Monday , July 22 2019
Breaking News
Home / ರಾಷ್ಟ್ರೀಯ / ಮಾಬ್ ಲಿಂಚಿಂಗ್ ತಡೆಯಲು ಸಿಎಂ ಯೋಗಿ ಅದಿತ್ಯನಾಥ್ ಈ ಆದೇಶ ಹೊರಡಿಸಿದ್ದಾರೆ

ಮಾಬ್ ಲಿಂಚಿಂಗ್ ತಡೆಯಲು ಸಿಎಂ ಯೋಗಿ ಅದಿತ್ಯನಾಥ್ ಈ ಆದೇಶ ಹೊರಡಿಸಿದ್ದಾರೆ

ಸಂದೇಶ ಇ-ಮ್ಯಾಗಝಿನ್: ಮಾಬ್ ಲಿಂಚಿಂಗ್‌ನಂತಹ ಘಟನೆಗಳನ್ನು ತಡೆಗಟ್ಟುವ ಸಲುವಾಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೊಸ ನಿರ್ದೇಶನವನ್ನು ಜಾರಿ ಮಾಡಿದ್ದು, ಇನ್ನು ಯಾವುದಾದರೂ ವ್ಯಕ್ತಿ ಅಥವಾ ಗೋವುಗಳನ್ನು ಸಾಕುವ ವ್ಯಕ್ತಿ ಹಸುಗಳನ್ನು ಸಾಗಿಸುವಾಗ ಗೋ ಸೇವಾ ಆಯೋಗವು ಅವರಿಗೆ ಒಮ್ದು ಸಾಗಾಣಿಕಾ ಪ್ರಮಾಣ ಪತ್ರ ನೀಡಲಿದ್ದು, ಅವರ ಸುರಕ್ಷತೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಗೋವಿನ ಕಳ್ಳಸಾಗಾಣಿಕೆ ಮಾಡುವುದನ್ನು ಆಯೋಗ ತಡೆಗಟ್ಟಲಿದೆ ಎಂದು ಹೇಳಿದ ಆದಿತ್ಯನಾಥ್, ಗೋವುಗಳನ್ನು ಗೋಶಾಲೆಗಳಲ್ಲಿ ಕಟ್ಟಿ ಹಾಕದೆ, ಪರಿಸರದಲ್ಲಿ ಮೇಯಲು ಬಿಟ್ಟು ಬಿಡಬೇಕು. ಜಾನುವಾರು ಇಲಾಖೆ ಗೋ ಆಯೋಗದ ಖಾತೆಗೆ ನೇರವಾಗಿ ಹಣವನ್ನು ಒದಗಿಸಲಿದ್ದು, ಈ ಹಣದಲ್ಲಿ ನಿರ್ಗತಿಕ ಹಸುಗಳನ್ನು ಗೋ ಆಯೋಗವು ಆರೈಕೆ ಮಾಡಲಿದೆ ಎಂದಿದ್ದಾರೆ.

ಇತ್ತೀಚೆಗೆ ದೇಶದಲ್ಲಿ ಹೆಚ್ಚುತ್ತಿರುವ ಗೋರಕ್ಷಕರ ದಾಳಿ ಗಳಿಂದ ಹಲವಾರು ಮಂದಿ ಮೃತಪಟ್ಟಿದ್ದು, ರಾಜಸ್ಥಾನ ಮುಂತಾದ ಕಡೆಗಳಲ್ಲಿ ರೈತರು ತಮ್ಮ ದನವನ್ನು ಕೃಷಿ ಚಟುವಟಿಕೆಗಳಿಗಾಗಿ ಸಾಗಿಸುವಾಗಲೂ ಹಲ್ಲೆ ಮಾಡಿ ಹತ್ಯೆ ಗೈದ ಪ್ರಕರಣಗಳೂ ವರದಿಯಾಗಿದ್ದವು.

Check Also

ಮಾಬ್ ಲಿಂಚಿಂಗ್‌ಗೆ ಬಲಿಯಾಗುತ್ತಿದ್ದ ಮುಸ್ಲಿಮ್ ವ್ಯಕ್ತಿಯನ್ನು ರಕ್ಷಿಸಿದ ಹಿಂದೂ ಕುಟುಂಬ

002ಸಂದೇಶ ಇ-ಮ್ಯಾಗಝಿನ್: ಜೈ ಶ್ರೀ ರಾಮ್ ಎಂದು ಜಪಿಸಲು ನಿರಾಕರಿಸಿದ್ದಕ್ಕಾಗಿ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳ ಗುಂಪೊಂದು ಥಳಿಸಿದ ಘಟನೆ ಮಹಾರಾಷ್ಟ್ರದ ಔರಂಗಾಬಾದ್ …

Leave a Reply

Your email address will not be published. Required fields are marked *