Friday , November 15 2019
Breaking News
Home / ಕ್ರೀಡೆ / ನ್ಯೂಝಿಲ್ಯಾಂಡ್ ವಿರುದ್ಧ ರನ್ ಔಟ್ ಆಗಿ ತೆರಳುವಾಗ ಧೋನಿ ಅಳುವ ವೀಡಿಯೋ ವೈರಲ್

ನ್ಯೂಝಿಲ್ಯಾಂಡ್ ವಿರುದ್ಧ ರನ್ ಔಟ್ ಆಗಿ ತೆರಳುವಾಗ ಧೋನಿ ಅಳುವ ವೀಡಿಯೋ ವೈರಲ್

ಸಂದೇಶ ಇ-ಮ್ಯಾಗಝಿನ್: ಭಾರತಕ್ಕೆ ಅಗತ್ಯವಿರುವಾಗೆಲ್ಲ ಲೆಕ್ಕವಿಲ್ಲದಷ್ಟು ಬಾರಿ ಮಹೇಂದ್ರ ಸಿಂಗ್ ಧೋನಿ ಜವಾಬ್ದಾರಿಯನ್ನು ಹೊತ್ತುಕೊಂಡು ತಂಡವನ್ನು ಅಂತಿಮ ಗೆರೆ ದಾಟಿಸಿದ್ದಾರೆ. ಬುಧವಾರ ಅಂತಹ ಒಂದು ಸಂದರ್ಭ ಅರಿಗೆ ಮತ್ತೆ ಒದಗಿ ಬಂದಿತ್ತು. ಅವರು ಮತ್ತೆ ಜವಾಬ್ದಾರಿ ಹೊತ್ತು ತಂಡವನ್ನು ಗೆಲುವಿನ ಗಡಿ ದಾಟಿಸುತ್ತಾರೆ ಎಂದು ಆಶಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ವಿಶ್ವಕಪ್ ಮೊದಲ ಸೆಮಿಫೈನಲ್‌ನಲ್ಲಿ ಭಾರತವು ನ್ಯೂಜಿಲೆಂಡ್ ವಿರುದ್ಧ 18 ರನ್‌ಗಳ ಸೋಲನುಭವಿಸಿತು. ಪಂದ್ಯಾವಳಿಯುದ್ದಕ್ಕೂ ನಿಧಾನ ಗತಿಯ ಆಟದ ಕಾರಣಕ್ಕೆ ಟೀಕೆಗೆ ಗುರಿಯಾಗಿದ್ದ ಧೋನಿಗೆ ತಂಡದ ಮಾಜಿ ಸಹ ಆಟಗಾರರೇ ಇದೀಗ ಎದುರಾಳಿಗಳಾಗಿದ್ದು ವಿಪರ್ಯಾಸ. ಕ್ರಿಕೆಟ್ ವೃತ್ತಿ ಜೀವನದ ನಿವೃತ್ತಿಯ ಹೊಸ್ತಿಲಲ್ಲಿರುವ 38 ರ ಹರೆಯದ ಧೋನಿ ನಿನ್ನೆ ತಮ್ಮ ಕೊನೆಯ ವಲ್ಡ್ ಕಪ್ ಪಂದ್ಯದಲ್ಲಿ ಔಟಾಗಿ ಹೋಗುವಾಗ ಭಾವುಕರಾಗಿ ಅಳುವ ವೀಡಿಯೋ ಒಂದು ವೈರಲ್ ಆಗಿದೆ.

ಕ್ಯಾಪ್ಟನ್ ಕೂಲ್ ಎಂದೇ ಹೆಸರಾಗಿರುವ ಧೋನಿ ಯಾವತ್ತೂ ಸಂಯಮ ಕಳೆದುಕೊಂಡು ಅತ್ತಿದ್ದಿಲ್ಲ. ನಿನ್ನೆಯ ಪಂದ್ಯದಲ್ಲಿ ಭಾವುಕರಾಗಿ ಅತ್ತಿದ್ದು, ಅವರ ಅಭಿಮಾನಿಗಳಿಗೂ ಬೇಸರ ತಂದಿದೆ. ಇದೀಗ ಧೋನಿಯ ಅಭಿಮಾನಿಗಳು ಧೋನಿಯನ್ನು ವಿಮರ್ಶೆ ಮಾಡುವ ಜನರಿಗೆ ಉತ್ತರವಾಗಿ ಕಳೆದ ಒಂದುವರೆ ದಶಕದಲ್ಲಿ ಅವರು ಭಾರತದ ಕ್ರಿಕೆಟ್‍ಗೆ ನೀಡಿದ ಮಹತ್ವ ಪೂರ್ಣ ಕೊಡುಗೆಯನ್ನು ಉಲ್ಲೇಖಿಸಿ #ThankYouMSD ಹ್ಯಾಶ್ ಟ್ಯಾಗ್ ಅಭಿಯಾನ ಪ್ರಾರಂಭಿಸಿದ್ದಾರೆ.

Check Also

ವಲ್ಡ್ ಕಪ್ ಫೈನಲ್: ಕಳಪೆ ಅಂಪಾಯರಿಂಗ್ ಬಗ್ಗೆ ಕೊನೆಗೂ ಮೌನ ಮುರಿದ ಐಸಿಸಿ

ಸಂದೇಶ ಇ-ಮ್ಯಾಗಝಿನ್: 2019 ರ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ವಿವಾದಾತ್ಮಕ ಪಂದ್ಯವಾಗಿ ಮಾರ್ಪಟ್ಟಿದೆ. ಏಕೆಂದರೆ ಮಾಜಿ ಅಂತರರಾಷ್ಟ್ರೀಯ ಅಂಪೈರ್ …

Leave a Reply

Your email address will not be published. Required fields are marked *