Thursday , June 20 2019
Breaking News
Home / ರಾಷ್ಟ್ರೀಯ / ಬಾಲಕ ಮೂಗಿನ ಶಸ್ತ್ರಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದ ಆದರೆ ಡಾಕ್ಟರ್ ಮಾಡಿದ್ದೇನು ನೋಡಿ: ಶಾಕಿಂಗ್

ಬಾಲಕ ಮೂಗಿನ ಶಸ್ತ್ರಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದ ಆದರೆ ಡಾಕ್ಟರ್ ಮಾಡಿದ್ದೇನು ನೋಡಿ: ಶಾಕಿಂಗ್

ಸಂದೇಶ ಇ-ಮ್ಯಾಗಝಿನ್: ಕೇರಳದ ಆರೋಗ್ಯ ಮಂತ್ರಿ ಕೆ.ಕೆ.ಶೈಲಜಾ ಅವರು ಬುಧವಾರ ಕಿವಿನೋವಿನ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಏಳುವರ್ಷದ ಬಾಲಕನ ಬೇರೊಂದು ಅಂಗವನ್ನು ಶಸ್ತ್ರಚಿಕಿತ್ಸೆ ಮಾಡಿದ್ದ ಸರಕಾರಿ ವೈದ್ಯನನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಮಲಪ್ಪುರಂ ಜಿಲ್ಲೆಯ ಮಂಜೇರಿ ಮೆಡಿಕಲ್ ಕಾಲೇಜಿನಲ್ಲಿ ಕಿವಿ ಆಪರೇಶನ್ ಮಾಡಲು ಬಂದಿದ್ದ ಏಳು ವರ್ಷದ ಬಾಲಕನನ್ನು ಹರ್ನಿಯಾ ಆಪರೇಷನ್ ಮಾಡಿದ್ದೇ ಈ ವೈದ್ಯನ ಾಮಾನತಿಗೆ ಕಾರಣ ಎಂದು ಆರೋಗ್ಯ ಮಂತ್ರಿಯವರ ಕಚೇರಿಯು ಸ್ಪಷ್ಟ ಪಡಿಸಿದೆ. ಈ ವೈದ್ಯ ರೋಗಿಗೆ ಚಿಕಿತ್ಸೆ ನೀಡುವುದರಲ್ಲಿ ತೊಡಗಿದಾಗ ಅಸಡ್ಡೆ ತೋರಿಸಿದ್ದಾರೆ. ಇದರ ಬಗ್ಗೆ ಒಂದು ವಿವರವಾದ ತನಿಖೆಗೆ ಆದೇಶ ನೀಡಲಾಗಿದೆ ಮತ್ತು ಹುಡುಗನನ್ನು ರಾಜ್ಯ ಸರಕಾರದ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುವುದು “ಎಂದು ಶೈಲಾಜಾ ಅವರು ಹೇಳಿಕೆ ನೀಡಿದ್ದಾರೆ.

ಘಟನೆಯು ಬೆಳಕಿಗೆ ಬಂದ ಬಳಿಕ ಮೊದಲಿಗೆ ವೈದ್ಯನು ತನ್ನ ತಪ್ಪನ್ನು ಒಪ್ಪಿಕೊಳ್ಳುವ ಬದಲು ಆ ಬಾಲಕ ಹರ್ನಿಯಾ ಆಪರೇಶನ್ ಮಾಡಿಸಲೇ ಬಂದಿದ್ದ, ನನ್ನಿಂದ ಯಾವುದೇ ತಪ್ಪಾಗಿಲ್ಲ ಎಂದು ಸಮರ್ಥಿಸಿಕೊಂಡಿದ್ದ. ಬಾಲಕನ ಮನೆಯವರು ಗಲಾಟೆ ಎಬ್ಬಿಸಿ ವಿಷಯ ದೊಡ್ಡದಾದ ಬಳಿಕ ವೈದ್ಯ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಇನ್ನೊಬ್ಬ 7 ವರ್ಷದ ಬಾಲಕ ಹರ್ನಿಯಾ ಚಿಕಿತ್ಸೆಗಾಗಿ ಬಂದಿದ್ದ ಎನ್ನಲಾಗಿದ್ದು, ಆತನ ಚಿಕಿತ್ಸೆಯನ್ನು ಅಚಾತುರ್ಯದಿಂದ ವೈದ್ಯನು ಕಿವಿನೋವಿನ ಬಾಲಕನಿಗೆ ನೀಡಿದ್ದಾನೆ ಎಂದು ತಿಳಿದು ಬಂದಿದೆ.

Check Also

ಉಗ್ರರ ಗುಂಡಿಗೆ ಎದೆಯೊಡ್ಡಿದ್ದ ಜಮ್ಮು ಪೊಲೀಸ್ ಅಧಿಕಾರಿ ಅರ್ಶದ್ ಅಹ್ಮದ್ ಹುತಾತ್ಮ

101ಸಂದೇಶ ಇ-ಮ್ಯಾಗಝಿನ್: ಜೂನ್ 12 ರಂದು ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ …

Leave a Reply

Your email address will not be published. Required fields are marked *