Monday , August 26 2019
Breaking News
Home / ಕ್ರೀಡೆ / ಈ ಕಾರಣದಿಂದಾಗಿ ಧೋನಿ ಇಮ್ರಾನ್ ತಾಹಿರ್ ವಿಕೆಟ್ ಪಡೆದ ತಕ್ಷಣ ಆಲಂಗಿಸುವುದಿಲ್ಲವಂತೆ

ಈ ಕಾರಣದಿಂದಾಗಿ ಧೋನಿ ಇಮ್ರಾನ್ ತಾಹಿರ್ ವಿಕೆಟ್ ಪಡೆದ ತಕ್ಷಣ ಆಲಂಗಿಸುವುದಿಲ್ಲವಂತೆ

ಸಂದೇಶ ಇ-ಮ್ಯಾಗಝಿನ್: ಇಂಡಿಯನ್ ಪ್ರೀಮಿಯರ್ ಲೀಗ್‍ನ 12 ನೇ ಆವೃತ್ತಿಯ ಬುಧವಾರ ನಡೆದ ಚೆನ್ನೈ ಹಾಗೂ ದೆಹಲಿ ನಡುವಿನ ಪಂದ್ಯದಲ್ಲಿ ಚೆನ್ನೈ ತಂಡವು ದೆಹಲಿಯನ್ನು 80 ರನ್ನು ಗಳ ಅಂತರದಿಂದ ಸೋಲಿಸಿದೆ. ಈ ಪಂದ್ಯ ಜಯಿಸಲು ಮಹತ್ವಪೂರ್ಣ ಕೊಡುಗೆ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಪಿನ್ನರ್ ಇಮ್ರಾನ್ ತಾಹಿರ್ ಅವರ ಬಗ್ಗೆ ತಂಡದ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಮನ ಬಿಚ್ಚಿ ಮಾತನಾಡಿದ್ದಾರೆ. ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ಮೂಲದ ತಾಹಿರ್ 3.2 ಓವರ್‌ಗಳಲ್ಲಿ ಕೇವಲ 12 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದ್ದಾರೆ. ಪಂದ್ಯದಲ್ಲಿ ತಾಹಿರ್‍‌ಗೆ ಮ್ಯಾನ್ ಆಫ್ ದಿ ಮ್ಯಾನ್ ಸಿಗಲಿಲ್ಲವಾದರೂ ತಾಹಿರ್ ಅವರ ಪ್ರದರ್ಶನ ಅಧ್ಬುತವಾಗಿತ್ತು ಎಂದು ಸ್ವತಃ ಧೋನಿ ತಾಹಿರ್ ಅವರನ್ನು ಕೊಂಡಾಡಿದ್ದಾರೆ. ಇದರ ಜೊತೆಗೆ ಧೋನಿ ತಾಹಿರ್ ಅವರ ಬಗ್ಗೆ ಇನ್ನೊಂದು ರೋಚಕ ರಹಸ್ಯ ಬಿಚ್ಚಿಟ್ಟಿದ್ದಾರೆ.

ನಾವು ನೀವೆಲ್ಲ ನೋಡಿದ ಹಾಗೆ ಇಮ್ರಾನ್ ತಾಹಿರ್ ವಿಕೆಟ್ ಪಡೆದ ಬಳಿಕ ತುಂಬಾ ದೂರ ಓಡುವುದು ಅವರ ಅಭ್ಯಾಸ, ಇದೇ ಕಾರಣದಿಂದಾಗಿ ಧೋನಿ ಹಾಗೂ ವಾಟ್ಸನ್ ಚರ್ಚಿಸಿ ಇಮ್ರಾನ್ ತಾಹಿರ್ ಅವರು ವಿಕೆಟ್ ಪಡೆದು ಸಂಭ್ರಮಿಸುವಾಗ ಅವರ ಬಳಿ ಹೋಗದೆ ಅವರು ದೂರ ಹೋಗಿ ಬಂದ ಬಳಿಕ ಅವರನ್ನು ಅಭಿನಂದಿಸಲು ತೀರ್ಮಾನಿಸಿದೆವು ಇದರಿಂದಾಗಿ ದೂರ ಹೋಗುವ ನಮ್ಮ ಕಷ್ಟ ತಪ್ಪಿತು ಎಂದು ಧೋನಿ ಹಾಸ್ಯ ಮಾಡಿದ್ದಾರೆ.

Check Also

ವಲ್ಡ್ ಕಪ್ ಫೈನಲ್: ಕಳಪೆ ಅಂಪಾಯರಿಂಗ್ ಬಗ್ಗೆ ಕೊನೆಗೂ ಮೌನ ಮುರಿದ ಐಸಿಸಿ

000ಸಂದೇಶ ಇ-ಮ್ಯಾಗಝಿನ್: 2019 ರ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ವಿವಾದಾತ್ಮಕ ಪಂದ್ಯವಾಗಿ ಮಾರ್ಪಟ್ಟಿದೆ. ಏಕೆಂದರೆ ಮಾಜಿ ಅಂತರರಾಷ್ಟ್ರೀಯ ಅಂಪೈರ್ …

Leave a Reply

Your email address will not be published. Required fields are marked *