Friday , November 15 2019
Breaking News
Home / ರಿಯಲ್ ಹೀರೋಸ್ / ಅಸ್ಸಾಂ: ಕರ್ಪ್ಯು ಮುರಿದು ಹಿಂದೂ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದ ಮುಸ್ಲಿಮ್ ಆಟೋಚಾಲಕ

ಅಸ್ಸಾಂ: ಕರ್ಪ್ಯು ಮುರಿದು ಹಿಂದೂ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದ ಮುಸ್ಲಿಮ್ ಆಟೋಚಾಲಕ

ಸಂದೇಶ ಇ-ಮ್ಯಾಗಝಿನ್: ನಮಾಝ್ ವಿಷಯಲ್ಲಿ ಕೋಮು ಹಿಂಸಾಚಾರ ಎದುರಿಸುತ್ತಿರುವ ಅಸ್ಸಾಂನ ಹಾಲಾಕಾಂಡಿಯಲ್ಲಿ ಮುಸ್ಲಿಂ ಆಟೋ ಚಾಲಕನೊಬ್ಬ ಮಾನವೀಯತೆಗೆ ಮಹಾನ್ ಉದಾಹರಣೆಗೆ ನೀಡಿದ್ದಾರೆ. ಮುಸ್ಲಿಮ್ ಆಟೋ ರಿಕ್ಷಾ ಚಾಲಕ ಹೆರಿಗೆ ನೋವಿನಿಂದ ಬಳಲುತ್ತಿದ್ದ ಹಿಂದು ಮಹಿಳೆಯೊಬ್ಬರನ್ನು ನಗರದಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ಲೆಕ್ಕಿಸದೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎರಡು ದಿನಗಳ ಹಿಂದೆ ಹಾಲಕಾಂಡಿಯಲ್ಲಿ ನಡೆದ ಹಿಂಸಾಚಾರದಿಂದಾಗಿ ಕರ್ಫ್ಯೂ ಹೇರಲಾಗಿತ್ತು.

ಸಮಯಕ್ಕೆ ಸರಿಯಾಗಿ ಆಸ್ಪತ್ರೆಯನ್ನು ತಲುಪಿದ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆ ಬಳಿಕ ಅವರು ತಮ್ಮ ಮಗುವಿಗೆ ಶಾಂತಿ ಎಂದು ಹೆಸರಿಟ್ಟಿದ್ದಾರೆ. ಮಹಿಳೆಗೆ ಸಹಾಯ ಮಾಡಿದ್ದಕ್ಕಾಗಿ ಡೆಪ್ಯುಟಿ ಕಮಿಷನರ್ ರಿಕ್ಷಾ ಚಾಲಕ ಮಕ್ಭೂಲ್ ಅವರಿಗೆ ಧನ್ಯವಾದ ಹೇಳಿದ್ದಾರೆ. ಶುಕ್ರವಾರ ಇಲ್ಲಿ ಕೋಮು ಹಿಂಸಾಚಾರದ ಸಂದರ್ಭದಲ್ಲಿ ಪೊಲೀಸರು ಗುಂಡಿನ ದಾಳಿ ನಡೆಸಿದ ಪರಿಣಾಮ ಒಬ್ಬ ಸಾವನ್ನಪ್ಪಿದ್ದು 15 ಮಂದಿ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೋಹನೇಶ್ ಮಿಶ್ರಾ ಮತ್ತು ಹಾಲಾಕಾಂಡಿಯ ಉಪಾಯುಕ್ತೆ ಕೀರ್ತಿ ಜಲ್ಲಿ ಹೆರಿಗೆಯಾದ ಮಹಿಳೆ ನಂದಿತಾ ಅವರ ಮನೆಗೆ ಭೇಟಿ ನೀಡಿ ಮಹಿಳೆ ಮತ್ತು ಆಕೆಯ ಪತಿ ರೂಬೆನ್ ದಾಸ್ ಅವರಲ್ಲಿ ಮಾತನಾಡಿ, “ನಮಗೆ ಹಿಂದೂ ಮುಸ್ಲಿಂಮರ ಇಂತಹ ಏಕತೆಯ ಉದಾಹರಣೆಗಳ ಅಗತ್ಯವಿದೆ” ಎಂದು ಪ್ರಶಂಸಿಸಿದರು. ಆ ಬಳಿಕ ನಂದಿತಾ ಅವರ ನೆರೆಮನೆಯ ವ್ಯಕ್ತಿಯಾಗಿರುವ ರಿಕ್ಷಾ ಚಾಲಕ ಮಕ್ಬೂಲ್ ಅವರನ್ನು ಭೇಟಿಯಾಗಿ ತಮ್ಮ ಸ್ನೇಹಿತನ ಪತ್ನಿಗೆ ಸಹಾಯ ಮಾಡಿದ್ದಕ್ಕಾಗಿ ಮತ್ತು ಜಿಲ್ಲೆಯಲ್ಲಿ ಕೋಮು ಒತ್ತಡವನ್ನು ಕಡಿಮೆ ಮಾಡಲು ನೆರವಾಗಿದ್ದಕ್ಕೆ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

ಹೆರಿಗೆ ನೋವು ಪ್ರಾರಂಭವಾದ ನಂತರ ನಂದಿತಾರನ್ನು ಆಸ್ಪತ್ರೆಗೆ ಕರೆದೊಯ್ಯಲು ರೂಬನ್‌ಗೆ ಆಂಬುಲೆನ್ಸ್‌ನ ಅಗತ್ಯವಿತ್ತು. ಆದರೆ ಎಲ್ಲಿಂದಲೂ ಯಾವುದೇ ಸಹಾಯವೂ ಅವರಿಗೆ ಸಿಗಲಿಲ್ಲ. ಬಳಿಕ ನೆರೆಹೊರೆಯ ಮಕ್ಬೂಲ್ ನಂದಿತಾರನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದೊಯ್ಯಲು ಮುಂದೆ ಬಂದು ಕರ್ಫ್ಯೂವನ್ನು ಲೆಕ್ಕಿಸದೆ ಆಸ್ಪತ್ರೆಗೆ ಸಾಗಿಸಲು ನೆರವಾದರು.

ನಗರದ ಕಾಳಿ ಬಾಡಿ ಪ್ರದೇಶದಲ್ಲಿರುವ ಮಸೀದಿಯಲ್ಲಿ ಶುಕ್ರವಾರ ಜಾಗವಿಲ್ಲದೆ ಮುಂದಿನ ಬೀದಿಯ ರಸ್ತೆಯ ಮೇಲೆ ನಮಾಝ್ ನಿರ್ವಹಿಸುತ್ತಿದ್ದಾಗ ಮತ್ತೊಂದು ಸಮುದಾಯದ ಕೆಲವರು ಕಲ್ಲುಗಳನ್ನು ಎಸೆದು ನಮಾಝ್ ಮಸೀದಿಯ ಹೊರಗಡೆ ಬರಬಾರದೆಂದು ಬೆದರಿಸಿದ ಬಳಿಕ ಈ ಹಿಂಸಾಚಾರ ಪ್ರಾರಂಭವಾಗಿತ್ತು.

ಪೊಲೀಸರ ಗೋಲಿಬಾರಿಗೆ ಗಾಯಗೊಂಡ ವ್ಯಕ್ತಿಯೊಬ್ಬರು ರಾತ್ರಿ ಸಿಲ್ಚಾರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೋಮು ಚಕಮಕಿಯ ನಡೆದ ಶುಕ್ರವಾರ ಮಧ್ಯಾಹ್ನ ಒಂದು ಗಂಟೆ ನಂತರ ಹಾಲಾಕಾಂಡಿ ಪಟ್ಟಣದಲ್ಲಿ ಅನಿಶ್ಚಿತ ಅವಧಿಗೆ ಕರ್ಫ್ಯೂ ವಿಧಿಸಲಾಗಿತ್ತು.

Check Also

ಅಮೇರಿಕಾದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಪ್ರಶಸ್ತಿ ಪಡೆದ 10 ವರ್ಷದ ಹಫೀಜ್-ಎ-ಕುರಾನ್

ಸಂದೇಶ ಇ-ಮ್ಯಾಗಝಿನ್: ಕ್ಯಾವಿಟಿ ಕ್ರಷರ್ ಅನ್ನು ಕಂಡುಹಿಡಿದಿದ್ದಕ್ಕಾಗಿ 10 ವರ್ಷದ ಪಾಕಿಸ್ತಾನಿ ಮಗು ಮತ್ತು ಅವರ ಕುಟುಂಬದೊಂದಿಗೆ ಅಮೆರಿಕದಲ್ಲಿ ಎಐ …

Leave a Reply

Your email address will not be published. Required fields are marked *