ಇತ್ತೀಚೆಗೆ ವೈದ್ಯ ವಿಜ್ಞಾನಿಗಳ ತಂಡವೊಂದು ನಡೆಸಿರುವ ನೂತನ ಅಧ್ಯಯನವೊಂದು ನೀವು ಕಡೆಗಣಿಸಲೇಬಾರದ ಏಳು ಮಧುಮೇಹದ ಲಕ್ಷಣಗಳನ್ನು ಪಟ್ಟಿ ಮಾಡಿದೆ. ಈ ಲಕ್ಷಣಗಳು ಕಾಣಿಸಿ ಕೊಂಡರೆ ನಿಮ್ಮ ಶರೀರಕ್ಕೆ ಮಧುಮೇಹ ಕಾಯಿಲೆ ಏನಾದರೂ ಲಗ್ಗೆ ಇಟ್ಟಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಶೀಘ್ರ ವೈದ್ಯರನ್ನು ಭೇಟಿಯಾಗಿ ತಪಾಸಣೆ ನಡೆಸುವುದು ಉತ್ತಮ.
1. ಅತ್ಯಂತ ಹೆಚ್ಚಿನ ಬಾಯಾರಿಕೆ:
ಎಷ್ಟು ನೀರು ಕುಡಿದರೂ ತಣಿಯದ ಬಾಯಾರಿಕೆ ಇದು ಮಧುಮೇಹದ ಲಕ್ಷಣವಾಗಿರುವ ಸಾಧ್ಯತೆ ಇದೆಯಂತೆ.

2. ಮೂತ್ರವಿಸರ್ಜನೆ:
ಸಾಮಾನ್ಯವಾಗಿ ನಾವು ಮೂತ್ರ ವಿಸರ್ಜಿಸುವುದಕ್ಕಿಂತ ಭಿನ್ನವಾಗಿ ಆಗಾಗ್ಗೆ ಮೂತ್ರ ವಿರ್ಸಜನೆಗೆ ಬರುವುದು. ಹೆಚ್ಚಾಗಿ ರಾತ್ರಿ ಸಮಯದಲ್ಲಿ.

3. ತುಂಬ ಆಯಾಸವಾದಂತೆ ಅನಿಸುವುದು:
ಶರೀರದಲ್ಲಿ ತೀವ್ರ ಅಶಕ್ತಿ ಆಯಾಸದ ಅನುಭವವಾಗುವುದು, ಇದು ಮಧುಮೇಹದ ಲಕ್ಷಣವಾಗಿರುವ ಸಾಧ್ಯತೆ ಇದೆಯಂತೆ.

4. ದೇಹದತೂಕ ಇಳಿಕೆ:
ಅತ್ಯಂತ ವೇಗವಾಗಿ ದೇಹದ ತೂಕ ಕಳೆದುಕೊಳ್ಳುವುದು. ಉದೂ ಕೂಡ ಮಧುಮೇಹದ ಲಕ್ಷಣವಾಗಿರುವ ಸಾಧ್ಯತೆ ಇದೆಯಂತೆ.

5. ಗುಪ್ತಾಂಗದ ಸುತ್ತ ತುರಿಕೆ:
ವ್ಯಕ್ತಿಯ ಜನನಾಂಗದ ಸುತ್ತ ತುರಿಕೆ ಕಾಣಿಸಿ ಕೊಳ್ಳುವುದು. ಎಷ್ಟು ತುರಿಸಿದರೂ ತುರಿಕೆ ಅಧಿಕವಾಗುವುದು.

6. ಗಾಯಗಳು ತುಂಬ ನಿಧಾನವಾಗಿ ಒಣಗುವುದು:
ಶರೀರದಲ್ಲಿ ಯಾವುದಾದರೂ ಗಾಯವಾದರೆ ಆ ಗಾಯ ಗುಣವಾಗುವುದೇ ಇಲ್ಲ. ಅಥವಾ ನಿಧಾನವಾಗಿ ಗುಣವಾಗುವುದು.

7. ದೃಷ್ಟಿ ಮಸುಕಾಗುವುದು:
ಕಣ್ಣಿನ ದೃಷ್ಟಿ ಮಸುಕಾಗುವುದು ಇದೂ ಕೂಡ ಮಧುಮೇಹದ ಲಕ್ಷಣವಾಗಿರುವ ಸಾಧ್ಯತೆ ಇದೆಯಂತೆ.

ನಿಮಗೆ ಈ ಮೇಲಿನ ಲಕ್ಷಣಗಳು ತುಂಬ ಗಂಭೀರವಾಗಿ ಕಂಡು ಬರದಿರಬಹುದು ಮತ್ತು ಬೇರೆ ಕಾರಣಗಳಿಂದಲೂ ಇವು ಕಾಣಿಸಿಕೊಂಡಿರಬಹುದು. ಆದರೂ ಇವುಗಳನ್ನು ಕಡೆಗಣಿಸದೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.