Sunday , September 22 2019
Breaking News
Home / ಗಲ್ಫ್ ಸುದ್ದಿ / ಯುಎಇ: ಅತಿ ಉದ್ದದ ರಂಝಾನ್ ಇಫ್ತಾರ್ ಭಾರತೀಯ ಮೂಲದ ದತ್ತಿ ಸಂಸ್ಥೆ ಗಿನ್ನೆಸ್ ವಲ್ಡ್ ರೆಕಾರ್ಡ್‌ಗೆ

ಯುಎಇ: ಅತಿ ಉದ್ದದ ರಂಝಾನ್ ಇಫ್ತಾರ್ ಭಾರತೀಯ ಮೂಲದ ದತ್ತಿ ಸಂಸ್ಥೆ ಗಿನ್ನೆಸ್ ವಲ್ಡ್ ರೆಕಾರ್ಡ್‌ಗೆ

ಸಂದೇಶ ಇ-ಮ್ಯಾಗಝಿನ್: ರಂಝಾನ್ ತಿಂಗಳಲ್ಲಿ ಹಲವು ವರ್ಷಗಳಿಂದ ಜನರಿಗೆ ಇಫ್ತಾರ್ ಕೂಟವನ್ನು ಏರ್ಪಡಿಸುತ್ತಾ ಬಂದಿರುವ ಭಾರತೀಯ ಮೂಲದ ದತ್ತಿ ಸೇವಾ ಸಂಸ್ಥೆಯೊಂದು ಗಿನ್ನೆಸ್‌ ವಿಶ್ವದಾಖಲೆಗೆ ಸೇರಿದೆ. ಭಾರತೀಯ ಮೂಲದವರಾದ ಜೋಗಿಂದರ್ ಸಿಂಗ್ ಸಾಲಾರಿಯಾ ಎಂಬವರ ಪೆಹಲ್ ಇಂಟರ್‌ನ್ಯಾಷನಲ್ ಎಂಬ ಸಂಸ್ಥೆಯು ‘ಪಿಸಿಟಿ ಹ್ಯೂಮಾನಿಟಿ’ ಎಂಬ ದತ್ತಿ ಸೇವಾ ಸಂಸ್ಥೆಯೊಂದನ್ನು ಮುನ್ನಡೆಸುತ್ತಿದೆ. ಪೆಹಲ್ ಇಂಟರ್‌ನ್ಯಾಷನಲ್ ಕಂಪೆನಿಯ ಆವರಣದಲ್ಲಿ ಹಲವಾರು ವರ್ಷಗಳಿಂದ ರಂಝಾನ್‌ನ ಪ್ರತಿನಿತ್ಯ ಸಸ್ಯಹಾರಿ ಇಫ್ತಾರ್ ಕೂಟವನ್ನು ಏರ್ಪಡಿಸಿ ಕೊಂಡು ಬರಲಾಗುತ್ತಿದೆ. ಇದಕ್ಕೆ ಶ್ಲಾಘನೆ ವ್ಯಕ್ತಪಡಿಸಿರುವ ಗಿನ್ನೆಸ್ ವಲ್ಡ್ ರೆಕಾರ್ಡ್‌‌ನ ಅಧಿಕಾರಿಗಳು ‘ಪಿಸಿಟಿ ಹ್ಯೂಮಾನಿಟಿ’ ಎಂಬ ದತ್ತಿ ಸೇವಾ ಸಂಸ್ಥೆಗೆ ‘ಲಾಂಗೆಸ್ಟ್‌ ಲೈನ್‌ ಆಫ್‌ ಹಂಗರ್‌ ರಿಲೀಫ್‌ ಪ್ಯಾಕೇಜ್‌’ ಎಂಬ ದಾಖಲೆ ಪತ್ರ ನೀಡಿ ಗೌರವಿಸಿದೆ.

ತಮ್ಮ ಸಂಸ್ಥೆಯನ್ನು ಗಿನ್ನೆಸ್ ವಲ್ಡ್ ರೆಕಾರ್ಡ್‌ ಗುರುತಿಸಿರುವುದಕ್ಕೆ ಸಂತೋಷ ವ್ಯಕ್ತಪಡಿಸಿರುವ ಜೋಗಿಂದರ್ ಸಿಂಗ್ ಸಾಲಾರಿಯಾ ಇದು ನಮಗೆಲ್ಲರಿಗೂ ಸಂತೋಷದ ಸಂದರ್ಭವಾಗಿದೆ. ಕೆಲಸ ಅರಸಿಕೊಂಡು ಭಾರತದಿಂದ ಯುಎಇಗೆ ವಲಸೆ ಬಂದಿರುವ ಅದೆಷ್ಟೊ ಮುಸ್ಲಿಮರಿಗೆ ಇದರಿಂದ ಪ್ರಯೋಜನವಾಗಿದೆ. ಇದರ ಹೊರತಾಗಿ ನಮ್ಮ ಮುಖ್ಯ ಲಕ್ಷ್ಯ ಆರೋಗ್ಯ ಆಹಾರದ ವಿತರಣೆ ಮತ್ತು ಸಸ್ಯಹಾರವನ್ನು ಪ್ರೋತ್ಸಾಹಿಸಿ ಪ್ರಾಣಿ ವಧೆಯನ್ನು ತಡೆಯುವುದೂ ಆಗಿದೆ ಎಂದರು.

Check Also

ಕ್ರೈಸ್ಟ್ ಚರ್ಚ್ ದಾಳಿ ಸಂತ್ರಸ್ತರ 200 ಕುಟುಂಬಸ್ಥರಿಗೆ ದೊರೆ ಸಲ್ಮಾನ್ ರಿಂದ ಹಜ್ ಕೊಡುಗೆ

103ಸಂದೇಶ ಇ-ಮ್ಯಾಗಝಿನ್: ಕ್ರೈಸ್ಟ್‌ಚರ್ಚ್ ಭಯೋತ್ಪಾದಕ ದಾಳಿಯ ಸಂತ್ರಸ್ತರ 200 ಕುಟುಂಬ ಸದಸ್ಯರಿಗೆ ಈ ಬಾರಿಯ ಹಜ್ ಆತಿಥ್ಯ ವಹಿಸುವಂತೆ ಸೌದಿ …

Leave a Reply

Your email address will not be published. Required fields are marked *