Thursday , June 20 2019
Breaking News
Home / ರಾಜಕೀಯ / ಫಲಿತಾಂಶ ನೋಡಿ ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷ ಹೃದಯಾಘಾತದಿಂದ ಸಾವು

ಫಲಿತಾಂಶ ನೋಡಿ ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷ ಹೃದಯಾಘಾತದಿಂದ ಸಾವು

ಸಂದೇಶ ಇ-ಮ್ಯಾಗಝಿನ್: ಮಧ್ಯಪ್ರದೇಶದ ಸಿಹೋರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರತನ್ ಸಿಂಗ್ ಠಾಕೂರ್ ಸಿಹೋರ್‌ನ ಮತ ಎಣಿಕಾ ಕೇಂದ್ರದಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ವರದಿಯಾಗಿದೆ. ಮತ ಎಣಿಕೆಯ ಕೇಂದ್ರದಲ್ಲಿ ಮತಗಳನ್ನು ಎಣಿಸುವುದನ್ನು ನೋಡಲು ರತನ್ ಸಿಂಗ್ ಠಾಕೂರ್ ಅವರು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ ಆದರೆ ಇದ್ದಕ್ಕಿದ್ದಂತೆ ಅವರು ಪ್ರಜ್ಞೆ ಕಳೆದುಕೊಂಡಿದ್ದಾರೆ. ಕಾಂಗ್ರೇಸ್ ಪಕ್ಷದ ಹೀನಾಯ ಸೋಲಿನ ಫಲಿತಾಂಶವನ್ನು ನೋಡಿ ಕುರ್ಚಿಯಿಂದ ಕೆಳಗೆ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬಳಿಕ ಅವರು ಮೃತಪಟ್ಟರು ಎಂದು ಅವರ ಜೊತೆಯಲ್ಲಿದ್ದವರು ಹೇಳಿದ್ದಾರೆ. ಮಧ್ಯ ಪ್ರದೇಶದ ಸಿಹೋರ್ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದ ರತನ್ ಸಿಂಗ್ ಠಾಕೂರ್ ಅವರು ಸ್ಥಳೀಯವಾಗಿ ಪ್ರಭಾವೀ ರಾಜಕಾರಣಿಯಾಗಿದ್ದರು.

ದೇಶದಲ್ಲಿ ಇಂದು ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಎನ್ಡಿಎ ಮೈತ್ರಿಕೂಟ 300 ಕ್ಕಿಂತಲೂ ಅಧಿಕ ಸ್ಥಾನಗಳನ್ನು ಗಳಿಸಿ ಭರ್ಜರಿ ಜಯಭೇರಿ ಬಾರಿಸಿದ್ದು, ಅದೇ ವೇಳೆ ಕಾಂಗ್ರೇಸ್‌ನ ಹೆಚ್ಚಿನ ದಿಗ್ಗಜ ನಾಯಕರು ಸೋಲನುಭವಿಸಿದ್ದಾರೆ.

Check Also

ಓವೈಸಿ ವಿರುದ್ಧ ಗಂಭೀರ ಆರೋಪ ಮಾಡಿದ ರಾಜಾಸಿಂಗ್-ಹೇಳಿದ್ದೇನು ನೋಡಿ

000ಸಂದೇಶ ಇ-ಮ್ಯಾಗಝಿನ್: ಬಿಜೆಪಿ ಮುಖಂಡ ಹಾಗೂ ಹೈದರಾಬಾದ್ ಘೋಷಾಮಹಲ್ ಶಾಸಕ ಟಿ. ರಾಜಾಸಿಂಗ್ ಆಲ್ ಇಂಡಿಯಾ ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್ …

Leave a Reply

Your email address will not be published. Required fields are marked *