Tuesday , December 10 2019
Breaking News
Image Credit: mathrubhumi.com
Home / ವಿಶೇಷ / ಅತೀ ಉದ್ದದ ಕುರ್‌ಆನ್ ಬರೆಯುವ ಮೂಲಕ ವಲ್ಡ್ ರೆಕಾರ್ಡ್‌ಗೆ ಮುಂದಾಗಿದ್ದಾರೆ ಕೇರಳದ ದಿಲೀಪ್

ಅತೀ ಉದ್ದದ ಕುರ್‌ಆನ್ ಬರೆಯುವ ಮೂಲಕ ವಲ್ಡ್ ರೆಕಾರ್ಡ್‌ಗೆ ಮುಂದಾಗಿದ್ದಾರೆ ಕೇರಳದ ದಿಲೀಪ್

ಸಂದೇಶ ಇ-ಮ್ಯಾಗಝಿನ್: ಒಂದು ಕಿಲೋಮೀಟರ್ ಉದ್ದದ ಕ್ಯಾನ್ವಾಸ್‌ನಲ್ಲಿ ಕೈಬರಹದ ಕುರ್‌ಆನ್ ತಯಾರಿಸುವ ಮೂಲಕ ತನ್ನ ಹೆಸರಿನಲ್ಲಿ ಗಿನ್ನೆಸ್ ವಿಶ್ವ ದಾಖಲೆ ಬರೆಯುವ ಕನಸನ್ನು ಈಡೇರಿಸುವ ಉದ್ದೇಶದಿಂದ ಕೋಝಿಕ್ಕೋಡ್‌ನ ಮುಕ್ಕೊಮ್ ಮೂಲದ ವ್ಯಂಗ್ಯಚಿತ್ರಕಾರ ಎಂ. ದಿಲೀಪ್ ಕಾರ್ಯಪ್ರವೃತ್ತರಾಗಿದ್ದಾರೆ.

ಈ ಕಾರ್ಯಾಚರಣೆಯ ಮೊದಲ ಹಂತವಾಗಿ ದಿಲೀಪ್ 300 ಮೀಟರ್ ಉದ್ದದ ಕುರಾನ್ ಹಸ್ತಪ್ರತಿಯನ್ನು ಸಿದ್ಧಪಡಿಸಿದ್ದು, ಇದನ್ನು ಶುಕ್ರವಾರ ಪತ್ರಕರ್ತರ ಸಮ್ಮುಖದಲ್ಲಿ ಸ್ವಾಮಿ ಸಂದೀಪಾನಂದ ಗಿರಿ ಬಿಡುಗಡೆ ಗೊಳಿಸಿದರು.

“ನಾನು ಅತಿ ಹೆಚ್ಚು ಉದ್ದದ ಕೈ ಬರಹದ ಕುರಾನ್ ತಯಾರಿಸುವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅನ್ನು ಪ್ರವೇಶಿಸಲು ಬಯಸುತ್ತೇನೆ. ನಾನು 3 ವರ್ಷಗಳಲ್ಲಿ ಈ ಕೆಲಸವನ್ನು ಪೂರ್ಣಗೊಳಿಸಲು ಯೋಜಿಸುತ್ತಿದ್ದೇನೆ ”ಎಂದು ದಿಲೀಪ್ ಹೇಳಿದರು.

2016 ರಲ್ಲಿ ಅತೀ ದೊಡ್ಡ ಬ್ರಾಡ್ ಮಿಂಟನ್ ರ್ಯಾಕೆಟ್ ನಿರ್ಮಿಸುವ ಮೂಲಕ ದಿಲೀಪ್ ಈಗಾಲೇ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ತಮ್ಮ ಹೆಸರನ್ನು ಬರೆಸಿಕೊಂಡಿದ್ದಾರೆ. ಇದೀಗ ಅತೀ ಉದ್ದದ ಹಸ್ತ ಪ್ರತಿ ಕುರ್‌ಆನ್ ಮೂಲಕ ಮತ್ತೊಮ್ಮೆ ವಲ್ಡ್ ರೆಕಾರ್ಡ್‌ಗೆ ಮುಂದಾಗಿದ್ದಾರೆ. ಅವರ ದೀರ್ಘ ಕೈ ಬರಹದ ಕುರಾನ್ ಅನ್ನು ಶಾರ್ಜಾ, ಯುಕೆ ಮತ್ತು ಇಸ್ತಾಂಬುಲ್‌ನಲ್ಲಿ ಪ್ರದರ್ಶಿಸಲಾಗುವುದು.

Check Also

ಕೆಎಸ್ಆರ್ಟಿಸಿ ಬಸ್ಸನ್ನು ಆಂಬುಲೆನ್ಸ್ ಮಾಡಿ ಮಹಿಳೆಯ ಜೀವ ರಕ್ಷಿಸಿದ ಚಾಲಕ ಮತ್ತು ನಿರ್ವಾಹಕ-ವ್ಯಾಪಕ ಪ್ರಶಂಸೆ

ಸಂದೇಶ ಇ-ಮ್ಯಾಗಝಿನ್: ಕೇರಳದ ಕೆಎಸ್ಆರ್ಟಿಸಿ ಚಾಲಕ ಮತ್ತು ಕಂಡಕ್ಟರ್ ಬಸ್ಸಿನಲ್ಲಿ ಪ್ರಯಾಣಿಸುವಾಗ ಎದೆ ನೋವಿನಿಂದ ಅಸ್ವಸ್ಥರಾದ ಮಹಿಳಾ ಪ್ರಯಾಣಿಕರೊಬ್ಬರನ್ನು ಸಮಯಕ್ಕೆ …

Leave a Reply

Your email address will not be published. Required fields are marked *