Monday , August 26 2019
Breaking News
Home / ರಾಜಕೀಯ / ಮಾಬ್ ಲಿಂಚಿಂಗ್‌ಗೆ ಆರೆಸ್ಸೆಸ್ ಮತ್ತು ಬಿಜೆಪಿಯ ಮನಸ್ಥಿತಿ ಕಾರಣ: ದಿಗ್ವಿಜಯ್ ಸಿಂಗ್ ಆರೋಪ

ಮಾಬ್ ಲಿಂಚಿಂಗ್‌ಗೆ ಆರೆಸ್ಸೆಸ್ ಮತ್ತು ಬಿಜೆಪಿಯ ಮನಸ್ಥಿತಿ ಕಾರಣ: ದಿಗ್ವಿಜಯ್ ಸಿಂಗ್ ಆರೋಪ

ಸಂದೇಶ ಇ-ಮ್ಯಾಗಝಿನ್: ಇಂದೋರ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮದ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಇಂದು ದೇಶದಲ್ಲಿ ಬೆಳೆಯುತ್ತಿರುವ ದ್ವೇಷ ಮನಸ್ಥಿತಿಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ನ ಸಿದ್ಧಾಂತ ಕಾರಣ ಎಂದು ಆರೋಪಿಸಿದ್ದಾರೆ. ದೇಶದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಮಾಬ್ ಲಿಂಚಿಂಗ್ ಗೆ ಎರಡು ಕಾರಣಗಳನ್ನು ಉಲ್ಲೇಖಿಸಿದ ದಿಗ್ವಿಜಯ್, ಮೊದಲನೆಯದಾಗಿ ಸಂತ್ರಸ್ತರಿಗೆ ಇಂತಹ ಪ್ರಕರಣಗಳಲ್ಲಿ ಸಮಯೋಚಿತ ನ್ಯಾಯ ದೊರೆಯುವುದಿಲ್ಲ. ಇದು ಅಪರಾಧಿಗಳಿಗೆ ಮತ್ತಷ್ಟು ಪ್ರೇರಣೆಯಾಗುತ್ತದೆ. ಎರಡನೇ ಕಾರಣ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಮನಸ್ಥಿತಿ ಎಂದರು. ಜೂನ್ 26 ರಂದು ಪುರಸಭೆಯ ಅಧಿಕಾರಿ ಧಿರೇಂದ್ರ ಬಯಾಸ್ ಅವರನ್ನು ಬ್ಯಾಟ್‌ನಿಂದ ಹೊಡೆದ ಬಿಜೆಪಿಯ ಆಕಾಶ್ ವಿಜಯವರ್ಗಿಯ ಅವರ ಪ್ರಕರಣವನ್ನು ಉಲ್ಲೇಖಿಸಿದ ದಿಗ್ವಿಜಯ್ ಸಿಂಗ್ ಇದೂ ಕೂಡ ಆರೆಸ್ಸೆಸ್ ಮನಸ್ಥಿತಿ ಎಂದರು.

ಮದ್ಯಪ್ರದೇಶದ ಪ್ರಮುಖ ಕಾಂಗ್ರೇಸ್ ಮುಖಂಡರಾಗಿರುವ ದಿಗ್ವಿಜಯ್ ಸಿಂಗ್ ಎರಡು ಬಾರಿ ಮದ್ಯಪ್ರದೇಶದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಭೋಪಾಲ್ ನಲ್ಲಿ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದರು.

Check Also

ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಮರಲ್ಲ: ಮುಕ್ತಾರ್ ಅಬ್ಬಾಸ್ ನಖ್ವಿ

101ಸಂದೇಶ ಇ-ಮ್ಯಾಗಝಿನ್: ಅಲ್ಪಸಂಖ್ಯಾತ ಪದವು ಮುಸ್ಲಿಮರನ್ನು ಮಾತ್ರ ಸೂಚಿಸುವುದಿಲ್ಲ ನಮ್ಮ ದೇಶದಲ್ಲಿ ಜೈನರು, ಬೌದ್ಧರು, ಕ್ರಿಶ್ಚಿಯನ್ನರು, ಪಾರ್ಸಿಗಳು ಮತ್ತು ಸಿಖ್ಖರು …

Leave a Reply

Your email address will not be published. Required fields are marked *