Tuesday , December 10 2019
Breaking News
Home / ರಾಷ್ಟ್ರೀಯ / ಕಾನೂನಿನ ಪ್ರಕಾರ ಅಯೋಧ್ಯೆ ತೀರ್ಪು ಮಸೀದಿಯ ಪರವಾಗಿ ಬರಬೇಕಾಗಿದೆ: ಡಿಎಂಕೆ ಮುಖಂಡ ಎ. ರಾಜಾ ಹೇಳಿಕೆ

ಕಾನೂನಿನ ಪ್ರಕಾರ ಅಯೋಧ್ಯೆ ತೀರ್ಪು ಮಸೀದಿಯ ಪರವಾಗಿ ಬರಬೇಕಾಗಿದೆ: ಡಿಎಂಕೆ ಮುಖಂಡ ಎ. ರಾಜಾ ಹೇಳಿಕೆ

ಸಂದೇಶ ಇ-ಮ್ಯಾಗಝಿನ್: ಅಯೋಧ್ಯೆ ವಿವಾದದಲ್ಲಿ ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ದಿನಂಪ್ರತಿ ವಿಚಾರಣೆ ನಡೆಯುತ್ತಿದೆ. ಪ್ರಕರಣದ ವಿಚಾರಣೆ ಅಕ್ಟೋಬರ್ 18 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಮುಖ್ಯ ಸುಪ್ರಿಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಮುಂದಿನ ತಿಂಗಳಲ್ಲಿಯೇ ನ್ಯಾಯಾಲಯವು ತನ್ನ ತೀರ್ಪನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇದರ ಮಧ್ಯೆ ಬಿಜೆಪಿ ಮತ್ತು ಇತರ ಪಕ್ಷಗಳ ಮುಖಂಡರ ಹೇಳಿಕೆಗಳು ಬರತೊಡಗಿವೆ. ಅಯೋಧ್ಯೆ ರಾಮ ಮಂದಿರದ ಪರವಾಗಿ ಬಿಜೆಪಿ ಮುಖಂಡರು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಇದೀಗ ಡಿಎಂಕೆ ಪಕ್ಷದ ಮುಖಂಡ ಎ. ರಾಜಾ ಬಾಬರಿ ಮಸೀದಿ ಪರವಾಗಿ ಹೇಳಿಕೆ ನೀಡಿದ್ದಾರೆ.

ಯಾವುದೇ ವ್ಯಕ್ತಿಯೂ ಇನ್ನೊಬ್ಬ ವ್ಯಕ್ತಿಯ ಮನೆಯಲ್ಲಿ ಆತನ ಅನುಮತಿಯೊಂದಿಗೆ 12 ವರ್ಷ ವಾಸಿಸಿದರೆ, ಮತ್ತು ಎಲ್ಲಾ ಸರಕಾರಿ ಮತ್ತು ಇನ್ನಿತರ ಪ್ರಕ್ರಿಯೆಗಳನ್ನು ಪೂರೈಸಿದ್ದರೆ ಆ ಮನೆ ಮತ್ತು ಸಂಪತ್ತು ಅಲ್ಲಿ ವಾಸಿಸಿದ ವ್ಯಕ್ತಿಯದ್ದಾಗಿರುತ್ತದೆ ಎಂದು ಕಾನೂನು ಹೇಳುತ್ತಿದೆ. ಆದುದರಿಂದ ಬಾಬರಿ ಮಸೀದಿ ಮುಸ್ಲಿಮರಿಗೆ ಸೇರಬೇಕಾದ ಸ್ವತ್ತಾಗಿದೆ ಎಂದು ಎ.ರಾಜಾ ಹೇಳಿದ್ದಾರೆ.

ಅಲ್ಲಿ 400 ವರ್ಷಗಳಿಂದ ಮಸೀದಿ ಮಾತ್ರ ಇತ್ತು. ಮತ್ತು ರಾಮನ ಜನ್ಮ 3 ಲಕ್ಷ ವರ್ಷಗಳ ಹಿಂದೆ ಆಗಿತ್ತು ಎನ್ನಲಾಗುತ್ತಿದೆ. ಇದಕ್ಕೆ ಯಾವುದೇ ಆಧಾರವಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ತೀರ್ಪು ಮಸೀದಿಯ ಪರವಾಗಿ ಬರಬೇಕಾಗಿದೆ ಎಂದು ರಾಜಾ ಹೇಳಿದ್ದಾರೆ.

ಆದರೂ ಕಾಶ್ಮೀರದಲ್ಲಿ 370 ವಿಧಿಯನ್ನು ತೆಗೆದು ಹಾಕಲಾಗುತ್ತದೆ ಎಂದು ನಾವು ಯಾವತ್ತೂ ಭಾವಿಸಿರಲಿಲ್ಲ. ಅದೂ ನಡೆದು ಹೋಯಿತು. ಇನ್ನು ಬಾಬರಿ ವಿಷಯದಲ್ಲಿ ಏನಾಗುತ್ತೋ ಹೇಳಲು ಸಾಧ್ಯವಿಲ್ಲ ಎಂದು ಡಿಎಂಕೆ ಮುಖಂಡ ಎ.ರಾಜ.

Check Also

ಗೋರಕ್‌ಪುರ ಮಕ್ಕಳ ಸಾವು ಪ್ರಕರಣ: ವೈದ್ಯ ಕಫೀಲ್ ಖಾನ್ ಆರೋಪ ಮುಕ್ತ

ಸಂದೇಶ ಇ-ಮ್ಯಾಗಝಿನ್: ಗೋರಕ್‌ಪುರದ ಬಿಆರ್‌ಡಿ ಮೆಡಿಕಲ್ ಕಾಲೇಜ್ ನಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ನಡೆದ ಮಕ್ಕಳ ಸಾಮೂಹಿಕ ಸಾವು …

Leave a Reply

Your email address will not be published. Required fields are marked *