗಳನ್ನು ನಾಶ ಮಾಡಲಾಗಿದ್ದು, 15 ಮಸೀದಿಗಳನ್ನು ಸಂಪೂರ್ಣ ನೆಲ ಸಮ ಗೊಳಿಸಲಾಗಿದೆ ಎನ್ನಲಾಗಿದೆ. ಉಳಿದ ಮಸೀದಿಗಳ ಮಿನಾರಗಳನ್ನು ಕೆಡವಲಾಗಿದ್ದು, ಕೆಲವು ಮಸೀದಿಗಳ ಗೋಡೆಗಳನ್ನು ಉರುಳಿಸಲಾಗಿದೆ ಎಂದು ಸ್ಥಳೀಯರ ಮಹಿತಿಯ ಸಹಿತ ಪತ್ರಿಕೆ ನಡೆಸಿದ ಅಧ್ಯಯನದಲ್ಲಿ ತಿಳಿಸಲಾಗಿದೆ.

ಪಶ್ಚಿಮ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ವಾಸಿಸುತ್ತಿರುವ ಉಯಿಗುರ್ ಮುಸ್ಲಿಮರ ವಿರುದ್ಧ ಚೀನಾ ನಡೆಸುತ್ತಿರುವ ದೌರ್ಜನ್ಯಕ್ಕೆ ಇದು ಸ್ಪಷ್ಟ ಉದಾಹರಣೆ ಎನ್ನಲಾಗಿದ್ದು, ಈ ಪ್ರದೇಶದ ಅತಿದೊಡ್ಡ ತೀಥಯಾತ್ರಾ ಸ್ಥಳವಾಗಿರುವ ಇಮಾಮ್ ಆಸಿಂ ಮಕ್ಬರವನ್ನೂ ಕೆಡವಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Check Also

ಕ್ರೈಸ್ಟ್ ಚರ್ಚ್ ಮಸೀದಿಗೆ ಭೇಟಿ ನೀಡಿದ ವಿಶ್ವಸಂಸ್ಥೆಯ ಮಹಾಸಚಿವರು; ಇಸ್ಲಾಮೋಫೋಬಿಯಾ ಬಗ್ಗೆ ಮಹತ್ವದ ಹೇಳಿಕೆ

101ಸಂದೇಶ ಇ-ಮ್ಯಾಗಝಿನ್: ವಿಶ್ವಸಂಸ್ಥೆಯ ಮಹಾಸಚಿವರಾದ ಆಂಟನಿಯೋ ಗುಟೇರಸ್ ಭಯೋತ್ಪಾದಕ ದಾಳಿಗೆ ಒಳಗಾಗಿದ್ದ ನ್ಯೂಝಿಲ್ಯಾಂಡ್ ಕ್ರೈಸ್ಟ್ ಚರ್ಚ್‌ನ ಅನ್ನೂರ್ ಮಸೀದಿಗೆ ನಿನ್ನೆ …

Leave a Reply

Your email address will not be published. Required fields are marked *