Monday , August 26 2019
Breaking News
Home / ಕ್ರೀಡೆ / ಪಂದ್ಯ ಸೋತರೂ ಈ ಕಾರಣದಿಂದಾಗಿ ಧೋನಿ ಪ್ರೇಕ್ಷಕರ ಮನಗೆದ್ದರು

ಪಂದ್ಯ ಸೋತರೂ ಈ ಕಾರಣದಿಂದಾಗಿ ಧೋನಿ ಪ್ರೇಕ್ಷಕರ ಮನಗೆದ್ದರು

ಸಂದೇಶ ಇ-ಮ್ಯಾಗಝಿನ್: ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಟೂರ್ನಿಯಲ್ಲಿ ಮೊದಲಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ಎದುರು ಸೋಲಿನ ರುಚಿ ಕಂಡಿತು. ಆದರೂ ತಂಡದ ನಾಯಕ ಮಹೇಂಧ್ರಸಿಂಗ್ ಧೋನಿ ಎಲ್ಲರ ಹೃದಯ ಗೆದ್ದಿದ್ದಾರೆ. ವಾಖಂಡೆ ಮೈದಾನದಲ್ಲಿ ಸೋಲಿನ ಬಳಿಕ ಧೋನಿ ತಮಗಾಗಿ ಕಾಯುತ್ತಿದ್ದ ಹಿರಿಯ ಅಜ್ಜಿಯೊಬ್ಬರನ್ನು ಭೇಟಿಯಾದರು. ಅಜ್ಜಿ ಮೊದಲೇ ‘ನಾನು ಇಲ್ಲಿಗೆ ಧೋನಿಗಾಗಿ ಬಂದಿದ್ದೇನೆ ಎಂಬ ಪೋಸ್ಟರ್ ಹಿಡಿದು ನಿಂತಿದ್ದರು. ಪಂದ್ಯ ಮುಗಿದ ಬಳಿಕ ಧೋನಿ ಅಜ್ಜಿಯನ್ನು ಭೇಟಿಯಾದರು. ಅಜ್ಜಿಯ ಜೊತೆಗೆ ಅವರ ಮೊಮ್ಮಗಳು ಕೂಡ ಇದ್ದರು. ಬಳಿಕ ಅಜ್ಜಿ ಧೋನಿಯನ್ನು ಆಶಿರ್ವದಿಸಿದರು. ಧೋನಿ ಅಜ್ಜಿಯ ಜೊತೆಗೆ ಕೆಲವೊಂದು ಸೆಲ್ಪಿ ಕ್ಲಿಕ್ಕಿಸಿದರು. ಆ ನಂತರ ಧೋನಿ ಚೈನ್ನೈ ಸೂಪರ್ ಕಿಂಗ್ಸ್ ತಂಡದ ಶರ್ಟ್‌ಗೆ ಅಜ್ಜಿ ಯಿಂದ ಆಟೋಗ್ರಾಫ್ ಪಡೆದರು. ಧೋನಿ ಅಜ್ಜಿಗೆ ನೀಡಿದ ಗೌರವ ನೆಟ್ಟಿಗರ ಮನ ಗೆದ್ದಿದು, ಆ ಹಿರಿಯ ಜೀವದೊಂದಿಗೆ ಧೋನಿಯ ವರ್ತನೆ ಅದ್ಬುತವಾಗಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Check Also

ವಲ್ಡ್ ಕಪ್ ಫೈನಲ್: ಕಳಪೆ ಅಂಪಾಯರಿಂಗ್ ಬಗ್ಗೆ ಕೊನೆಗೂ ಮೌನ ಮುರಿದ ಐಸಿಸಿ

000ಸಂದೇಶ ಇ-ಮ್ಯಾಗಝಿನ್: 2019 ರ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ವಿವಾದಾತ್ಮಕ ಪಂದ್ಯವಾಗಿ ಮಾರ್ಪಟ್ಟಿದೆ. ಏಕೆಂದರೆ ಮಾಜಿ ಅಂತರರಾಷ್ಟ್ರೀಯ ಅಂಪೈರ್ …

Leave a Reply

Your email address will not be published. Required fields are marked *