Monday , August 26 2019
Breaking News
Home / ರಾಷ್ಟ್ರೀಯ / ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಯೋಧ ಆರಿಫ್ ಖಾನ್ ಹುತಾತ್ಮ

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಯೋಧ ಆರಿಫ್ ಖಾನ್ ಹುತಾತ್ಮ

ಸಂದೇಶ ಇ-ಮ್ಯಾಗಝಿನ್: ಪಾಕಿಸ್ತಾನ ಸೋಮವಾರ ಕದನ ವಿರಾಮವನ್ನು ಉಲ್ಲಂಘಿಸಿದ್ದು, ಜಮ್ಮು ಕಾಶ್ಮೀರದ ರಾಜೋರಿಯ ಸುಂದರ್‌ಬಾನಿ ಸೆಕ್ಟರ್‌ನಲ್ಲಿ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಮೃತಯೋಧನನ್ನು ರೈಫಲ್ ಮ್ಯಾನ್ ಎಂಡಿ ಆರಿಫ್ ಶಫಿ ಆಲಂ ಖಾನ್ ಪಠಾಣ್ ಎಂದು ಗುರುತಿಸಲಾಗಿದೆ. ಸೋಮವಾರ ಮುಂಜಾನೆ ಪಾಕಿಸ್ತಾನವು ರಾಜೋರಿಯ ಸುಂದರ್‌ಬಾನಿ ಸೆಕ್ಟರ್‌ನಲ್ಲಿ ಎಲ್‌ಒಸಿ ಉದ್ದಕ್ಕೂ ಸಣ್ಣ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಗುಂಡು ಹಾರಿಸುವ ಮೂಲಕ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಗೆ ಚಾಲನೆ ನೀಡಿತು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ರೈಫಲ್ ಮ್ಯಾನ್ ಎಂಡಿ ಆರಿಫ್ ಶಫಿ ಆಲಂ ಖಾನ್ ಪಠಾಣ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ನಾರ್ದರ್ನ್ ಕಮಾಂಡ್ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಆರೀಫ್ ಅವರ ಸರ್ವೋಚ್ಚ ತ್ಯಾಗಕ್ಕೆ ನಮಸ್ಕರಿಸುತ್ತಾರೆ ಮತ್ತು ಕುಟುಂಬಕ್ಕೆ ಆಳವಾದ ಸಂತಾಪ ಸೂಚಿಸುತ್ತಾರೆ”ಎಂದು ಉತ್ತರ ಸೇನಾ ಕಮಾಂಡ್ ಟ್ವೀಟ್ ನಲ್ಲಿ ತಿಳಿಸಿದೆ.

25 ವರ್ಷದ ಆರಿಫ್ ಗುಜರಾತ್‌ನ ವಡೋದರಾ ನಿವಾಸಿಯಾಗಿದ್ದಾರೆ. ಅವಿವಾಹಿತರಾದ ಅವರು ದೇಶಕ್ಕಾಗಿ ತಮ್ಮ ಜೀವವನ್ನು ಅರ್ಪಿಸಿದರು. ಹುತಾತ್ಮ ಯೋಧ ಆರಿಫ್ ತಂದೆ ಮತ್ತು 4 ಸಹೋದರರನ್ನು ಅಗಲಿದ್ದಾರೆ.

Check Also

ಲಿಂಚಿಂಗ್ ಬಗ್ಗೆ ಕೇಂದ್ರ ಮಂತ್ರಿ ಮುಖ್ತಾರ್ ಅಬ್ಬಾಸ್ ನಖ್ವಿ ವಿವಾದಾತ್ಮಕ ಹೇಳಿಕೆ

227ಸಂದೇಶ ಇ-ಮ್ಯಾಗಝಿನ್: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮಾಬ್ ಲಿಂಚಿಂಗ್ ಬಗ್ಗೆ ವಿವಾದಾಸ್ಪದ ಹೇಳಿಕೆ ನೀಡಿದ್ದು, …

Leave a Reply

Your email address will not be published. Required fields are marked *