Sunday , September 22 2019
Breaking News
Home / ರಿಯಲ್ ಹೀರೋಸ್ / ಬಡ ಜಾನಕಿಯಮ್ಮನಿಗೆ ತಮ್ಮದೇ ಹಣದಲ್ಲಿ ತಾವೇ ಶ್ರಮವಹಿಸಿ ಮನೆ ನಿರ್ಮಿಸಿದ ಪೊಲೀಸರು

ಬಡ ಜಾನಕಿಯಮ್ಮನಿಗೆ ತಮ್ಮದೇ ಹಣದಲ್ಲಿ ತಾವೇ ಶ್ರಮವಹಿಸಿ ಮನೆ ನಿರ್ಮಿಸಿದ ಪೊಲೀಸರು

ಸಂದೇಶ ಇ-ಮ್ಯಾಗಝಿನ್: ಕೇರಳದ ಕಣ್ಣೂರ್ ಜಿಲ್ಲೆಯ ತಲಿಪರಂಬಾ ಎಂಬಲ್ಲಿ ಪೊಲೀಸರು ಮಾನವೀಯತೆಗೆ ಹೊಸ ಉದಾಹರಣೆ ಸೃಷ್ಟಿಸಿದ್ದಾರೆ. ತಲಿಪರಂಬಾ ಪೊಲೀಸ್ ಠಾಣೆಯಲ್ಲಿ ಅಡುಗೆಯವರಾಗಿ ಕೆಲಸ ಮಾಡುತ್ತಿರುವ 57 ವರ್ಷದ ಜಾನಕಿಯಮ್ಮ ಎಂಬ ಬಡ ಮಹಿಳೆಗೆ ಪೊಲೀಸರೇ ಶ್ರಮ ವಹಿಸಿ ತಮ್ಮದೇ ಹಣದಿಂದ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ತುಂಬಾ ವರ್ಷ ಪೊಲೀಸ್ ಠಾಣೆಯಲ್ಲಿ ಅಡುಗೆಯವರಾಗಿ ಕೆಲಸ ಮಾಡಿದ್ದರೂ ಜಾನಕಿಯಮ್ಮ ಅವರಿಗೆ ಸ್ವಂತ ಮನೆ ಕಟ್ಟಲು ಸಾಧ್ಯವಾಗಿರಲಿಲ್ಲ. ಜಾನಕಿಯಮ್ಮ ಅವರು ಮನೆಯಿಲ್ಲದೆ ಕಷ್ಟ ಪಡುತ್ತಿರುವುದನ್ನು ನೋಡಿದ ಠಾಣೆಯ ಪೊಲೀಸರು ಜಾನಕಿಯಮ್ಮ ಅವರಿಗೆ ತಮ್ಮದೇ ಹಣದಿಂದ ಮನೆ ನಿರ್ಮಿಸಿ ಕೊಡಲು ಮುಂದೆ ಬಂದರು. ತಲಿಪರಂಬಾ ಡಿವೈಎಸ್ಪಿ ಪಿಕೆ ಸುಧಾಕರಣ್ ಮನೆ ನಿರ್ಮಿಸುವ ಯೋಜನೆಗೆ ಎಲ್ಲಾ ಪೊಲೀಸರಿಂದಲೂ ಸಹಾಯ ಹಸ್ತ ಯಾಚಿಸಿದರು. ಆ ಬಳಿಕ ಅವರು ವರ್ಗಾವಣೆಯಾಗಿ ಹೋದರೂ ಕೂಡ, ನಂತರ ಬಂದ ಡಿವೈಎಸ್ಪಿ ಎಂ. ಕೃಷ್ಣನ್ ಮನೆ ನಿರ್ಮಿಸುವ ಕಾರ್ಯವನ್ನು ಮುಂದುವರಿಸಿಕೊಂಡು ಹೋದರು.

ಸಿಐ ಎಂ. ಅನಿಲ್ ಕುಮಾರ್, ಎಸ್.ಐ ಮೊಯಿದಿನ್ ಹಾಗೂ ಠಾಣೆಯ ಇತರ ಪೊಲೀಸರು ಖುದ್ಧಾಗಿ ಶ್ರಮ ವಹಿಸಿ ಮನೆಯ ಒಂದನೇ ಅಂತಸ್ತನ್ನು ಪೂರ್ತಿಗೊಳಿಸಿದ್ದಾರೆ. ಮನೆ ನಿರ್ಮಾಣ ಸಾಮಗ್ರಿಗಳನ್ನು ಪೊಲೀಸರ ಸಂಬಳದಿಂದ ಸ್ವಲ್ಪ ಸ್ವಲ್ಪ ಸಂಗ್ರಹಿಸಿದ ಹಣದಲ್ಲಿ ಖರೀದಿಸಲಾಗಿತ್ತು.

Check Also

ಅಮೇರಿಕಾದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಪ್ರಶಸ್ತಿ ಪಡೆದ 10 ವರ್ಷದ ಹಫೀಜ್-ಎ-ಕುರಾನ್

000ಸಂದೇಶ ಇ-ಮ್ಯಾಗಝಿನ್: ಕ್ಯಾವಿಟಿ ಕ್ರಷರ್ ಅನ್ನು ಕಂಡುಹಿಡಿದಿದ್ದಕ್ಕಾಗಿ 10 ವರ್ಷದ ಪಾಕಿಸ್ತಾನಿ ಮಗು ಮತ್ತು ಅವರ ಕುಟುಂಬದೊಂದಿಗೆ ಅಮೆರಿಕದಲ್ಲಿ ಎಐ …

Leave a Reply

Your email address will not be published. Required fields are marked *