Friday , May 24 2019
Breaking News
Home / ಅಂತಾರಾಷ್ಟ್ರೀಯ / ಶ್ರೀಲಂಕಾ: ಮುಸ್ಲಿಮ್ ವಿರೋಧಿ ದಂಗೆಗೆ ಒಬ್ಬ ಬಲಿ, ಮುಸ್ಲಿಮರಿಗೆ ಸೇರಿದ ಸೊತ್ತು ನಾಶ

ಶ್ರೀಲಂಕಾ: ಮುಸ್ಲಿಮ್ ವಿರೋಧಿ ದಂಗೆಗೆ ಒಬ್ಬ ಬಲಿ, ಮುಸ್ಲಿಮರಿಗೆ ಸೇರಿದ ಸೊತ್ತು ನಾಶ

ಸಂದೇಶ ಇ-ಮ್ಯಾಗಝಿನ್: ಕಳೆದ ತಿಂಗಳು ಈಸ್ಟರ್ ದಿನದಂದು ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಅಲ್ಲಿನ ಬೌದ್ಧ ಕೋಮುವಾದಿಗಳು ಅಮಾಯಕ ಮುಸ್ಲಿಮರ ಮೇಲೆ ದಾಳಿ ಶುರು ಮಾಡಿದ್ದು, ಶ್ರೀಲಂಕಾದ ವಾಯವ್ಯ ಪ್ರಾಂತ್ಯದಲ್ಲಿ ಭುಗಿಲೆದ್ದ ಗಲಭೆಯಲ್ಲಿ ಮುಸ್ಲಿಮರ ಅಂಗಡಿ, ಕಾರ್ಖಾನೆ, ಮನೆಗಳು ಹಾಗೂ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಇದರಲ್ಲಿ ಒಬ್ಬ ವ್ಯಕ್ತಿ ಮೃತ ಪಟ್ಟಿದ್ದಾಗಿ ವರದಿಯಾಗಿದೆ. ಶ್ರೀಲಂಕಾದ ಕ್ಯಾಬಿನೆಟ್ ಮಂತ್ರಿ ಹಾಗೂ ಶ್ರೀಲಂಕಾ ಮುಸ್ಲಿಮ್ ಕಾಂಗ್ರೇಸ್ ಅಧ್ಯಕ್ಷರಾದ ರೌಫ್ ಹಕೀಮ್ ಅವರ ಪ್ರಕಾರ ದೇಶಾದ್ಯಂತ ಹೇರಲಾಗಿದ್ದ ಕರ್ಫ್ಯುವನ್ನು ಮಂಗಳವಾರ ಬೆಳಗ್ಗೆ ತೆರವು ಗೊಳಿಸಲಾಗಿದೆ. ಆದರೆ ವಾಯವ್ಯ ಪ್ರಾಂತ್ಯದಲ್ಲಿ ಮಂಗಳವಾರ ಕೂಡ ಹಿಂಸಾಚಾರ ಭುಗಿಲೆದ್ದಿದ್ದು, ಮುಸ್ಲಿಮ್ ಸಮುದಾಯಕ್ಕೆ ಸೇರಿದ ಒಬ್ಬ ವ್ಯಕ್ತಿಯನ್ನು ಕೊಲ್ಲಲಾಗಿದೆ ಎಂದು ತಿಳಿಸಿದ್ದಾರೆ.

ರಾಯ್ಟರ್ ಸುದ್ದಿ ಸಂಸ್ಥೆಗೆ ಕರೆ ಮಾಡಿ ಮಾತನಾಡಿರುವ ವ್ಯಕ್ತಿಯೊಬ್ಬರು ಪೊಲೀಸರು ಹಾಗೂ ಸೈನ್ಯದ ಮೇಲೆ ಪಕ್ಷಪಾತದ ಆರೋಪ ಮಾಡಿದ್ದಾರೆ. ಬೌದ್ದ ಕೋಮುವಾದಿಗಳು ನಮ್ಮ ಮನೆ , ಮಸೀದಿ ,ಹಾಗೂ ಅಂಗಡಿಗೆ ನುಗ್ಗಿ ದರೋಡೆ ಹಾಗು ನಾಶ ಗೈಯ್ಯುತ್ತಿರುವಾಗ ಸ್ಥಳದಲ್ಲೇ ಪೊಲೀಸರಿದ್ದರೂ ಕೂಡ ಅವರು ನಮ್ಮ ರಕ್ಷಣೆಗೆ ಬಂದಿಲ್ಲ. ನಾವು ಮನೆಯಿಂದ ಹೊರಗೆ ಬರಲು ಪ್ರಯತ್ನಿಸಿದಾಗಲೂ ಪೊಲೀಸರು ನಮ್ಮನ್ನು ಬಲವಂತವಾಗಿ ಮನೆಯ ಒಳಗೆ ಇರುವಂತೆ ಒತ್ತಾಯಿಸಿದರು ಎಂದಿದ್ದಾರೆ.

Check Also

ಕ್ರೈಸ್ಟ್ ಚರ್ಚ್ ಮಸೀದಿಗೆ ಭೇಟಿ ನೀಡಿದ ವಿಶ್ವಸಂಸ್ಥೆಯ ಮಹಾಸಚಿವರು; ಇಸ್ಲಾಮೋಫೋಬಿಯಾ ಬಗ್ಗೆ ಮಹತ್ವದ ಹೇಳಿಕೆ

101ಸಂದೇಶ ಇ-ಮ್ಯಾಗಝಿನ್: ವಿಶ್ವಸಂಸ್ಥೆಯ ಮಹಾಸಚಿವರಾದ ಆಂಟನಿಯೋ ಗುಟೇರಸ್ ಭಯೋತ್ಪಾದಕ ದಾಳಿಗೆ ಒಳಗಾಗಿದ್ದ ನ್ಯೂಝಿಲ್ಯಾಂಡ್ ಕ್ರೈಸ್ಟ್ ಚರ್ಚ್‌ನ ಅನ್ನೂರ್ ಮಸೀದಿಗೆ ನಿನ್ನೆ …

Leave a Reply

Your email address will not be published. Required fields are marked *