Friday , April 3 2020
Breaking News
Home / ಆರೋಗ್ಯ / ಈ ಹಣ್ಣಿನ ಬೀಜದ ರಸದಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ಸಾಧ್ಯ: ಅಮೇರಿಕನ್ ವಿಜ್ಞಾನಿಗಳ ಸಂಶೋಧನೆ

ಈ ಹಣ್ಣಿನ ಬೀಜದ ರಸದಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ಸಾಧ್ಯ: ಅಮೇರಿಕನ್ ವಿಜ್ಞಾನಿಗಳ ಸಂಶೋಧನೆ

ಸಂದೇಶ ಇ-ಮ್ಯಾಗಝಿನ್: ಕ್ಯಾನ್ಸರ್ ಎಂಬುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಬರಬಹುದಾದಂತಹ ಒಂದು ಸಾಮಾನ್ಯ ರೋಗ ಆಗಿಬಿಟ್ಟಿದೆ. ಮೊದಲೆಲ್ಲ ತಂಬಾಕು ಸೇವನೆ, ಆಲ್ಕೋಹಾಲ್, ಧೂಮಪಾನ ಮುಂತಾದ ಕಾರಣಕ್ಕೆ ಕ್ಯಾನ್ಸರ್ ಬರುತ್ತೆ ಅಂತ ಹೇಳುತ್ತಿದ್ದರು. ಆದರೆ ಈಗ ಹಾಗೆ ಹೇಳುವಂತಿಲ್ಲ. ಈಗ ಏನೂ ದುರಾಭ್ಯಾಸ ವಿಲ್ಲದ ವ್ಯಕ್ತಿಗೂ ಕ್ಯಾನ್ಸರ್ ಬರುತ್ತೆ. ಈ ರೋಗ ಎಷ್ಟು ಮಾರಕವೆಂದರೆ ಇದು ಬಂದರೆ ವ್ಯಕ್ತಿ ಬದುಕುವ ಸಾಧ್ಯತೆ ತೀರಾ ಕಡಿಮೆ. ಇದಕ್ಕೆ ಸಂಬಂಧಪಟ್ಟ ಚಿಕಿತ್ಸೆ ಕೂಡ ದುಬಾರಿಯಾಗಿದೆ. ಕೆಲವೊಮ್ಮೆ ಕ್ಯಾನ್ಸರ್ ರೋಗಕ್ಕೆ ನೀಡಲಾಗುವ ಕೀಮೋ ಥೆರಪಿ ಚಿಕಿತ್ಸೆ ಕೂಡ ವ್ಯಕ್ತಿಯ ಪ್ರಾಣ ತೆಗೆಯುತ್ತೆ ಅನ್ನೋದು ಸುಳ್ಳಲ್ಲ. ಇದೀಗ ಅಮೇರಿಕಾದ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಸಂಶೋದನೆಯಲ್ಲಿ ವಿಜ್ಞಾನಿಗಳು ದ್ರಾಕ್ಷಿ ಹಣ್ಣಿನ ಬೀಜದ ರಸದಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ಸಾಧ್ಯ ಎಂದು ತಿಳಿಸಿದ್ದಾರೆ. ದ್ರಾಕ್ಷಿ ಹಣ್ಣಿನ ರಸದಿಂದ 48 ಗಂಟೆಗಳಲ್ಲೇ ಪರಿಣಾಮ ಕಾಣಲು ಪ್ರಾರಂಭವಾಗುತ್ತದೆ ಎಂದು ವಿಜ್ಞಾನಿಗಳು ವಾದಿಸಿದ್ದಾರೆ. ಈ ಸಂಶೋಧನೆ ಸುಮಾರು 25 ವರ್ಷ ಗಳಿಂದ ನಡೆಯುತ್ತಿದೆ ಎಂದು ಫ್ರೊಫೆಸರ್ ಡಾ. ಹಾರ್ಡಿನ್ ಬಿ ಜಾನ್ಸ್ ಹೇಳಿದ್ದಾರೆ.

ದ್ರಾಕ್ಷಿ ಬೀಜದಿಂದ ತೆಗೆಯಲಾಗುವ ರಸದಿಂದ ರಕ್ತದ ಕ್ಯಾನ್ಸರ್ ಹಾಗೂ ಇನ್ನಿತರ ಕ್ಯಾನ್ಸರ್‌ಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ಮಾಡ ಬಹುದು ಎಂದಿರುವ ವಿಜ್ಞಾನಿಗಳು, ಈ ರಸದಲ್ಲಿರುವ ಜೆ‌ಎನ್‌ಕೆ ಪ್ರೊಟೀನ್ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ದೇಹದಲ್ಲಿರುವ ಕ್ಯಾನ್ಸರ್ ಕೋಶಗಳನ್ನು 76 ಶೇಕಡಾದಷ್ಟು ಬುಡದಿಂದಲೇ ಕಿತ್ತೊಗೆಯುತ್ತದೆ ಎಂದು ತಿಳಿಸಿದ್ದಾರೆ.

Check Also

ಮಹಾಮಾರಿ ನಿಫಾ ವೈರಸ್: ಮುಂಜಾಗ್ರತ ಕ್ರಮ ಹೇಗೆ?

ಇದುವರೆಗೂ ಯಾರೂ ಹೆಸರು ಕೇಳಿರದ ಹಾಗೂ ಕೆಲವು ದಿನಗಳಿಂದ ಎಲ್ಲರ ಬಾಯಲ್ಲೂ ಕೇಳಿ ಬರುತ್ತಿರುವ ಹೆಸರೇ ‘ನಿಪಾ ವೈರಸ್’. ಇತ್ತೀಚೆಗೆ …

Leave a Reply

Your email address will not be published. Required fields are marked *