Monday , July 22 2019
Breaking News
Home / ರಾಷ್ಟ್ರೀಯ

ರಾಷ್ಟ್ರೀಯ

ಲಿಂಚಿಂಗ್ ಬಗ್ಗೆ ಕೇಂದ್ರ ಮಂತ್ರಿ ಮುಖ್ತಾರ್ ಅಬ್ಬಾಸ್ ನಖ್ವಿ ವಿವಾದಾತ್ಮಕ ಹೇಳಿಕೆ

002ಸಂದೇಶ ಇ-ಮ್ಯಾಗಝಿನ್: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮಾಬ್ ಲಿಂಚಿಂಗ್ ಬಗ್ಗೆ ವಿವಾದಾಸ್ಪದ ಹೇಳಿಕೆ ನೀಡಿದ್ದು, ಮಾಬ್ ಲಿಂಚಿಂಗ್ ಪ್ರಕರಣಗಳಲ್ಲಿ ಹೆಚ್ಚಿನವು ನಕಲಿ ಮತ್ತು ಕಟ್ಟು ಕಥೆಗಳಾಗಿವೆ ಎಂದು ಉಡಾಫೆಯ ಉತ್ತರ ನೀಡಿದ್ದಾರೆ. ನಖ್ವಿಯ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೆವಾಲಾ “ನಾನು ನಖ್ವಿ ಜಿ ಅವರನ್ನು ತುಂಬಾ ಗೌರವಿಸುತ್ತೇನೆ. ಆದರೆ ಈ ದೇಶದಲ್ಲಿ ಅಲ್ಪಸಂಖ್ಯಾತರೊಂದಿಗೆ ಏನಾಗುತ್ತಿದೆ ಎಂದು ಅವರಿಗೆ ತಿಳಿದಿದೆಯೇ? …

Read More »

ಇನ್ನು ಮುಂದೆ ಆಹಾರ ಪೋಲು ಮಾಡಿದರೆ ದಂಡ ಕಟ್ಟಬೇಕಾಗಬಹುದು

000ಸಂದೇಶ ಇ-ಮ್ಯಾಗಝಿನ್: ಆಹಾರಗಳನ್ನು ಪೋಲು ಮಾಡುವ ಹೊಟೇಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಮದುವೆ ಹಾಲ್ ಗಳಿಗೆ ಐದು ಲಕ್ಷದ ವರೆಗೆ ದಂಡ ವಿಧಿಸುವ ಕಾನೂನು ಜಾರಿಯಾಗುವ ಸಾಧ್ಯತೆ ಇದೆ. ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಈ ಬಗ್ಗೆ ಕರಡನ್ನು ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಇದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಅನುಮೋದನೆಗಾಗಿ ಕಳುಹಿಸಲಾಗುವುದು. ಇತ್ತೀಚಿನ ದಿನಗಳಲ್ಲಿ ಹೊಟೇಲ್‌, ರೆಸ್ಟೋರೆಂಟ್ ಹಾಗೂ ಮದುವೆ ಹಾಲ್ ಗಳ ಆಹಾರದ ತ್ಯಾಜ್ಯಗಳು …

Read More »

ಮಾಬ್ ಲಿಂಚಿಂಗ್‌ಗೆ ಬಲಿಯಾಗುತ್ತಿದ್ದ ಮುಸ್ಲಿಮ್ ವ್ಯಕ್ತಿಯನ್ನು ರಕ್ಷಿಸಿದ ಹಿಂದೂ ಕುಟುಂಬ

002ಸಂದೇಶ ಇ-ಮ್ಯಾಗಝಿನ್: ಜೈ ಶ್ರೀ ರಾಮ್ ಎಂದು ಜಪಿಸಲು ನಿರಾಕರಿಸಿದ್ದಕ್ಕಾಗಿ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳ ಗುಂಪೊಂದು ಥಳಿಸಿದ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಿಂದ ವರದಿಯಾಗಿದೆ. ಸಂತ್ರಸ್ತ ಇಮ್ರಾನ್ ಇಸ್ಮಾಯಿಲ್ ಪಟೇಲ್ ಎಂಬ ವ್ಯಕ್ತಿ ಬೈಕಿನಲ್ಲಿ ಹೋಗುತ್ತಿದ್ದಾಗ ತಡೆದ ದುಷ್ಕರ್ಮಿಗಳ ಗುಂಪೊಂದು ‘ಜೈ ಶ್ರೀ ರಾಮ್’ ಹೇಳುವಂತೆ ಒತ್ತಾಯಿಸಿ ನಿರಾಕರಿಸಿದ್ದಕ್ಕೆ ಥಳಿಸಿದೆ ಎನ್ನಲಾಗಿದೆ. ಗುಂಪು ನನ್ನನ್ನು ಥಳಿಸುತ್ತಿದ್ದಾಗ ಸ್ಥಳಕ್ಕಾಗಮಿಸಿದ ಗಣೇಶ್ ಮತ್ತು ಅವರ ಕುಟುಂಬದವರು ನನ್ನನ್ನು ಹಲ್ಲೆಕೋರರಿಂದ ರಕ್ಷಿಸಿದ್ದಾರೆ ಎಂದು ಇಮ್ರಾನ್ ಇಸ್ಮಾಯಿಲ್ …

Read More »

ಐಎಂಎ ವಂಚಕ ಮನ್ಸೂರ್ ಖಾನ್ ದೆಹಲಿ ವಿಮಾನ ನಿಲ್ದಾಣದಲ್ಲಿ ಅರೆಸ್ಟ್

000ಸಂದೇಶ ಇ-ಮ್ಯಾಗಝಿನ್: ಶುಕ್ರವಾರ ಮುಂಜಾನೆ ದುಬೈನಿಂದ ನವದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಹು ಕೋಟಿ ಐಎಂಎ ಫಾಂಝಿ ಸ್ಕೀಮ್ ಹಗರಣದ ಪ್ರಮುಖ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್‌ನನ್ನು ಜಾರಿ ನಿರ್ದೇಶನಾಲಯ(ED) ಅಧಿಕಾರಿಗಳು ವಿಮಾನ ನಿಲ್ದಾಣದಲ್ಲೇ ಬಂಧಿಸಿದ್ದಾರೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ಮನ್ಸೂರ್ ಖಾನ್‌ಗೆ ದುಬೈನಿಂದ ನವದೆಹಲಿಗೆ ಪ್ರಯಾಣಿಸಿ ಕಾನೂನಿನ ಮುಂದೆ ಹಾಜರಾಗುವಂತೆ ಆದೇಶಿಸಿದ ನಂತರ ಐ ಮಾನಿಟರಿ ಅಡ್ವೈಸರಿ (ಐಎಂಎ) ಯ ಮಾಲೀಕ ಮತ್ತು ಸಂಸ್ಥಾಪಕ ಖಾನ್ ಇಂದು …

Read More »

ನನ್ನ ಹೆತ್ತವರು ಸರಿ ಇಲ್ಲ, ನನಗೆ ಆತ್ಮಹತ್ಯೆಗೆ ಅನುಮತಿ ನೀಡಿ: ಬಿಹಾರದ ಬಾಲಕನಿಂದ ರಾಷ್ಟ್ರಪತಿಗೆ ಪತ್ರ

001ಸಂದೇಶ ಇ-ಮ್ಯಾಗಝಿನ್: ತನ್ನ ಹೆತ್ತವರು ಪ್ರತಿದಿನ ಒಬ್ಬರಿಗೊಬ್ಬರು ಜಗಳವಾಡುತ್ತಿದ್ದಾರೆ. ಇದರಿಂದಾಗಿ ನನಗೆ ಜೀವನ ಬೇಸರವಾಗಿದೆ. ತನ್ನ ಹೆತ್ತವರ ಜಗಳದಿಂದ ನಾನು ತುಂಬಾ ನೊಂದಿದ್ದೇನೆ. ಇದು ನನ್ನ ಶಿಕ್ಷಣದ ಮೇಲೂ ಪ್ರಭಾವ ಬೀರಿದೆ. ನನಗೆ ಮೊದಲಿನ ಹಾಗೆ ಅಂಕಗಳು ಬರುತ್ತಿಲ್ಲ. ಇನ್ನು ನಾನು ಬದುಕಲು ಇಚ್ಛಿಸಲ್ಲ, ಆದುದರಿಂದ ನನಗೆ ಆತ್ಮಹತ್ಯೆ ಮಾಡಿ ಈ ಜೀವನವನ್ನು ಕೊನೆಗೊಳಿಸಲು ಅನುಮತಿ ನೀಡಿ ಎಂದು ಬಿಹಾರದ 15 ವರ್ಷದ ಬಾಲಕನೊಬ್ಬ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ …

Read More »

ಮದರಸಾ ಪಕ್ಕ ಗೋಮಾಂಸ ಪತ್ತೆ: ದುಷ್ಕರ್ಮಿಗಳಿಂದ ಮದರಸಾಗೆ ಬೆಂಕಿ

000ಸಂದೇಶ ಇ-ಮ್ಯಾಗಝಿನ್: ಮದರಸಾದ ಪ್ರದೇಶದಲ್ಲಿ ಗೋಮಾಂಸದ ಅವಶೇಷ ದೊರೆತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಫತೇಪುರ ಜಿಲ್ಲೆಯ ಬೆಹ್ತಾ ಗ್ರಾಮದಲ್ಲಿ ದುಷ್ಕರ್ಮಿಗಳ ಗುಂಪೊಂದು ಮಂಗಳವಾರ ಮದರಸಕ್ಕೆ ಬೆಂಕಿ ಹಚ್ಚಿದೆ ಎಂದು ವರದಿಯಾಗಿದೆ. ಸುಮಾರು 50 ಜನರ ಗುಂಪು ಮದರಸಾದ ಆವರಣ ಗೋಡೆಯನ್ನು ನೆಲಸಮ ಮಾಡಿ ನಂತರ ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಬಿಂಡ್ಕಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಉಮಾ ಶಂಕರ್ ಯಾದವ್ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ …

Read More »

ಮಾಬ್ ಲಿಂಚಿಂಗ್ ಸಂತ್ರಸ್ತರಿಗೆ ಸಹಾಯ ಮಾಡಲು ಹೆಲ್ಪ್ ಲೈನ್ ಪ್ರಾರಂಭ

002ಸಂದೇಶ ಇ-ಮ್ಯಾಗಝಿನ್: ದೇಶದಲ್ಲಿ ಹೆಚ್ಚುತ್ತಿರುವ ದ್ವೇಷ ಅಪರಾಧ ಮತ್ತು ಗುಂಪು ಹತ್ಯೆ(ಮಾಬ್ ಲಿಂಚಿಂಗ್) ಪ್ರಕರಣಗಳ ಹಿನ್ನೆಲೆಯಲ್ಲಿ ಇದೀಗ ಅಂತಹ ಕೃತ್ಯಗಳ ಸಂತ್ರಸ್ತರನ್ನು ಸಹಾಯ ಮಾಡಲು ಇದೀಗ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ. ದೇಶದ 100 ನಗರಗಳಲ್ಲಿ ದ್ವೇಷ ಅಪರಾಧ ಕೃತ್ಯಕ್ಕೆ ಬಲಿಯಾದವರಿಗೆ ಸಹಾಯ ಮಾಡಲು ಈ ಸಂಖ್ಯೆ ಲಭ್ಯವಿರುತ್ತದೆ ಎನ್ನಲಾಗಿದೆ. ಟೋಲ್-ಫ್ರೀ ಸಂಖ್ಯೆ 1800-3133-600-00 ಯನ್ನು ಹೆಲ್ಪ್ ಲೈನ್ ಎಗೈನ್ಸ್ಟ್ ಹೇಟ್ ಎಂದು ಹೆಸರಿಸಲಾಗಿದೆ. ರಾಜಧಾನಿ ದೆಹಲಿಯಲ್ಲಿ ನಡೆದ ಸಹಾಯವಾಣಿಯ ಬಿಡುಗಡೆ ಕಾರ್ಯಕ್ರಮದಲ್ಲಿ …

Read More »

ರಾಂಚಿ: ಇಸ್ಲಾಮ್ ಧರ್ಮವನ್ನು ನಿಂದಿಸಿದ ಯುವತಿಗೆ ಕುರ್‌ಆನ್ ವಿತರಿಸುವ ಶಿಕ್ಷೆ

002ಸಂದೇಶ ಇ-ಮ್ಯಾಗಝಿನ್: ಫೇಸ್‌ಬುಕ್‌ನಲ್ಲಿ ಕೋಮು ದ್ವೇಷವನ್ನು ಹುಟ್ಟುಹಾಕುವ ಪೋಸ್ಟ್ ಹಂಚಿಕೊಂಡ ಆರೋಪದ ಮೇಲೆ ಬಂಧಿತಳಾಗಿದ್ದ ರಾಂಚಿಯ ಕಾಲೇಜು ವಿದ್ಯಾರ್ಥಿನಿ 19 ವರ್ಷದ ರಿಚಾ ಭಾರತಿಗೆ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿದ್ದು, ನ್ಯಾಯಾಧೀಶ ಮನೀಶ್ ಕುಮಾರ್ ಅವರು ರಿಚಾಗೆ ಖುರಾನ್‌ನ ಐದು ಪ್ರತಿಗಳನ್ನು ವಿವಿಧ ಸಂಸ್ಥೆಗಳಲ್ಲಿ ಉಡುಗೊರೆಯಾಗಿ ನೀಡಬೇಕು ಎಂದು ಜಾಮೀನಿನ ಶರತ್ತಿನಲ್ಲಿ ನಿರ್ದೇಶನ ನೀಡಿದ್ದಾರೆ. ಒಂದು ಪ್ರತಿಯನ್ನು ಸದರ್ ಅಂಜುಮಾನ್ ಇಸ್ಲಾಮಿಯಾ ಸಮಿತಿಗೆ ಉಡುಗೊರೆಯಾಗಿ ನೀಡುವಂತೆ ನಿರ್ದೇಶಿಸಿದ್ದಾರೆ. ಆದರೆ ನ್ಯಾಯಾಲಯದ …

Read More »

ಮಹಾರಾಷ್ಟ್ರ: ಜೈ ಶ್ರೀ ರಾಮ್ ಹೇಳಲು ಒತ್ತಾಯಿಸಿ ಮುಸ್ಲಿಮ್ ವ್ಯಕ್ತಿಗೆ ಹಲ್ಲೆ

000ಸಂದೇಶ ಇ-ಮ್ಯಾಗಝಿನ್: ಜುಲೈ 15 ರಂದು ಮಹಾರಾಷ್ಟ್ರದ ಜಲ್ ಗಾಂವ್ ಜಿಲ್ಲೆಯಲ್ಲಿ ಪ್ರಸಿದ್ಧ ಫುಲೆ ಮಾರುಕಟ್ಟೆಯಲ್ಲಿ ಮತ್ತೊಂದು ಮಾಬ್ ಲಿಂಚಿಂಗ್ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಜಲ್ ಗಾಂವ್‌ನ ದೇಶ್ಮುಖ್‌ವಾಡಿ ನಿವಾಸಿ 30 ವರ್ಷದ ಆಸಿಫ್ ಮಜೀದ್ ಖುರೇಷಿ ಅವರು ಮಾರುಕಟ್ಟೆಯಿಂದ ತರಕಾರಿಗಳನ್ನು ಖರೀದಿಸುತ್ತಿದ್ದಾಗ ಗುಂಪೊಂದು ಅವರನ್ನು ಥಳಿಸಿದೆ ಎಂದು ಹೇಳಲಾಗಿದೆ. ಸೋಮವಾರ ರಾತ್ರಿ 8: 45 ಕ್ಕೆ ಈ ಘಟನೆ ಸಂಭವಿಸಿದ್ದು, ಸಾಮಾನ್ಯ ಮಾತುಕತೆ ಕೆಲವು ಸ್ಥಳೀಯ ಯುವಕರೊಂದಿಗೆ …

Read More »

20 ರೂ ಕದ್ದ ಆರೋಪದಲ್ಲಿ ನಿರಪರಾಧಿಯಾಗಲು 41 ವರ್ಷ ಕಾನೂನು ಹೋರಾಟ ಮಾಡಬೇಕಾಯಿತು

022ಸಂದೇಶ ಇ-ಮ್ಯಾಗಝಿನ್: 1978 ರಲ್ಲಿ 20 ರೂ. ಕದ್ದ ಆರೋಪ ಎದುರಿಸುತ್ತಿದ್ದ ವ್ಯಕ್ತಿ ಕೊನೆಗೂ 41 ವರ್ಷಗಳ ನಂತರ ನಿರಪರಾಧಿ ಎಂದು ಸಾಬೀತಾಗಿದೆ. ಸುದೀರ್ಘ ಕಾನೂನು ಹೊರಾಟದ ಬಳಿಕ ಗ್ವಾಲಿಯರ್‌ನ ಇಸ್ಮಾಯಿಲ್ ಖಾನ್ ನಿರಪರಾಧಿ ಎಂದು ಗ್ವಾಲಿಯರ್‌ನ ಲೋಕ ಅದಾಲತ್ ನ್ಯಾಯಾಲಯವು ಶನಿವಾರ ತೀರ್ಪು ನೀಡಿದೆ. ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ (ಜೆಎಂಎಫ್‌ಸಿ) ಶ್ರೀ ಅನಿಲ್ ಕುಮಾರ್ ನಾಮ್‌ದೇವ್ ಅವರು ಇಸ್ಮಾಯಿಲ್ ಖಾನ್ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದರು. ಈ …

Read More »