Monday , September 16 2019
Breaking News
Home / ಆರೋಗ್ಯ / ಎನರ್ಜಿ ಡ್ರಿಂಕ್ ಸೇವನೆ ನಿಮ್ಮ ಮರಣಕ್ಕೆ ಕಾರಣವಾಗಬಹುದು

ಎನರ್ಜಿ ಡ್ರಿಂಕ್ ಸೇವನೆ ನಿಮ್ಮ ಮರಣಕ್ಕೆ ಕಾರಣವಾಗಬಹುದು

ಎನರ್ಜಿ ಡ್ರಿಂಕ್ಸ್ ಕುಡಿಯುವ ಅಭ್ಯಾಸವಿರುವವರಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು ಪತ್ತೆಯಾಗಿರುವ ಬಗ್ಗೆ ಅಧ್ಯಯನ ವರದಿಯೊಂದು ಬಹಿರಂಗ ಪಡಿಸಿದೆ.

ಸಂದೇಶ ಇ-ಮ್ಯಾಗಝಿನ್: ಎನರ್ಜಿ ಡ್ರಿಂಕ್ ಸೇವಿಸುವವರಲ್ಲಿ, ಅಧಿಕ ರಕ್ತದೊತ್ತಡ ,ಹೃದಯ ಸಂಬಂಧಿ ಸಮಸ್ಯೆ, ಮಿದುಳಿನ ರಕ್ತಸ್ರಾವ ಮತ್ತು ರಕ್ತನಾಳಗಳ ಸಮಸ್ಯೆಗಳು ಅತ್ಯಧಿಕ ಪ್ರಮಾಣದಲ್ಲಿ ಪತ್ತೆಯಾಗಿದ್ದು ಅಮೆರಿಕನ್ ಹಾರ್ಟ್ ಅಸೋಸಿಯೇಷನ್‌ನ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

ನಿದ್ರಾಹೀನತೆ ಅಥವಾ ಕಚೇರಿಯಲ್ಲಿ ಬಿಡುವಿಲ್ಲದ ಕೆಲಸ ಈ ಎಲ್ಲಾ ಸಮಸ್ಯೆಗಳಿಂದ ಬಳಲಿ ನೀವು ಒಂದು ಕ್ಯಾನ್ ಎನರ್ಜಿ ಡ್ರಿಂಕ್ ಸೇವನೆ ಮಾಡಿದರೆ ಅದರಿಂದ ನಿಮಗೆ ತಕ್ಷಣದ ಶಕ್ತಿ ಪ್ರಾಪ್ತಿಯಾಗಬಹುದು. ಆದರೆ ಅದು ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟು ಮಾಡುತ್ತದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಎನರ್ಜಿ ಡ್ರಿಂಕ್‌ಗಳು ಅತ್ಯಧಿಕ ಪ್ರಮಾಣದಲ್ಲಿ ಕೆಫೀನ್ ಅಂಶವನ್ನು ಒಳಗೊಂಡಿರುತ್ತದೆ. ಈ ಕೆಫೀನ್ ಗಂಭೀರ ಹೃದಯ ಸಮಸ್ಯೆ, ರಕ್ತ ಸಂಚಾರಅಥವಾ ಅಧಿಕ ರಕ್ತದೊತ್ತಡ ಸಮಸ್ಯೆಗಳಿಗೆ ಕಾರಣ ವಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ಸಂಬಂಧ ಸಮೀಕ್ಷೆಗೊಳಗಾದ ರೋಗಿಗಳ ಪೈಕಿ ಓರ್ವ ವ್ಯಕ್ತಿಯ ತಲೆಬುರುಡೆಯಲ್ಲಿ ರಂಧ್ರವುಂಟಾಗಿದ್ದು, ಆತ ಮಿದುಳು ರಕ್ತಸ್ರಾವದಿಂದ ಬಳಲುತ್ತಿದ್ದ. ವೈದ್ಯರ ಪ್ರಕಾರ ಅತಿಯಾದ ಎನರ್ಜಿ ಡ್ರಿಂಕ್ ಸೇವನೆ ಇದಕ್ಕೆ ಕಾರಣವಾಗಿತ್ತು.

ಇದರ ಜೊತೆಗೆ ಎನರ್ಜಿ ಡ್ರಿಂಕ್‌ಗಳು ಶರೀರದ ನಿರ್ಜಲೀಕರಣಕ್ಕೂ ಕಾರಣವಾಗಬಹುದು, ಇದು ವ್ಯಕ್ತಿಗಳಲ್ಲಿ ಮಾನಸಿಕ ಖಿನ್ನತೆಗೂ ಕಾರಣವಾಗುತ್ತದೆ, ನಿದ್ರಾಹೀನತೆಗೂ ಕಾರಣವಾಗಬಹುದು ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

Check Also

ಜೇನು ಶುದ್ಧವೋ ಅಶುದ್ಧವೋ ಅಂತ ಈ 4 ವಿಧಾನಗಳಿಂದ ಪರೀಕ್ಷೆ ಮಾಡಿ ನೋಡಿ

207ಸಂದೇಶ ಇ-ಮ್ಯಾಗಝಿನ್: ಜೇನು ಎಂಬುದು ಪ್ರಾಕೃತಿಕವಾಗಿ ದೊರೆಯುವಂತಹ ಒಂದು ಶುದ್ಧ ಆಹಾರ ಪದಾರ್ಥವಾಗಿದೆ. ಇದು ಸ್ವಾದದಲ್ಲಿ ಎಷ್ಟು ಸಿಹಿಯೋ ಅಷ್ಟೇ …

Leave a Reply

Your email address will not be published. Required fields are marked *