Monday , July 22 2019
Breaking News
Home / ಕರಾವಳಿ / ತನ್ನ ಮದುವೆಯಲ್ಲಿ ಊರಿನ ಮುಸ್ಲಿಮರಿಗೆ ಇಫ್ತಾರ್ ಕೂಟ ಏರ್ಪಡಿಸಿದ ಹಿಂದೂ ಮದುಮಗ

ತನ್ನ ಮದುವೆಯಲ್ಲಿ ಊರಿನ ಮುಸ್ಲಿಮರಿಗೆ ಇಫ್ತಾರ್ ಕೂಟ ಏರ್ಪಡಿಸಿದ ಹಿಂದೂ ಮದುಮಗ

ಸಂದೇಶ ಇ-ಮ್ಯಾಗಝಿನ್: ದಕ್ಷಿಣ ಕನ್ನಡ ಜಿಲ್ಲೆ ಎಂದರೆ ಸಾಮಾನ್ಯವಾಗಿ ರಾಜ್ಯದ ಇತರ ಕಡೆಯ ಜನರು ಕೋಮುಗಲಭೆ, ಹಿಂದೂ ಮುಸ್ಲಿಮ್ ಅಶಾಂತಿ ಇದೇ ಆಗಿದೆ. ಇಲ್ಲಿ ಅಂತಹ ಧರ್ಮಾಂದ ವಾತಾವರಣವಿರುವುದು ಸುಳ್ಳಲ್ಲ. ಆದರೆ ಧರ್ಮಾಂದರ ನಡುವೆ ಕೋಮು ಸೌಹಾರ್ದ ಬಯಸೋ ಜನರೂ ಇದ್ದಾರೆ ಎಂಬುದು ಸಮಾಧಾನಕರ ಸಂಗತಿ. ಇತ್ತೀಚೆಗೆ ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರ್ ಗ್ರಾಮದ ಕುಕ್ಕಿಲ ಎಂಬಲ್ಲಿನ ನಿವಾಸಿ ಹಿಂದೂ ಯುವಕನೊಬ್ಬ ತನ್ನ ಮದುವೆಗೆ ಊರಿನ ಮುಸ್ಲಿಮರೆಲ್ಲರನ್ನೂ ಆಹ್ವಾನಿಸಿ ಇಫ್ತಾರ್ ಕೂಟ ಏರ್ಪಡಿಸಿ ಕೋಮು ಸೌಹಾರ್ದತೆ ಸಾರುವ ಮಹತ್ವದ ಘಟನೆ ವರದಿಯಾಗಿದೆ. ಕುಕ್ಕಿಲ ಗ್ರಾಮದ ಜತ್ತಪ್ಪ ಮೇಸ್ತ್ರಿ ಎಂಬವರ ಮಗ ಧನಂಜಯ ಎಂಬವರು ತಮ್ಮ ಮದುವೆಗೆ ಊರಿನ ಮುಸ್ಲಿಮರೆಲ್ಲರನ್ನೂ ಆಹ್ವಾನಿಸಿದ್ದರು. ಆದರೆ ರಂಝಾನ್ ಉಪವಾಸ ಇರುವ ಕಾರಣ ಮುಸ್ಲಿಮರಿಗೆ ಮದುವೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಕಾರಣ ಪ್ರತ್ಯೇಕವಾಗಿ ಇಫ್ತಾರ್ ಕೂಟ ಆಯೋಜಿಸಿ ಭೋಜನ ವ್ಯವಸ್ಥೆ ಮಾಡಲಾಗಿದೆ.

ಈ ಇಫ್ತಾರ್ ಕೂಟದಲ್ಲಿ ಧನಂಜಯ ಮತ್ತವರ ತಂದೆ ಜತ್ತಪ್ಪ, ಚಿಕ್ಕಪ್ಪ ಪೂವಪ್ಪ ಮುಂತಾದವರು ಮುಸ್ಲಿಮರ ಜೊತೆ ಕುಳಿತು ಇಫ್ತಾರ್ ಮಾಡುವ ಮೂಲಕ ಊರಿನ ಐಕ್ಯತೆ ಪ್ರಕಟಿಸಿದ್ದಾರೆ. ಈ ಊರಿನಲ್ಲಿ ಹಿಂದಿನಿಂದಲೂ ಹಿಂದು- ಮುಸ್ಲಿಮ್ ಸೌಹಾರ್ದ ಸಹಕಾರದ ವಾತಾವರಣವಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಏನೇ ಆದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯದಲ್ಲೆಲ್ಲೂ ಕಾಣದಂತಹ ಇಂತಹ ಒಂದು ಸೌಹಾರ್ದ ಘಟನೆ ನಡೆದಿರುವುದು ಇಡೀ ಜಿಲ್ಲೆಯ ಜನರಿಗೆ ಖುಷಿಯ ವಿಚಾರ.

Check Also

ಕಳೆದ 14 ವರ್ಷಗಳಿಂದ ರಂಝಾನಿನ ಕೊನೆಯ ಜುಮಾ ಉಪವಾಸ ವೃತ ಹಿಡಿಯುತ್ತಿರುವ ಹಿಂದೂ ಕುಟುಂಬ

3116ಸಂದೇಶ ಇ-ಮ್ಯಾಗಝಿನ್: ಉತ್ತರಾಖಂಡ್‌ನ ರಾಣಿಖೇತ್ ಮೂಲದ ಗಂಗೋಲಿ ಪರಿವಾರ ವಿಶಿಷ್ಟ ಕಾರಣಕ್ಕಾಗಿ ಕಳೆದ 14 ವರ್ಷಗಳಿಂದ ರಂಝಾನ್ ತಿಂಗಳ ಕೊನೆಯ …

Leave a Reply

Your email address will not be published. Required fields are marked *