Friday , November 15 2019
Breaking News
Home / ರಾಷ್ಟ್ರೀಯ / ದೆಹಲಿ: ಮುಸ್ಲಿಮ್ ಆಟೋ ಚಾಲಕನಿಗೆ ಬಾಡಿಗೆ ಮಾಡದಂತೆ ಹಲ್ಲೆಗೆ ಯತ್ನ

ದೆಹಲಿ: ಮುಸ್ಲಿಮ್ ಆಟೋ ಚಾಲಕನಿಗೆ ಬಾಡಿಗೆ ಮಾಡದಂತೆ ಹಲ್ಲೆಗೆ ಯತ್ನ

ಸಂದೇಶ ಇ-ಮ್ಯಾಗಝಿನ್: ದೆಹಲಿಯಲ್ಲಿ ಅಪರಿಚಿತ ದುಷ್ಕರ್ಮಿಯೊಬ್ಬ 48 ವರ್ಷದ ಮುಸ್ಲಿಮ್ ಆಟೋ ಡ್ರೈವರ್‌ಗೆ ಬೆದರಿಕೆ ಹಾಕಿದ್ದು, “ಘಟ್ಲೋಡಿಯಾದಲ್ಲಿ (ದೆಹಲಿಯ ನಗರದ ಪ್ರದೇಶ) ಮುಸ್ಲಿಂ ಒಬ್ಬ ಹೇಗೆ ಆಟೋ ಓಡಿಸಿ ಹಣ ಸಂಪಾದಿಸುವುದು” ಎಂದು ಕೇಳಿದ ಘಟನೆ ವರ್ದಿಯಾಗಿದೆ. ಮಂಗಳವಾರ ಆಟೋ ಚಾಲಕ ಮೊಹಮ್ಮದ್ ಆರಿಫ್ ಖುರೇಷಿ ತನ್ನ ಆಟೋದಲ್ಲಿ ಪ್ರಯಾಣಿಕನೊಬ್ಬನನ್ನು ಘೀಕಾಂತದಿಂದ ಚಾಣಕ್ಯಪುರಿಗೆ ಕರೆದುಕೊಂಡು ಹೋಗಿದ್ದರು. ತದ ನಂತರ ಪ್ರಯಾಣಿಕರನ್ನು ಹುಡುಕಲು ಘಟ್ಲೋಡಿಯಾದಲ್ಲಿ ಆಟೋ ಚಲಿಸುತ್ತಿರುವಾಗ, ಮಧ್ಯಾಹ್ನ 2 ಗಂಟೆ ಸುಮಾರಿಗೆ ಪ್ರಯಾಣಿಕರೊಬ್ಬರು ರಿಕ್ಷಾ ನಿಲ್ಲಿಸಲು ಆರಿಫ್ ಖುರೇಷಿ ಕೈ ತೋರಿಸಿದರು. ಆರಿಫ್ ಖುರೇಷಿ ಆಟೋರಿಕ್ಷಾವನ್ನು ನಿಲ್ಲಿಸಿ ಆ ಪ್ರಯಾಣಿಕನನ್ನು ದೆಹಲಿ ದರ್ವಾಜಾಗೆ ಡ್ರಾಪ್ ಮಾಡಲು ಆಟೋ ಸ್ಟಾರ್ಟ್ ಮಾಡುವಾಗ ವ್ಯಕ್ತಿಯೊಬ್ಬ ಬಂದು ಹಲ್ಲೆ ನಡೆಸಿದ್ದಾಗಿ ಆರಿಫ್ ಖುರೇಷಿ ದೂರು ದಾಖಲಿಸಿದ್ದಾರೆ.

ನಾನು ಪ್ರಯಾಣಿಕನನ್ನು ದೆಹಲಿ ದರ್ವಾಜಾಗೆ ಸಾಗಿಸಲು ಮುಂದಾದಾಗ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿಯು ಅಲ್ಲಿಗೆ ಧಾವಿಸಿ, ನೀನು ಒಬ್ಬ ಮುಸ್ಲಿಮನಾಗಿ ಘಾಟ್ಲೋಡಿಯಾದಲ್ಲಿ ತಿರುಗಾಡುವುದು ಮತ್ತು ಇಲ್ಲಿಂದ ಪ್ರಯಾಣಿಕರನ್ನು ಹೇಗೆ ಕರೆದೊಯ್ಯುವುದು ಎಂದು ಪ್ರಶ್ನೆ ಮಾಡಿದನು. ಇದಕ್ಕೆ ನಾನು ಅವನಿಗೆ ಹೇಳಿದೆ, ಪ್ರಯಾಣಿಕನು ನಿಲ್ಲಿಸಲು ನನ್ನ ಕೈ ತೋರಿಸಿದ ಕಾರಣ ನಾನು ನಿಲ್ಲಿಸಿದೆ. ನಂತರ ಅವನು ನನ್ನ ಮೇಲೆ ಕೋಪಗೊಂಡು ನನ್ನನ್ನು ನಿಂದಿಸಿದನು. ಬಳಿಕ ಅವನು ಕಬ್ಬಿಣದ ರಾಡ್‌ ನಿಂದ ನನ್ನ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸಿದನು. ನಾನು ದಾಳಿಯನ್ನು ತಪ್ಪಿಸಿ ಆಟೋ ಓಡಿಸಿದೆ ಆದರೆ ದಾಳಿಯಲ್ಲಿ ನನ್ನ ಆಟೋರಿಕ್ಷಾ ಮೀಟರ್ ಹಾನಿಯಾಗಿದೆ ”ಎಂದು ಖುರೇಷಿ ಹೇಳಿದ್ದಾರೆ. ದೆಹಲಿಯ ಸೋಲಾ ಹೈಕೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Check Also

ಗೋರಕ್‌ಪುರ ಮಕ್ಕಳ ಸಾವು ಪ್ರಕರಣ: ವೈದ್ಯ ಕಫೀಲ್ ಖಾನ್ ಆರೋಪ ಮುಕ್ತ

ಸಂದೇಶ ಇ-ಮ್ಯಾಗಝಿನ್: ಗೋರಕ್‌ಪುರದ ಬಿಆರ್‌ಡಿ ಮೆಡಿಕಲ್ ಕಾಲೇಜ್ ನಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ನಡೆದ ಮಕ್ಕಳ ಸಾಮೂಹಿಕ ಸಾವು …

Leave a Reply

Your email address will not be published. Required fields are marked *