Thursday , June 20 2019
Breaking News
Home / ರಮದಾನ್ ವಿಶೇಷಾಂಕ / ಗಾಝಾ: ಉಪವಾಸಿಗರಿಗೆ 1.5 ಮಿಲಿಯನ್ ಡಾಲರ್ ಸಹಾಯ ಹಸ್ತ ಚಾಚಿದ ರೊನಾಲ್ಡೊ

ಗಾಝಾ: ಉಪವಾಸಿಗರಿಗೆ 1.5 ಮಿಲಿಯನ್ ಡಾಲರ್ ಸಹಾಯ ಹಸ್ತ ಚಾಚಿದ ರೊನಾಲ್ಡೊ

ಸಂದೇಶ ಇ-ಮ್ಯಾಗಝಿನ್: ಪೊರ್ಚುಗೀಸ್ ಪುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅವರು ಯುದ್ಧ ಸಂತ್ರಸ್ತ ಗಾಝಾಪಟ್ಟಿಯ ಮುಸ್ಲಿಮ್ ಉಪವಾಸಿಗರಿಗೆ 1.5 ಮಿಲಿಯನ್ ಡಾಲರ್ ನೆರವು ನೀಡಿದ್ದಾರೆ. ಮುಸ್ಲಿಮರ ಪವಿತ್ರ ತಿಂಗಳು ರಮದಾನ್ ನಡೆಯುತ್ತಿದ್ದು, ಗಾಝಾದಲ್ಲಿ ಉಪವಾಸ ನಿರತ ಮುಸ್ಲಿಮರಿಗೆ ಆಹಾರದ ಕೊರೆತೆ ಇದೆ ಎಂದು ಮೊನ್ನೆ ಬೆಚ್ಚಿಬೀಳುವ ವರದಿಯೊಂದು ಪ್ರಕಟವಾಗಿತ್ತು. ಇದೀಗ ಸ್ಟಾರ್ ಫುಟ್ಬಾಲ್ ಆಟಗಾರ್ ರೊನಾಲ್ಡೋ ಗಾಝಾ ಜನರ ಸಹಾಯಕ್ಕೆ ಆಗಮಿಸಿದ್ದಾರೆ. ಫೆಲಸ್ತೀನಿ ಜನರಿಗೆ ಕ್ರಿಸ್ಟಿಯಾನೋ ರೊನಾಲ್ಡೋ ಅವರ ಮೊದಲ ಸಹಾಯ ಇದಲ್ಲ, ಈ ಹಿಂದೆ ಕೂಡ ಹಲವು ಬಾರಿ ಕ್ರಿಸ್ಟಿಯಾನೋ ರೊನಾಲ್ಡೋ ಅವರು ಫೆಲಸ್ತೀನಿಯನ್ನರಿಗೆ ಸಹಾಯ ಮಾಡಿದ್ದರು. 2012 ರಲ್ಲಿ ತಾವು ಪಂದ್ಯದಲ್ಲಿ ಗೆದ್ದಿದ್ದ ಗೋಲ್ಡನ್ ಬೂಟನ್ನು ಹರಾಜು ಮಾಡಿ 1.5 ಮಿಲಿಯನ್ ಡಾಲರ್ ಸಹಾಯ ಮಾಡಿದ್ದರು. ಇದಲ್ಲದೆ ಇಸ್ರೇಲಿ ದಾಳಿಯಿಂದ ಗಾಯಗೊಂಡ ಫೆಲಸ್ತಿನಿಯರ ಚಿಕಿತ್ಸೆಗೆ ನೆರವು ನೀಡಿದ್ದರು. ಫೆಲಸ್ತೀನ್ ಗೆ ಬೆಂಬಲ ಸೂಚಿಸಿದ್ದ ರೊನಾಲ್ದೋ ಪೋರ್ಚುಗಲ್ ಮತ್ತು ಇಸ್ರೇಲ್ ನಡುವಿನ ವಿಶ್ವಕಪ್ ಅರ್ಹತಾ ಪಂದ್ಯದ ನಂತರ ಇಸ್ರೇಲಿ ಆಟಗಾರನೊಂದಿಗೆ ಶರ್ಟನ್ನು ವಿನಿಮಯ ಮಾಡಲು ನಿರಾಕರಿಸಿದ್ದರು.

Check Also

ಉಪವಾಸಿಗರಿಗೆ ಇಫ್ತಾರ್ ಕಿಟ್ ವಿತರಿಸಿದ ಹಿಂದೂ ಮಹಿಳೆ-ರಾಷ್ಟ್ರೀಯ ಭಾವೈಕ್ಯತೆ

001ಸಂದೇಶ ಇ-ಮ್ಯಾಗಝಿನ್: ಭಾರತವು ಜಗತ್ತಿನ ವಿವಿಧ ರಾಷ್ಟ್ರಗಳ ಮಧ್ಯೆ ಎದೆಯುಬ್ಬಿಸಿ ನಿಲ್ಲುವುದು ತನ್ನ ಜಾತ್ಯಾತೀಯ, ಧರ್ಮಾತೀತ ಪರಂಪರೆಯ ಕಾರಣಕ್ಕಾಗಿ, ಈ …

Leave a Reply

Your email address will not be published. Required fields are marked *