Friday , April 3 2020
Breaking News
Home / ಲೇಖನ

ಲೇಖನ

ನೋಟ್ ಬ್ಯಾನ್ ಭಾರತಿಯರಿಗೆ ದಕ್ಕಿದ್ದೇನು?

note ban pic

ನೋಟ್ ಬ್ಯಾನ್ ಎಂಬ ಕರಾಳ ಇತಿಹಾಸಕ್ಕೆ ಇಂದಿಗೆ ಮೂರು ವರ್ಷ. ಇದರಿಂದ ಜನಸಾಮಾನ್ಯರಿಗಾದ ಲಾಭ ಏನಂದ್ರೆ… ಏನೂ ಇಲ್ಲ.! ಯಾವುದೇ ಒಬ್ಬ ಶ್ರೀಮಂತ ಬೀದಿಗೆ ಬರಲಿಲ್ಲ. ಬಡವರು, ದಿನಗೂಲಿ ಕಾರ್ಮಿಕರು ಬ್ಯಾಂಕ್ ಮುಂದೆ ಕಾವಲು ನಿಂತ್ರು. ಅವರಲ್ಲಿ ಕೆಲವರು ಸತ್ರು. ನೋಟ್ ಬ್ಯಾನ್ ಆದ ಒಂದೇ ವಾರದಲ್ಲಿ ಕಳ್ಳ ನೋಟು ಬಂತು. ಭಯೋತ್ಪಾದನೆ ನಿಂತೇ ಹೊಯ್ತು ಅಂದ್ರು. ಅದೂ ಸಾಧ್ಯವಾಗಲಿಲ್ಲ ಈಗಲೂ ಸೈನಿಕರು ಸಾಯ್ತಾ ಇದ್ದಾರೆ. ಚುನಾವಣೆ ಸಮಯದಲ್ಲಂತೂ ಅಲ್ಲಲ್ಲಿ …

Read More »

ಏನಿದು ತಲಾಕ್ ? ತಲಾಕ್ ನೀಡುವ ಸರಿಯಾದ ವಿಧಾನ ಯಾವುದು ?

ಕೇಂದ್ರ ಸರಕಾರವು ಮುತ್ತಾಲಕನ್ನು ನೀಡುವವರಿಗೆ 3 ವರ್ಷದ ಜೈಲಿನ ಕಾನೂನನ್ನು ಕೊನೆಗೂ ಜಾರಿಗೊಳಿಸಿದೆ. ವಿಶ್ವದ ಯಾವುದೇ ದೇಶದಲ್ಲಿ ಇಂತಹದೊಂದು ಕಾನೂನು ಜಾರಿಯಲ್ಲಿಲ್ಲ. ಪ್ರಕೃತಿ ಸಹಜ ಧರ್ಮವಾದ ಪವಿತ್ರ ಇಸ್ಲಾಮಿನಲ್ಲೂ ಇಂತಹದೊಂದು ಕಾನೂನು ಇದುವರೆಗೂ ಈ ಭೂಮಿಯಲ್ಲಿ ಜಾರಿಯಾಗಲಿಲ್ಲ. ಮೂರು ಬಾರಿ ತಲಾಕನ್ನು ಹೇಳುವವನಿಗೆ ಇಂತಹದೊಂದು ಶಿಕ್ಷೆಗೆ ಇಸ್ಲಾಮೀ ಶರೀಅತ್ ನ ಪ್ರಧಾನ ಮೂಲಗಳಾದ ಕುರ್ ಆನ್ ಹಾಗೂ ಹದೀಸ್ ನೊಂದಿಗೆ ಯಾವುದೇ ಸಂಭಂಧವಿಲ್ಲ. ಸರಕಾರದ ಈ ನಿಯಮದ ಪ್ರಕಾರ, ಯಾವುದೇ …

Read More »

ಜಗತ್ತಿಗೆ ಅಧ್ಬುತ ದೃಷ್ಟಾಂತವಾಗುಳಿದ ಫರೋವನ ಮೃತ ಶರೀರದ ರಹಸ್ಯಗಳು

ಪ್ರಾಚೀನ ಈಜಿಪ್ಟನ್ನು ಹಲವಾರು ಫರೋವಾಗಳು ಆಳಿದ್ದರು. ಅವರಲ್ಲಿ ಪ್ರವಾದಿ ಮೂಸಾ ಅಥವಾ ಬೈಬಲ್, ತೋರಾ ಗಳಲ್ಲಿ ಹೇಳಲಾಗುವ ಮೋಸೆಸ್ ಕಾಲದಲ್ಲಿ ಈಜಿಪ್ಟನ್ನು ಆಳಿದ್ದ ನಿರಂಕುಶ, ಅತೀ ಕ್ರೂರಿ ಮತ್ತು ತನ್ನನ್ನು ತಾನೇ ದೇವನೆಂದು ಘೋಷಿಸಿಕೊಂಡು ಜನರಿಂದ ಬಲಾತ್ಕಾರವಾಗಿ ಆರಾಧಿಸಲ್ಪಡುತ್ತಿದ್ದ ಫರೋವ (Rasmsses 2) ನ ಕಥೆಯೇ ವಿಶಿಷ್ಟ. ಆತನ ಜೀವನ ಅಂತ್ಯದ ಚಿತ್ರಣದ ಹಾಗೂ ಆತನ ಮೃತದೇಹದ ವೈಶಿಷ್ಟ್ಯತೆಯ ಬಗ್ಗೆ ಕೇವಲ 1600 ವರ್ಷಗಳ ಹಿಂದೆ ಅವತೀರ್ಣಗೊಂಡ ಖುರ್ಹಾನ್ ಸ್ಪಷ್ಟವಾಗಿ …

Read More »

ಭಿಕ್ಷುಕರು ಮತ್ತು ಮುಸ್ಲಿಮ್ ಸಮುದಾಯ-ಕಣ್ಣು ತೆರೆಸುವ ಲೇಖನ

ಕಟ್ಟಿಗೆ ಕಡಿದು ಮಾರಿಯಾದರೂ  ಸ್ವಾಭಿಮಾನದಿಂದ ಬದುಕ ಬೇಕೆಂದು ಯಾವ ಧರ್ಮ ಕಲಿಸಿ ಕೊಟ್ಟಿತೋ ಮತ್ತು ಯಾವ ಧರ್ಮ ಬೇಡುವುದನ್ನು ನಿರುತ್ಸಾಹ ಪಡಿಸಿತೋ ಅದೇ ಧರ್ಮದಲ್ಲಿಂದು ಅತ್ಯಧಿಕ ಬೇಡುವವರಿದ್ದಾರೆ. ಅವರಲ್ಲಿ ಮೂಲಭೂತ ಅಗತ್ಯಕ್ಕಿಂತಲೂ ಮಿಗಿಲಾಗಿ ಯಾಚುವುದನ್ನೇ ದೈನಂದಿನ ಬದುಕನ್ನಾಗಿಸಿ ಕೊಂಡವರೇ ಅಧಿಕ. ಈ ಮಾಫಿಯಾದಲ್ಲಿ, ಸ್ತ್ರೀ-ಪುರುಷರ ಮಧ್ಯೆ ಪೈಪೋಟಿ ನಡೆಯುವಂತಿದೆ. ಅದೇ ಅಂಗಲಾಚುವ ಮಹಿಳೆಯರೊಡನೆ, ಮನೆ ಕೆಲಸಕ್ಕೆ ನಿಲ್ಲುವಿರಾ, ಸ್ವಾಭಿಮಾನದಿಂದ ಬದುಕಬಹುದಲ್ಲವೇ ಎಂದು ವಿಚಾರಿಸಿದರೆ, ನೆಪಗಳನ್ನು ಮುಂದಿಟ್ಟು ನುಣುಚಿಕೊಳ್ಳುತ್ತಾರೆ. ಅಂದರೆ ಭಿಕ್ಷಾಟನೆ …

Read More »

ಪಕ್ಷ ಸಂಘಟನೆಗಳೇ ನಮ್ಮ ಜೀವನ ಆಗದಿರಲಿ, ಚುನಾವಣೆಯ ನಂತರವೂ ನಮಗೆ ಬದುಕಬೇಕು

ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮ ದೇಶದಲ್ಲಿ ಪ್ರತೀ ಐದು ವರ್ಷಕ್ಕೊಮ್ಮೆ ಬರುವ ಚುನಾವಣೆ ಎಂಬುವುದೊಂದು ನಿರಂತರ ಪ್ರಕ್ರಿಯೆಯಾಗಿದೆ. ಈ ಚುನಾವಣೆಗಳಲ್ಲಿ ಗೆದ್ದವರು ಪಟ್ಟವೇರುತ್ತಾರೆ ಸೋತವರು ಮುಂದಿನ ಐದು ವರ್ಷ ತಮ್ಮ ಅದೃಷ್ಟಕ್ಕಾಗಿ ಕಾಯುತ್ತಿರುತ್ತಾರೆ. ಆದರೆ ಚುನಾವಣಾ ಸಮಯದಲ್ಲಿ ಸಾಮಾನ್ಯ ಜನರು ಮಾತ್ರ ತಮ್ಮ ಪಕ್ಷಗಳ ಹೆಸರಿನಲ್ಲಿ ತಮ್ಮ ಆಪ್ತರು ಗೆಳೆಯರು ಹಾಗೂ ಕುಟುಂಬಸ್ಥರೊಂದಿಗೆ ವೈರುದ್ಯವನ್ನು ಕಟ್ಟಿಕೊಳ್ಳುತ್ತಾರೆ. ಚುನಾವಣೆ ಮುಗಿಯುವುದರೊಂದಿಗೆ ಚುನಾವಣಾ ಕಣದಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಶತ್ರುತ್ವವು ಕೊನೆಗೊಂಡರೆ ಅದೇ ಚುನಾವಣಾ ಕಣದಲ್ಲಿ …

Read More »

ಸ್ವಹಿತಕ್ಕಾಗಿ ಸಮುದಾಯದ ರಾಜಕೀಯ ಹಕ್ಕನ್ನು ಕಡೆಗಣಿಸುತ್ತಿರುವ ಸಮುದಾಯದ ನಾಯಕರು

ಲೋಕಸಭಾ ಚುನಾವಣೆಯ ದಿನಾಂಕ ಈಗಾಗಲೇ ಘೋಷಣೆಯಾಗಿದ್ದು, ಮಂಗಳೂರು ಲೋಕಸಭಾ ಕ್ಷೇತ್ರವು ರಾಜಕೀಯವಾಗಿ ಕುತೂಹಲ ಮೂಡಿಸ ತೊಡಗಿದೆ. ಈ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಮತದಾರರು ಗಣನೀಯ ಪ್ರಮಾಣದಲ್ಲಿದ್ದು, ಈ ಕ್ಷೇತ್ರದ ಫಲಿತಾಂಶದಲ್ಲಿ ನಿರ್ಣಾಯಕವಾಗಿದ್ದಾರೆ. ಅಷ್ಟಾಗಿಯೂ ಈ ಕ್ಷೇತ್ರದಲ್ಲಿ ರಾಜಕೀಯವಾಗಿ ಸಮುದಾಯವು ನಿರ್ಲಕ್ಷಿಸಲ್ಪಡುತ್ತಿದೆ. ಈ ಬಾರಿಯಾದರೂ ಕಾಂಗ್ರೆಸ್ ಪಕ್ಷದ ಪರವಾಗಿ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ ಅಭ್ಯರ್ಥಿಗೆ ಅವಕಾಶ ನೀಡಬೇಕೆಂಬ ಕೂಗು ಕೇಳಿಬಂದರೂ ಸಮುದಾಯದ ಕೂಗಿಗೆ ಹೈಕಮಾಂಡ್ ಕ್ಯಾರೇ ಅನ್ನಲಿಲ್ಲ. ಇದು ಕಾಂಗ್ರೆಸ್ ಪಕ್ಷದ …

Read More »

ದೇಶ ದ್ರೋಹ ಹಾಗೂ ಮಾನಸಿಕ ಅಸ್ವಸ್ಥತೆಯ ಸರ್ಟಿಫಿಕೇಟ್ ವಿತರಿಸುತ್ತಿರುವ ಮಾಧ್ಯಮಗಳು

ಜಗತ್ತು ಆಧುನೀಕರಣ ಗೊಂಡಂತೆ ನಮ್ಮ ದೈನಂದಿನ ಬದುಕಿನ ಜೀವಾಳವಾಗಿರುವ ಮಾಧ್ಯಮಗಳೂ ಕೂಡ ಅದಕ್ಕಿಂತ ದುಪ್ಪಟ್ಟು ವೇಗದಲ್ಲಿ ಆಧುನೀಕರಣ ಗೊಂಡಿದೆ. ಆದರೆ ಬರ ಬರುತ್ತಾ ರಾಯರ ಕುದುರೆ ಕತ್ತೆ ಆಯಿತು ಅನ್ನೋ ಗಾದೆ ಮಾತಿನ ಹಾಗೆ ನಮ್ಮ ದೇಶದ ಮಾಧ್ಯಮಗಳು ಅದರಲ್ಲೂ ಮುಖ್ಯವಾಗಿ ದೃಶ್ಯ ಮಾಧ್ಯಮಗಳು ಜನರನ್ನು ಮಂಗ ಮಾಡುವುದರಲ್ಲಿ ಪೈಪೋಟಿ ನಡೆಸುತ್ತಿದೆ. ಪುಲ್ವಾಮ ಭಯೋತ್ಪಾದಕ ದಾಳಿಯಾದ ಬಳಿಕ ನಮ್ಮ ದೇಶದ ಮಾಧ್ಯಮಗಳು ಹರಿ ಬಿಟ್ಟ ಸುಳ್ಳುಗಳು ಲೆಕ್ಕ ಹಾಕಿದರೆ ಲೋಡು …

Read More »

ಏನಿದು ಅಭಿನಂದನ್ ಬಿಡುಗಡೆಗೆ ಕಾರಣವಾದ ಜಿನೆವಾ ಒಪ್ಪಂದ?

ಸಂದೇಶ ಇ-ಮ್ಯಾಗಝಿನ್: ಭಾರತದ ವಾಯು ಸೇನೆಯ ಮಿಗ್ -21 ಫೈಟರ್ ಜೆಟ್‌ನ ಫೈಟರ್ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಮೊನ್ನೆ ದಾಳಿ ನಡೆಸುವಾಗ ಪ್ರತಿದಾಳಿ ನಡೆಸಿದ ಪಾಕ್ ವಾಯುಪಡೆಗಳು ಅಭಿನಂದನ್ ಚಲಾಯಿಸುತ್ತಿದ್ದ ಮಿಗ್ -21 ಫೈಟರ್ ಜೆಟನ್ನು ಪತನ ಗೊಳಿಸಿತ್ತು. ಆನಂತರ ಪ್ಯಾರಾಚೂಟ್ ಸಹಾಯದಿಂದ ಪಾಕಿಸ್ತಾನದ ಗಡಿಯ ಒಳ ಭಾಗದಲ್ಲಿ ಬಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನದ ಸೇನೆ ಬಂಧಿಸಿ ಯುದ್ಧ ಖೈದಿಯಾಗಿ ಇಟ್ಟಿತ್ತು. ನಿನ್ನೆ …

Read More »

ಅಮ್ಮ ಅವರು ಇವತ್ತು ನನ್ನನ್ನು ನೋಡಲು ಬರುತ್ತಾರಾ..?

ಜಮೀಲಾ ಅಮ್ಮನಿಗೆ, ಅಮ್ಮ ಇವತ್ತು ಅವರು ನನ್ನನು ನೋಡಲು ಬರುತ್ತಿದ್ದಾರೆ ಎಂದು ನೀನು ಇವತ್ತಿಗೆ ನನಗೆ ಹತ್ತನೇಯ ಬಾರಿ ಹೇಳುತ್ತಿದ್ದಿಯ. ಆದರೆ ಬಂದವರೆಲ್ಲ ಊಟ ಮಾಡಿ ಹೋಗುತ್ತಿದ್ದಾರೆ. ಹಾಗಾದರೆ ನನ್ನಲ್ಲಿ ಇರುವ ಕೊರೆತೆಯಾದರೂ ಏನಮ್ಮ. ನಾನು ನೋಡಲು ಸ್ವಲ್ಪ ಅವಲಕ್ಷಣದ ಹೆಣ್ಣು ಎಂದುಕೊಂಡು ಅವರು ತಿರುಗಿ ಹೋಗುತಿದ್ದಾರೆ ಅಲ್ವ ಅಮ್ಮ. ಯಾಕೆ ಅಮ್ಮ ಲಕ್ಷಣವಾಗಿ ಇರುವ ಹೆಣ್ಣುಮಕ್ಕಳಿಗೆ ಒಂದು ನ್ಯಾಯ ಮತ್ತು ನನ್ನಂತ ಕೂರುಪಿ ಹೆಣ್ಣು ಮಕ್ಕಳಿಗೆ ಒಂದು ನ್ಯಾಯ …

Read More »

ಮಗನನ್ನು ಬೆಳೆಸುವಾಗ ತಾಯಂದಿರು ಎಸಗುವ 4 ಪ್ರಮುಖ ತಪ್ಪುಗಳು

ಸಂದೇಶ ಇ-ಮ್ಯಾಗಝಿನ್: ಎಲ್ಲಾ ಕಾಲಘಟ್ಟದಲ್ಲೂ ತಾಯಂದಿರು ತಮ್ಮ ಬೆಳೆಯುತ್ತಿರುವ ಮಗನ ಬಗ್ಗೆ ಹೇಳುವ ಕಂಪ್ಲೇಂಟ್ ಏನಂದ್ರೆ, ಅವನು ನನ್ನ ಮಾತು ಕೇಳುತ್ತಿಲ್ಲ. ಮೀಸೆ ಬಲಿತಿಲ್ಲ ಈಗಲೇ ದೊಡ್ಡ ಗಂಡಸಿನ ಹಾಗೆ ವರ್ತಿಸುತ್ತಾನೆ. ನನ್ನ ಮಗ ತುಂಬಾ ಹಾಳಾಗಿದ್ದಾನೆ. ನಾನು ಮಾತಾಡುವಾಗ ಎದುರುತ್ತರ ಕೊಡುತ್ತಾನೆ. ತಾಯಂದಿರ ಇಂತಹ ದೂರುಗಳನ್ನು ನೀವು ಕೇಳಿಯೇ ಇರುತ್ತೀರ. ಇದಕ್ಕೆ ಕಾರಣವೇನಿರಬಹುದು. ಸಿಂಪಲ್ಲಾಗಿ ಹೇಳಬೇಕೆಂದರೆ ಇದಕ್ಕೆಲ್ಲ ಕಾರಣ ತಾಯಂದಿರೇ ಆಗಿರುತ್ತಾರೆ. ಹೌದು, ನೀವು ಯಾವ ರೀತಿ ಬೆಳೆಸುತ್ತೀರೋ …

Read More »