Tuesday , December 10 2019
Breaking News
Home / ಹದೀಸ್

ಹದೀಸ್

ಸಂಪಾದನೆಯು ಇಬಾದತ್ ಆಗಿದೆ

ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ ಸಂಕಲ್ಪ ಶುದ್ದಿಯು ಮಾನವನ ಇಡೀ ಜೀವನ ಮತ್ತು ಅವನ ಎಲ್ಲಾ ಕಾರ್ಯಗಳನ್ನು ಇಬಾದತ್ ಆಗಿ ಮಾಡುತ್ತದೆ. ಸಂಕಲ್ಪದ ದೋಷವು ಉತ್ತಮ ಕಾರ್ಯಗಳನ್ನು ಪಾಪವಾಗಿ ಮಾರ್ಪಡಿಸುತ್ತದೆ. ಇಸ್ಲಾಮ್ ಧರ್ಮನಿಷ್ಠೆ ಮತ್ತು ಇಬಾದತ್ ನ ಎಷ್ಟು ವಿಶಾಲ ಕಲ್ಪನೆಯನ್ನು ಮೂಡಿಸುತ್ತದೆ ಎಂದು ಈ ಹದೀಸ್ ನಿಂದ ವ್ಯಕ್ತವಾಗುತ್ತದೆ. ಕಅದ್ ಬಿನ್ ಉಜ್ರ(ರ) ಹೇಳುತ್ತಾರೆ: ಲೋಕಪ್ರವಾದಿ(ಸ.ಅ)ರ ಬಳಿಯಿಂದ ಓರ್ವ ವ್ಯಕ್ತಿ ಹಾದು ಹೋಗುತ್ತಿದ್ದನು. ಅವನು ದುಡಿದು ಸಂಪಾದಿಸುವುದಕ್ಕಾಗಿ ಹೋಗುತ್ತಿದ್ದನು. ಪ್ರವಾದಿ …

Read More »

ಇಸ್ಲಾಮ್ ವಿವೇಕದ ಧರ್ಮ

-ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ ಪ್ರವಾದಿ(ಸ.ಅ) ಹೇಳಿದರು ಒಬ್ಬನು ದಾರಿತಪ್ಪಿದ ಜಾನುವಾರನ್ನು ಇರಿಸಿಕೊಂಡರೆ ಅವನೇ ದಾರಿ ತಪ್ಪಿದಂತೆ. ಅದನ್ನು ಬಹಿರಂಗಗೊಳಿಸುವ ತನಕ. (ಮುಸ್ಲಿಮ್) ಒಬ್ಬನಿಗೆ ಒಂದು ದಾರಿ ತಪ್ಪಿದ ಜಾನುವಾರು ಸಿಕ್ಕಿದರೆ ಅವನು ಅದನ್ನು ಬಹಿರಂಗಗೊಳಿಸಬೇಕು. ಅದು ಯಾರಿಗೆ ಸೇರಿದೆಯೋ ಅವನಿಗೆ ತಿಳಿಸಿ ಅವನು ಅದನ್ನು ಕೊಂಡುಹೋಗುವಂತಾಗಬೇಕು. ಯಾರಾದರೂ ಅಂತಹ ಜಾನುವಾರನ್ನು ತನ್ನ ಮನೆಯಲ್ಲಿ ಕಟ್ಟಿ ಹಾಕಿ ಸುಮ್ಮನಿದ್ದು ಬಿಟ್ಟರೆ ಅವನೇ ದಾರಿತಪ್ಪಿದಂತೆ ಎಂದು ಲೋಕಪ್ರವಾದಿ(ಸ.ಅ) ಹೇಳಿರುವರು. ಜಾನುವಾರಿನ ನೈಜ ಮಾಲಕನಿಗೆ …

Read More »

ಪ್ರವಾದಿ ಮುಹಮ್ಮದ್(ಸ)ರ ಶಿಕ್ಷಣದ ಕ್ರಮ

ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ ಅಬ್ದುಲ್ಲಾ ಬಿನ್ ಮಸ್ಊದ್(ರ) ರಿಂದ ವರದಿ: ಪ್ರವಾದಿ(ಸ.ಅ)ರು ನಮಗೆ ಉಪದೇಶಿಸುವಾಗ ನಾವು ಬೇಸತ್ತು ಹೋಗದಂತೆ ಎಚ್ಚರಿಕೆ ವಹಿಸುತ್ತಿದ್ದರು. ಅದು ಪ್ರವಾದಿ(ಸ.ಅ)ರಿಗೆ ಇಷ್ಟವಿರಲಿಲ್ಲ. ಬೋಧನೆ, ಉಪದೇಶಗಳಲ್ಲಿ ಸಮತೋಲನವಿರಬೇಕು. ಸಂಜೆ ಮುಂಜಾನೆ ಎಲ್ಲಾ ವೇಳೆಯೂ ಜನರಿಗೆ ಉಪದೇಶ ಮಾಡುತ್ತಲೇ ಇದ್ದರೆ ಜನರು ಬೇಸತ್ತು ಹೋಗಿ ಅದನ್ನು ತಮ್ಮ ಪಾಲಿಗೆ ವಿಪತ್ತೆಂದು ಬಗೆಯುವ ಸಾಧ್ಯತೆಯಿದೆ. ಪ್ರವಾದಿ(ಸ.ಅ)ರು ಜನರನ್ನು ಬೋಧಿಸುವಾಗ ಜನರ ಮನೋವಿಜ್ಞಾನ ವನ್ನು ಯಾವಾಗಲೂ ಗಮನದಲ್ಲಿಡುತ್ತಿದ್ದರು. ಜನರಲ್ಲಿ ಉತ್ಸಾಹ ಬಾಕಿ …

Read More »

ಇಸ್ಲಾಮಿನಲ್ಲಿ ಫಲಗಳ ವ್ಯಾಪಾರ

ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ ಅಬ್ದುಲ್ಲಾ ಬಿನ್ ಉಮರ್ (ರ)ವರದಿ ಮಾಡುತ್ತಾರೆ: ಪ್ರವಾದಿ(ಸ.ಅ)ರು ಫಲಗಳು ಪಕ್ವವಾಗದೆ ಅವುಗಳ ವ್ಯಾಪಾರ ಮಾಡುವುದನ್ನು ನಿಷೇಧಿಸಿರುವರು. ಪ್ರವಾದಿ (ಸ.ಅ)ರು ಇಂತಹ ಹಣ್ಣುಗಳನ್ನು ಮಾರುವುದನ್ನು ಖರೀದಿಸುವುದನ್ನು ನಿಷೇಧಿಸಿರುವರು. (ಬುಖಾರಿ, ಮುಸ್ಲಿಮ್) ಅರೇಬಿಯಾದಲ್ಲಿ ಖರ್ಜೂರ, ದ್ರಾಕ್ಷಿ ಇತ್ಯಾದಿ ಫಲಗಳ ಬೆಳೆಯಾಗುವ ಕಡೆಯ ಜನರು ಫಲ ಮಾಗುವುದಕ್ಕೆ ಮುಂಚೆ ಅವು ಮರಗಳಲ್ಲಿರುವಾಗಲೇ ಮಾರಿ ಬಿಡುತ್ತಿದ್ದರು. ಇದೇ ರೀತಿ ಹೊಲದಲ್ಲಿ ಧಾನ್ಯ ತಯಾರಾಗುವ ಮುಂಚೆಯೇ ಮಾರಲಾಗುತ್ತಿತ್ತು. ಪ್ರವಾದಿ (ಸ.ಅ)ರು ಇದರಿಂದ ತಡೆದರು. ಯಾಕೆಂದರೆ, …

Read More »

ಇಸ್ಲಾಮ್ ಸ್ವಾಭಿಮಾನ ಜೀವನಕ್ಕೆ ಪ್ರೋತ್ಸಾಹ ನೀಡುತ್ತದೆ

ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ ಇಸ್ಲಾಮ್ ಸ್ವಾಭಿಮಾನಕ್ಕೆ ಬಹಳ ಮಹತ್ವ ನೀಡುತ್ತದೆ. ಅದುದರಿಂದ ಪ್ರವಾದಿ(ಸ.ಅ)ರ ಶಿಕ್ಷಣವೇನೆಂದರೆ ಜನರ ಮುಂದೆ ತನ್ನ ಬೇಡಿಕೆಗಳನ್ನಿಟ್ಟು ಭಿಕ್ಷುಕನಾಗಿ ಅವರ ಮುಂದೆ ಹೋಗುವ ನಿಂದ್ಯತೆಯನ್ನನುಭವಿಸುವುದಕ್ಕಿಂತ ಒಬ್ಬ ವ್ಯಕ್ತಿ ಕಟ್ಟಿಗೆಯ ಕಟ್ಟನ್ನು ತನ್ನ ಬೆನ್ನ ಮೇಲೇರಿಸಿ ತಂದು ಅದನ್ನು ಮಾರಿ ತನ್ನ ಬೇಡಿಕೆಗಳನ್ನು ಪೂರೈಸುವುದು ಉತ್ತಮ. ಅಬೂಹುರೈರಾ (ರ)ವರದಿ ಮಾಡುತ್ತಾರೆ; ಲೋಕಪ್ರವಾದಿ (ಸ.ಅ) ಹೇಳಿದರು: ನಿಮ್ಮ ಪೈಕಿ ಯಾರಾದರೂ ಕಟ್ಟಿಗೆ ಶೇಖರಿಸಿ ತನ್ನ ಬೆನ್ನ ಮೇಲೆ ಅದರ ಕಟ್ಟನ್ನು …

Read More »

ಇಸ್ಲಾಮ್ ಶಾಂತಿಯ ಧರ್ಮ-ಹದೀಸ್

ಅಬೂಹುರೈರಾ (ರ)ವರದಿ ಮಾಡುತ್ತಾರೆ: ಒಬ್ಬ ಗ್ರಾಮೀಣ ಅರಬನು ಮಸೀದಿಯಲ್ಲಿ ಮೂತ್ರಶಂಕೆ ಮಾಡಲಾರಂಭಿಸಿದಾಗ ಜನರು ಅವನನ್ನು ಥಳಿಸಲು ಮುಂದಾದರು. ಆ ಜನರನ್ನು ಉದ್ದೇಶಿಸಿ ಲೋಕಪ್ರವಾದಿ (ಸ.ಅ) ಹೀಗೆ ಹೇಳಿದರು, “ಅವನನ್ನು ಬಿಟ್ಟು ಬಿಡಿ. ಆ ಮೂತ್ರದ ಮೇಲೆ ಒಂದು ಬಕೆಟ್ ನೀರನ್ನು ಹಾಯಿಸಿಬಿಡಿ. ಏಕೆಂದರೆ ನಿಮ್ಮನ್ನು ಸುಲಭಗೊಳಿಸುವವರಾಗಿ ನೇಮಿಸಲಾಗಿದೆಯೇ ಹೊರತು ಕಠಿಣತೆ ತೋರುವವರಾಗಿಯಲ್ಲ.”(ಬುಖಾರಿ) ಅರ್ಥತ್ ಧರ್ಮದಲ್ಲಿ ಕಠಿಣತೆಯಿಲ್ಲ. ಇಸ್ಲಾಮಿನ ಅನುಯಾಯಿಗಳು ಕಠಿಣತೆಯನ್ನು ತೊರೆಯಬೇಕು. ಸೌಲಭ್ಯ ಉಂಟುಮಾಡುವುದು ನಿಮ್ಮ ಕರ್ತವ್ಯವಾಗಿದೆ. ಜನರು ತಮ್ಮ …

Read More »

ಮೂರು ದಿನಕ್ಕಿಂತ ಮೇಲೆ ದ್ವೇಷವಿಲ್ಲ: ಹದೀಸ್

ಅನಸ್(ರ) ಹೇಳುತ್ತಾರೆ; ಪ್ರವಾದಿ(ಸ) ಹೇಳಿದರು- ನೀವು ಪರಸ್ಪರ ಹಗೆತನವಿರಿಸಬಾರದು. ಅಸೂಯೆ ಪಡಬಾರದು, ಪರಸ್ಪರರಿಂದ ಮುಖ ತಿರುಗಿಸಬಾರದು. ಅಲ್ಲಾಹನ ದಾಸರೇ! ಪರಸ್ಪರ ಸಹೋದರರಾಗಿರುವಿರಿ. ಮೂರು ದಿವಸಗಳಿಗಿಂತ ಹೆಚ್ಚು ತನ್ನ ಸಹೋದರನಿಂದ ಸಂಬಂಧ ಕಡಿದುಕೊಂಡಿರುವುದು ಯಾವ ಮುಸ್ಲಿಮನಿಗೂ ಧರ್ಮ ಸಮ್ಮತವಲ್ಲ. (ಬುಖಾರಿ) ಅಬೂ ಹುರೈರಾ(ರ) ಹೇಳುತ್ತಾರೆ; ಪ್ರವಾದಿ(ಸ) ಹೇಳಿದರು- ನೀವು ಗುಮಾನಿಗಳಿಂದ ದೂರವಿರಿ. ಏಕೆಂದರೆ ಗುಮಾನಿಯು ಮಾತಿನಲ್ಲಿ ಅತಿ ದೊಡ್ಡ ಸುಳ್ಳಾಗಿದೆ. ಇತರರ ರಹಸ್ಯಗಳನ್ನು ಕೆದಕಬಾರದು. ಕುಂದುಕೊರತೆಗಳನ್ನು ಶೋಧಿಸಬಾರದು. ಪರಸ್ಪರ ಪೈಪೋಟಿ ನಡೆಸಬಾರದು. …

Read More »

ಜುಮುಅ ದಿನದ ಅಝಾನ್-ಹದೀಸ್

ಸಾಇದ್ ಬಿನ್ ಯಝೀದ್(ರ) ಹೇಳುತ್ತಾರೆ: ಪ್ರವಾದಿ(ಸ)ಯವರ ಹಾಗೂ ಅಬೂಬಕರ್(ರ) ಮತ್ತು ಉಮರ್(ರ) ಕಾಲದಲ್ಲಿ ಇಮಾಮ್ ಮಿಂಬರ್‌ನಲ್ಲಿ ಕುಳಿತಾಗ ಜುಮಾದ ಅದಾನ್ ಕೊಡಲಾಗುತ್ತಿತ್ತು. ಆನಂತರ ಉಸ್ಮಾನ್(ರ) ಖಲೀಫಾ ಆದಾಗ ಮತ್ತು ಜನರು ಹೆಚ್ಚಾಗ ತೊಡಗಿದಾಗ ಅವರು ಝವುರಾ(ಮದೀನಾದ ಪೇಟೆಯಲ್ಲಿರುವ ಒಂದು ಸ್ಥಳ) ಎಂಬಲ್ಲಿ ಇನ್ನೊಂದು ಅದಾನ್ ಕೊಡುವ ಪದ್ಧತಿ ಜಾರಿಗೆ ತಂದರು. (ಸಹೀಹ್ ಅಲ್ ಬುಖಾರಿ) ಸಾಇದ್ ಬಿನ್ ಯಝೀದ್(ರ) ಹೇಳುತ್ತಾರೆ: ಪ್ರವಾದಿ(ಸ)ಯವರ ಕಾಲದಲ್ಲಿ ಕೇವಲ ಒಬ್ಬ ಮುಅದ್ದಿನ್ ಇದ್ದರು. ಜುಮಾ …

Read More »

ಅಪಸ್ಮಾರ ರೋಗಿಯೊಬ್ಬಳ ಚರಿತ್ರೆ: ಹದೀಸ್

ಹದೀಸ್ ಸಂಗ್ರಹ: ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ. ಇಂದು ಪ್ಯಾಶನ್ ಯುಗದಲ್ಲಿ ತೇಲಿ ನಲಿಡಾಡುತ್ತಿರುವ ಸಮೂಹ ಹಲವಾರು ಧೀರಮಹಿಳೆಯರ ಆದರ್ಶ ಚರಿತ್ರೆಯನ್ನು ಮರೆತಿರುವುದು ಖೇದಕರ. ಅಲ್ಲಾಹನು ನೀಡಿದ ಸಂಪತ್ತಿನಲ್ಲಿ ಇಂದು ಬಹುತೇಕ ತಂದೆ ತಾಯಿಯರು ತನ್ನ ಮಕ್ಕಳಿಗೆ ನೀಡುವ ಉಡುಪು ತನ್ನ ಶರೀರದ ನಾನ ಭಾಗಗಳ ಪ್ರದರ್ಶನ ರೂಪದ ತುಂಡು ಬಟ್ಟೆಗಳಾದರೆ ಇಸ್ಲಾಮಿನ ಆದರ್ಶವನ್ನು ಗಾಳಿಗೆತೂರಿ ನಡೆಯುವುದಾದರೆ ಇದೊಂದು ಅದ್ಭುತ ಚರಿತ್ರೆ ಇದನ್ನು ಓದಿದ ನಂತರ ನಾನೇಕೆ ಹೀಗೆ ಹಾಗಬಾರದು ಎಂದು …

Read More »

ಒಂದು ಸಣ್ಣ ಸುಳ್ಳು ಕೂಡ ಹೇಳಬಾರದು ಎಂದು ಕಲಿಸಿಕೊಟ್ಟ ಪ್ರವಾದಿ: ಹದೀಸ್

ಸಂಗ್ರಹಣೆ: ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ ಹೌದು ಬಹುತೇಕ, ತಂದೆ ತಾಯಿಯರು ತನ್ನ ಮಕ್ಕಳು ಊಟ ಮಾಡದೆ ಇದ್ದಾಗ ಚಂದ್ರ ಮತ್ತು ನಕ್ಷತ್ರಗಳನ್ನು ತೋರಿಸಿ ಅದು ನಿನಗೆ ತಂದು ಕೊಡುವೆ ಈಗ ಊಟ ಮಾಡು ಅಂತ ಹೇಳಿ ಮಕ್ಕಳಿಗೆ ಊಟ ಕೊಡಿಸಿದ್ದು ಮರೆಯಲುಂಟೆ ಹಾಗಾದರೆ ಮುತ್ತು ಪ್ರವಾದಿಯ ಸಂದೇಶವೇನು ಎಂಬುದು ತಿಳಿಯೋಣ. ಅಬ್ದುಲ್ಲಾ ಬಿನ್ ಅಮಿರ್(ರ) ಹೇಳುತ್ತಾರೆ: “ಒಂದು ದಿನ ಪ್ರವಾದಿ(ಸ.ಅ)ರು ನಮ್ಮ ಮನೆಗೆ ಬಂದಿದ್ದರು. ನನ್ನ ತಾಯಿ ನನ್ನನ್ನು ಕೂಗಿ …

Read More »