Monday , July 22 2019
Breaking News
Home / ಕ್ರೀಡೆ / ವೈಯುಕ್ತಿಕ ಜೀವನದಲ್ಲಿ ಮತ್ತೊಮ್ಮೆ ವಿವಾದಕ್ಕೆ ಗುರಿಯಾದ ಕ್ರಿಕೆಟರ್ ಶಮಿ

ವೈಯುಕ್ತಿಕ ಜೀವನದಲ್ಲಿ ಮತ್ತೊಮ್ಮೆ ವಿವಾದಕ್ಕೆ ಗುರಿಯಾದ ಕ್ರಿಕೆಟರ್ ಶಮಿ

ಸಂದೇಶ ಇ-ಮ್ಯಾಗಝಿನ್: ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಇದೀಗ ತನ್ನ ವೈಯುಕ್ತಿಕ ಜೀವನದಲ್ಲಿ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ. ಮೊದಲೇ ಪತ್ನಿಯ ಜೊತೆ ಬೇರೆ ಮಹಿಳೆಯರ ಜೊತೆ ಸಂಬಂಧದ ಕಾರಣ ಜಗಳವಾಗಿದ್ದ ಮಹಮ್ಮದ್ ಶಮಿಯ ವೈವಾಹಿಕ ಜೀವನ ಡೈವೋರ್ಸ್ ಹಂತಕ್ಕೆ ತಲುಪಿದ್ದು, ಇದೀಗ ಇನ್ಟಾ‌ಗ್ರಾಮ್‌ನಲ್ಲಿ ಶಮಿ ಮಹಿಳೆಯೊಬ್ಬರಿಗೆ ಪದೇ ಪದೇ ಸಂದೇಶ ಕಳುಹಿಸಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಸೋಫಿಯಾ ಹೆಸರಿನ ಮಹಿಳೆಯೊಬ್ಬರು ಈ ಆರೋಪ ಮಾಡಿದ್ದು, ಈಗಾಗಲೇ 14 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರುವ ಶಮಿ ನನಗೆ ಮತ್ತೆ ಮತ್ತೆ ಏಕೆ ಸಂದೇಶ ಕಳುಹಿಸುತ್ತಿದ್ದಾರೆ ಎಂದು ಮಹಿಳೆ ಪ್ರಶ್ನಿಸಿದ್ದಾರೆ. ಈ ಮೊದಲು ಮೊಹಮ್ಮದ್ ಶಮಿ ಅವರ ಪತ್ನಿ ಹಸೀನ್ ಜಹಾನ್ ಅವರು ಶಮಿ ವಿವಾಹಿತ ಜೀವನದಲ್ಲಿದ್ದರೂ ಸಹ ಇತರ ಮಹಿಳೆಯರೊಂದಿಗೆ ಟಿಕ್-ಟಾಕ್ನಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಆದರೆ ಇದೀಗ ಆರೋಪ ಮಾಡಿರುವ ಮಹಿಳೆಗೆ ಶಮಿಯ ಪರಿಚಯವಿಲ್ಲ ತೋರುತ್ತಿದೆ. ಅವರು ಸ್ಕ್ರೀನ್ ಶಾಟ್ ಶೇರ್ ಮಾಡಿ ಪ್ರಶ್ನೆ ಮಾಡಿದ್ದಾರೆ. ಸ್ಕ್ರೀನ್ ಶಾಟ್ ನಲ್ಲಿ ಕ್ರಿಕೆಟರ್ ಶಮಿಯ ಹೆಸರು ಕಾಣುತ್ತಿದೆ. ಇನ್ನೊಂದೆಡೆ ಅತ್ಯತ್ತಮ ಫಾರ್ಮ್ ನಲ್ಲಿ ಆಡುತ್ತಿದ್ದರೂ ನಿನ್ನೆಯ ನ್ಯೂಝಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಶಮಿಯನ್ನು ಆಡಿಸದೇ ಇದ್ದಿದ್ದು ವಿವಾದಕ್ಕೆ ಕಾರಣವಾಗಿದೆ. ಅಭಿಮಾನಿಗಳು ಈ ಬಗ್ಗೆ ನಾಯಕ ಕೊಹ್ಲಿಯನ್ನು ಪ್ರಶ್ನೆ ಮಾಡಿದ್ದಾರೆ.

Check Also

ವಲ್ಡ್ ಕಪ್ ಫೈನಲ್: ಕಳಪೆ ಅಂಪಾಯರಿಂಗ್ ಬಗ್ಗೆ ಕೊನೆಗೂ ಮೌನ ಮುರಿದ ಐಸಿಸಿ

000ಸಂದೇಶ ಇ-ಮ್ಯಾಗಝಿನ್: 2019 ರ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ವಿವಾದಾತ್ಮಕ ಪಂದ್ಯವಾಗಿ ಮಾರ್ಪಟ್ಟಿದೆ. ಏಕೆಂದರೆ ಮಾಜಿ ಅಂತರರಾಷ್ಟ್ರೀಯ ಅಂಪೈರ್ …

Leave a Reply

Your email address will not be published. Required fields are marked *