Tuesday , April 7 2020
Breaking News
Home / ಮಹಿಳೆ

ಮಹಿಳೆ

ಅಂಗವಿಕಲ ಅಮೀರ್ ಬಾಳನ್ನು ಬೆಳಗಿಸಿ ತ್ಯಾಗಮಯಿಯಾದ ಸಹ್ಲಾ

ಸಂದೇಶ ಇ-ಮ್ಯಾಗಝಿನ್: ಮಲಪ್ಪುರಂ ಜಿಲ್ಲೆಯ ಕಲಿಕಾವುವಿನ ಕಲ್ಲಮೂಲಾ ಅಮೀರ್ ಅವರು ಏಳು ವರ್ಷಗಳ ಹಿಂದೆ ಅಡಿಕೆ ಮರದಿಂದ ಬಿದ್ದು ಸೊಂಟದ ಕೆಳಗೆ ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ. ಮೂರು ವರ್ಷ ಕೇವಲ ಜೀವಂತ ಶವದ ಹಾಗೆ ಅಮೀರ್ ಹತಾಶವಾಗಿ ಜೀವನಕ್ಕಾಗಿ ಹೆಣಗಾಡುತ್ತಿರುವ ಹಾಸಿಗೆಯಲ್ಲಿಯೇ ಮಲಗಿದ್ದರು. ಆದಾಗ್ಯೂ ಯಾರೊಬ್ಬರೂ ನಿರೀಕ್ಷಿಸದ ರೀತಿಯಲ್ಲಿ ಕೊನೆಗೂ ಅಮೀರ್ ತಕ್ಕ ಮಟ್ಟಿಗೆ ಇದೀಗ ಚೇತರಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಹುಟ್ಟು ಅಂಗವಿಕಲರಾಗಿರುವ ರಝಾಕ್ ಹಾಗೂ ಅಮೀರ್ ‘ಥನಾಲ್’ ವಾಟ್ಸಾಪ್ ಗುಂಪಿನ …

Read More »

ಲವ್ ಜಿಹಾದ್ ಪ್ರಕರಣದಲ್ಲಿ ಸುದ್ದಿಯಾಗಿದ್ದ ಹಾದಿಯಾ ಈಗ ಹೀಗಿದ್ದಾರೆ ನೋಡಿ

ಸಂದೇಶ ಇ-ಮ್ಯಾಗಝಿನ್: ವಿವಾದಾತ್ಮಕ ‘ಲವ್-ಜಿಹಾದ್’ ಪ್ರಕರಣದಿಂದ ರಾಷ್ಟ್ರವ್ಯಾಪಿ ಗಮನ ಸೆಳೆದಿದ್ದ ಕೇರಳದ ಮಹಿಳೆ ಅಖಿಲಾ ಅಶೋಕನ್ ಅಲಿಯಾಸ್ ಹಾದಿಯಾ ಅವರು ಇದೀಗ ಹೋಮಿಯೋಪಥಿಕ್ ವೈದ್ಯಕೀಯ ಪದವಿ ಪೂರ್ಣ ಗೊಳಿಸಿ ವೈದ್ಯೆಯಾಗಿದ್ದು, ನಿನ್ನೆ ಮಲಪ್ಪುರಂನ ಕೋಟ್ಟಕ್ಕಲ್ ರಸ್ತೆಯಲ್ಲಿ ತಮ್ಮದೇ ಹೆಸರಿನಲ್ಲಿ ಹೋಮಿಯೋಪಥಿಕ್ ಕ್ಲಿನಿಕ್ ತೆರೆದಿದ್ದಾರೆ. ಶುಕ್ರವಾರ ಒತುಕುಂಗಲ್ ಪಂಚಾಯತ್ ಅಧ್ಯಕ್ಷರು ಹಾದಿಯಾ ಅವರ ನೂತನ ‘ಹಾದಿಯಾ ಹೋಮಿಯೋಪಥಿಕ್ ಕ್ಲಿನಿಕ್’ ನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಸಮಾರಂಭದಲ್ಲಿ ಹಲವು ಗಣ್ಯ ವ್ಯಕ್ತಿಗಳು …

Read More »

ಅಲ್ಲಾಹನಿಗಾಗಿ ಬಾಲಿವುಡ್ ತೊರೆಯುವುದಾಗಿ ಘೋಷಿಸಿದ ನಟಿ

ಸಂದೇಶ ಇ-ಮ್ಯಾಗಝಿನ್: ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಝೈರಾ ವಾಸಿಮ್ ಭಾನುವಾರ ತಮ್ಮ ಫೇಸ್ಬುಕ್ ಖಾತೆಯ ಮೂಲಕ ಬಾಲಿವುಡ್ ನಟನಾ ಕ್ಷೇತ್ರದಿಂದ ತನ್ನ ನಿರ್ಗಮನವನ್ನು ಘೋಷಿಸಿದ್ದರೆ. ಇದು ನನ್ನ ಧಾರ್ಮಿಕ ನಂಬಿಕೆ ಮತ್ತು ಧರ್ಮಕ್ಕೆ ಅಡ್ಡಿಯುಂಟುಮಾಡಿರುವ ಕಾರಣ ಈ ಕೆಲಸದಲ್ಲಿ ನಾನು ಸಂತೋಷವಾಗಿಲ್ಲ ಎಂದು ‘ದಂಗಲ್’ ಹಾಗೂ ‘ಸೀಕ್ರೇಟ್ ಸೂಪರ್ ಸ್ಟಾರ್’ ಖ್ಯಾತಿಯ ನಟಿ ಝೈರಾ ವಾಸಿಮ್ ಹೇಳಿದ್ದಾರೆ. ತಮ್ಮ ಫೆಸ್ಬುಕ್ ಪುಟದಲ್ಲಿ ವಿವರವಾದ ಪೋಸ್ಟ್ ಒಂದರ ಮೂಲಕ ಬಾಲಿವುಡ್ …

Read More »

ಹೆಣ್ಣು ಮಕ್ಕಳು ನಿಷ್ಪ್ರಯೋಜಕರು ಎನ್ನುವವರಿಗೆ ನಕೀಬ್‌ರ ಈ ಇಬ್ಬರು ಹೆಣ್ಣು ಮಕ್ಕಳು ಸ್ಪಷ್ಟ ಉತ್ತರವಾಗಿದ್ದಾರೆ

ಸಂದೇಶ ಇ-ಮ್ಯಾಗಝಿನ್: ನಮ್ಮ ಸಮಾಜದಲ್ಲಿ ಸಾಮಾನ್ಯವಾಗಿ ಹೆಣ್ಣುಮಕ್ಕಳು “ನಿಷ್ಪ್ರಯೋಜಕರು” ಎಂದು ಭಾವಿಸಲಾಗುತ್ತದೆ. ಆದರೆ ಅಲ್ ನಕೀಬ್‌ ಅವರ ಈ ಇಬ್ಬರು ಹೆಣ್ಮಮಕ್ಕಳು ಅಮೂಲ್ಯರು. ಈ ಜೋಡಿಯು ತಮ್ಮ ಯಕೃತ್ತಿನ ಭಾಗವನ್ನು ತಮ್ಮ ಅನಾರೋಗ್ಯ ಪೀಡಿತ ತಂದೆಗೆ ದಾನ ಮಾಡುವ ಮೂಲಕ ಜಗತ್ತಿನ ಗಮನ ಸೆಳೆದಿದೆ. ಯೆಮೆನ್ ಪ್ರಜೆಯಾದ ನಕೀಬ್ ಕೊನೆಯ ಹಂತದ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದರು. ಮತ್ತು ಅವರ ಉಳಿವಿಗಾಗಿ ಯಕೃತ್ತಿನ(ಲಿವರ್) ಕಸಿ ನಿರ್ಣಾಯಕವಾಗಿತ್ತು. ಈ ಸಮಯದಲ್ಲಿ ನಕೀಬ್ ಅವರ …

Read More »

ತಂದೆ ಇಲ್ಲದೆ ಬೆಳೆದ ಇಲ್ಮಾ ಅಫ್ರೋಝ ಅವರ ಯಶಸ್ವಿ IPS ಪಯಣ

ಸಂದೇಶ ಇ-ಮ್ಯಾಗಝಿನ್: ನಾನು ಬಡ ಕುಟುಂಬದಲ್ಲಿ ಹುಟ್ಟಿದ್ದು, ನನ್ನ ಬಡತನವೇ ನನ್ನ ಸಾಧನೆಗೆ ಅಡ್ಡಿ ಇಲ್ಲದಿದ್ದಲ್ಲಿ ಸಾಧನೆ ಮಾಡುತ್ತಿದ್ದೆ ಎಂದು ಜಂಭ ಕೊಚ್ಚಿಕೊಳ್ಳುವವರಿಗೇನೂ ನಮ್ಮಲ್ಲಿ ಕಡಿಮೆ ಇಲ್ಲ. ಆದರೆ ನಿಜವಾಗಿಯೂ ಸಾಧಿಸಿದವರು ಕೆಲವೇ ಕೆಲವರು. ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಕುಂಡಾರ್ಕಿ ಎಂಬ ಹಳ್ಳಿಯ ಯುವತಿ ಇಲ್ಮಾ ಅಫ್ರೋಝ ಅವರು ಇದೀಗ ಐಪಿಎಸ್ ಆಫೀಸರ್ ಆಗಿದ್ದಾರೆ. ಆದರೆ ಅವರು ಬಾಯಲ್ಲಿ ಬಂಗಾರದ ಚಮಚ ಇಟ್ಟು ಹುಟ್ಟಿ ಈ ಸಾಧನೆ ಮಾಡಿಲ್ಲ …

Read More »

ತುಂಡು ಬ್ರೆಡ್ ಕದ್ದಿದ್ದಕ್ಕಾಗಿ ಹತ್ಯೆಗೀಡಾದ ಆದಿವಾಸಿ ಯುವಕ ಮಧು ಸಹೋದರಿಯ ಮಹತ್ವದ ಸಾಧನೆ ನೋಡಿ

ಸಂದೇಶ ಇ-ಮ್ಯಾಗಝಿನ್: 2018 ರ ಫೆಬ್ರವರಿ 18 ರಂದು ಹಸಿವಿನಿಂದ ಆಹಾರ ಕದ್ದು ಕ್ರೂರಿಗಳಿಂದ ಹತ್ಯೆ ಗೀಡಾದ ತ್ರಿಶೂರ್ ಅತ್ತಪಾಡಿ ನಿವಾಸಿ ಆದಿವಾಸಿ ಯುವಕ ಮಧು ಸಹೋದರಿ ಚಂದ್ರಿಕಾ ಮಹತ್ವದ ಸಾಧನೆ ಮಾಡಿದ್ದಾರೆ. ಮಧು ಸಹೋದರಿ ಚಂದ್ರಿಕಾ ಇದೀಗ ಕೇರಳ ಪೊಲೀಸ್‌ ಇಲಾಖೆಗೆ ಸೇರಿದ್ದಾರೆ. ಬುಧವಾರ ನಡೆದ ಸರಳ ಸಮಾರಂಭದಲ್ಲಿ ಚಂದ್ರಿಕಾ ಸೇರಿದಂತೆ ಸುಮಾರು 74 ಆದಿವಾಸಿ ಯುವಕ ಯುವತಿಯರನ್ನು ಪೊಲೀಸ್ ಇಲಾಖೆಗೆ ಸೇರಿಸಲಾಯಿತು. ಮಲ್ಲಿಯವರಿಗೆ ಮಧು ಹಾಗೂ ಚಂದ್ರಿಕಾ …

Read More »

ಹಿಜಾಬ್ ಹಲ ಅತೀಕ್ ಮತ್ತು ಆಕೆಯ ಕುಟುಂಬದ ಜೀವ ಉಳಿಸಿದ ಘಟನೆ

ಸಂದೇಶ ಇ-ಮ್ಯಾಗಝಿನ್: ಸ್ಫೋಟ ಪ್ರಕರಣದ ಆರೋಪಿಗಳು ಹಿಜಾಬ್ ಧರಿಸಿದ್ದ ಕಾರಣ ಶ್ರೀಲಂಕಾ ಮುಸ್ಲಿಮ್ ಮಹಿಳೆಯರು ಧರಿಸುವ ಹಿಜಾಬ್ ಬ್ಯಾನ್ ಮಾಡಿತು. ಇದೀಗ ಭಾರತದಲ್ಲಿ ಹಿಜಾಬ್ ನಿಷೇಧ ಮಾಡಬೇಕು ಎಂಬ ಕೂಗು ಬಲ ಪಡೆಯುತ್ತಿದೆ. ಮುಸ್ಲಿಮ್ ಮಹಿಳೆಯರಿಗೆ ಇದು ಕುರ್‌ಆನ್‌ನಲ್ಲಿ ಉಲ್ಲೆಖಿಸಲಾದ ಧಾರ್ಮಿಕ ನಿಬಂಧನೆಯಾಗಿದೆ. ಆದರೂ ಇದರ ಬಗ್ಗೆ ಪರ ವಿರೋಧ ಚರ್ಚೆಗಲೂ ಯಾವತ್ತೂ ಇದ್ದದ್ದೇ. ಇದೇ ಹಿಜಾಬ್‌ಗೆ ಸಂಬಂಧಿಸಿದ ಸುಮಾರು 60 ವರ್ಷ ಹಿಂದಿನ ಈ ಒಂದು ನೈಜ ಘಟನೆ …

Read More »

ತನಗೆ ದೊರೆಯಲಿರುವ 50ಲಕ್ಷ ಹಣವನ್ನು ಈ ಮಹತ್ವದ ಕಾರ್ಯಕ್ಕೆ ವ್ಯಯಿಸುವುದಾಗಿ ಘೋಷಿಸಿದ ಬಿಲ್ಕೀಸ್ ಬಾನು

ಸಂದೇಶ ಇ-ಮ್ಯಾಗಝಿನ್: 2002ರ ಗೋಧ್ರಾ ಗಲಭೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಬಿಲ್ಕೀಸ್ ಬಾನು ಅವರಿಗೆ ಪರಿಹಾರದ ಮೊತ್ತವಾಗಿ ಗುಜರಾತ್ ಸರಕಾರವು 50 ಲಕ್ಷ ಹಣ, ಮನೆ ಹಾಗೂ ಸರಕಾರಿ ಉದ್ಯೋಗ ನೀಡಬೇಕು ಎಂದು ಸುಪ್ರಿಕೋರ್ಟ್ ಸೋಮವಾರ ಆದೇಶಿಸಿತ್ತು. ಇದೀಗ ತನಗೆ ದೊರೆಯಲಿರುವ 50 ಲಕ್ಷ ಹಣದಲ್ಲಿ ಅತ್ಯಾಚಾರದ ಸಂತ್ರಸ್ತರು ಹಾಗೂ ಕೋಮು ಗಲಭೆಗಳ ಸಂತ್ರಸ್ತರಿಗೆ ಸಹಾಯ ಮಾಡುವುದಾಗಿ ಘೋಷಿಸಿದ್ದಾರೆ. ಬುಧವಾರ ನವದೆಹಲಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಬಿಲ್ಕೀಸ್ ಬಾನು, ಸುಪ್ರಿಂ ತೀರ್ಪಿನ ಬಗ್ಗೆ …

Read More »

ಗುಜರಾತ್ ಗಲಭೆಯ ಅತ್ಯಾಚಾರ ಸಂತ್ರಸ್ತೆ ಬಿಲ್ಕೀಸ್ ಬಾನು‌ಗೆ 50ಲಕ್ಷ ಪರಿಹಾರ, ಮನೆ, ಸರಕಾರಿ ಉದ್ಯೋಗ: ಸುಪ್ರಿಂ ಆದೇಶ

ಸಂದೇಶ ಇ-ಮ್ಯಾಗಝಿನ್: 2002 ರ ಗುಜರಾತ್ ಗೋಧ್ರಾ ಹತ್ಯಾಕಾಂಡದ ಸಮಯದಲ್ಲಿ ಭೀಕರ ಸಾಮಾಹಿಕ ಅತ್ಯಚಾರಕ್ಕೊಳಗಾಗಿದ್ದ ಬಿಲ್ಕೀಸ್ ಬಾನುಗೆ ಎರಡು ವಾರದ ಒಳಗೆ 50 ಲಕ್ಷ ಪರಿಹಾರ ಹಾಗೂ ಅದರ ಜೊತೆಗೆ ಸರಕಾರಿ ಉದ್ಯೋಗ ಮತ್ತು ಮನೆ ನೀಡುವಂತೆ ಗುಜರಾತ್ ಸರಕಾರಕ್ಕೆ ಆದೇಶ ನೀಡಿದೆ. 2002 ರ ಗುಜರಾತ್ ಹತ್ಯಾಕಾಂಡದ ಸಮಯದಲ್ಲಿ ಅಹಮದಾಬಾದ್‌ನ ರಾಧಿಕ್‌ಪುರ್ ನಿವಾಸಿಯಾಗಿರುವ ಬಿಲ್ಕೀಸ್ ಬಾನು ಅವರನ್ನು ಸಾಮೂಹಿಕ ಅತ್ಯಾಚಾರ ಮಾಡಿದ್ದ ದುಷ್ಕರ್ಮಿಗಳು ಬಾನು ಅವರ ಕುಟುಂಬ ಏಳು …

Read More »

ದಿನಪ್ರತಿ ಕುಡಿದು ಬಂದು ಹೊಡೆಯುತ್ತಿದ್ದ ಪತಿ; ಖೈರುನ್ನಿಸಾ ಎಸಗಿದಳು ಈ ಕೃತ್ಯ: ಶಾಕಿಂಗ್ ಸುದ್ದಿ

ಸಂದೇಶ ಇ-ಮ್ಯಾಗಝಿನ್: ದಿನಂಪ್ರತಿ ಕುಡಿದು ಬಂದು ಹಣ ನೀಡುವಂತೆ ಪೀಡಿಸುತ್ತಿದ್ದ ಕೆಟ್ಟ ಪತಿಯೊಬ್ಬನನ್ನು ಸಂತ್ರಸ್ತ ಅಸಹಾಯಕ ಮಹಿಳೆಯೊಬ್ಬಳು ಕೊಂದು ಪೊಲೀಸರಿಗೆ ಶರಣಾದ ಘಟನೆ ಹೈದರಾಬಾದಿನಿಂದ ವರದಿಯಾಗಿದೆ. ಹೈದರಾಬಾದಿನ ಶಫೀಯುದ್ಧೀನ್ ಹಾಗೂ ಖೈರುನ್ನಿಸಾ ದಂಪತಿಗಳಾಗಿದ್ದು, ನಗರದ ಹೊರವಲಯದ ಜಗದ್‌ಗಿರಿಗುಟ್ಟ ಎಂಬಲ್ಲಿ ವಾಸಿಸುತ್ತಿದ್ದರು. ಪತಿ ಶಫೀಯುದ್ಧೀನ್ ಮದ್ಯ ವ್ಯಸನಿಯಾಗಿದ್ದು, ಪತ್ನಿ ಖೈರುನ್ನಿಸಾಳಿಗೆ ದಿನಂಪ್ರತಿ ರಾತ್ರಿ ಕುಡಿದು ಬಂದು ಹಿಗ್ಗಾ ಮುಗ್ಗಾ ಥಳಿಸುತ್ತಿದ್ದ ಎನ್ನಲಾಗಿದೆ. ಸುಮಾರು ವರ್ಷ ಗಳಿಂದ ಶಫೀಯುದ್ಧೀನ್ ತನ್ನ ಪತ್ನಿಗೆ ಥಳಿಸುತ್ತಾ …

Read More »