Tuesday , April 7 2020
Breaking News
Home / ಗಲ್ಫ್ ಸುದ್ದಿ

ಗಲ್ಫ್ ಸುದ್ದಿ

ಹಜ್ 2019: ಕಾಬಾದ ಇಮಾಮರಿಂದ ಜಾಗತಿಕ ಮುಸ್ಲಿಮರಿಗೆ ಒಗ್ಗಟ್ಟಿನ ಸಂದೇಶ

ಸಂದೇಶ ಇ-ಮ್ಯಾಗಝಿನ್: ಕಾಬಾದ ಇಮಾಮರು ಪ್ರವಾದಿ ಮೊಹಮ್ಮದ್ (ಸ) ರವರು ವಿದಾಯ ಭಾಷಣದಲ್ಲಿ ಉಲ್ಲೇಖಿಸಿದ್ದ ಅದೇ ಮಾತನ್ನು ಪುನರುಚ್ಚರಿಸಿದರು. ಭೂಮಿಯ ನಿವಾಸಿಗಳ ಮೇಲೆ ಕರುಣೆ ತೋರಿಸಿ, ಆಕಾಶದಲ್ಲಿರುವವನು(ಅಲ್ಲಾಹು) ನಿಮ್ಮ ಮೆಲೆ ಕರುಣೆ ತೋರಿಸುವನು ಎಂದು 2019ರ ಹಜ್ ನಲ್ಲಿ ಹೇಳಿದ್ದಾರೆ. ತಮ್ಮ ಭಾಷಣದುದ್ದಕ್ಕೂ ಪ್ರಸ್ತುತ ರಾಜಕೀಯ ಸನ್ನಿವೇಶಗಳ ಹಿನ್ನೆಲೆಯಲ್ಲಿ ಮುಸ್ಲಿಮರು ನಿರಾಶೆಗೊಳ್ಳದಂತೆ ಮುಸ್ಲಿಂ ಸಮುದಾಯವನ್ನು ಅವರು ಪ್ರೋತ್ಸಾಹಿಸುತ್ತಿದ್ದರು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಅಲ್ಲಾಹ್ ಸುಬ್‌ಹಾನಹುವ ತ‌ಆಲ ಎಲ್ಲ ಮುಸ್ಲಿಮರನ್ನು ಒಂದೇ …

Read More »

ಸೌದಿಗೆ ತೆರಳಿ ಅತ್ಯಾಚಾರ ಆರೊಪಿಯನ್ನು ಬಂಧಿಸಿದ ಕೇರಳದ ಮಹಿಳಾ ಸೂಪರ್ ಕಾಪ್

ಸಂದೇಶ ಇ-ಮ್ಯಾಗಝಿನ್: ಭಾರತದಲ್ಲಿ ಅಪರಾಧ ಮಾಡಿ ವಿದೇಶಕ್ಕೆ ಪರಾರಿಯಾದವರನ್ನು ಪುನಃ ಕರೆತಂದು ಇಲ್ಲಿನ ಕಾನೂನಿನ ಮುಂದೆ ಹಾಜರಿ ಪಡಿಸಿದ್ದು ಬಹಳ ವಿರಳ. ವರದಿಯೊಂದರ ಪ್ರಕಾರ ಹೀಗೆ ವಿದೇಶಕ್ಕೆ ಪರಾರಿಯಾಗುವ ಮೂವರಲ್ಲಿ ಒಬ್ಬರನ್ನು ಮಾತ್ರ ಯಶ್ವಸ್ವಿಯಾಗಿ ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ. ಕೊಲ್ಲಿ ದೇಶಗಳಿಗೆ ಪರಾರಿಯಾಗಿರುವವರನ್ನು ಬಹಳ ಸುಲಭವಾಗಿ ಕರೆತರಬಹುದಾದರೂ, ಕೆಲವು ಸಲ ನಮ್ಮಲ್ಲಿನ ರಾಜಕಾರಣದ ಇಚ್ಛಾಶಕ್ತಿಯ ಕೊರತೆಯ ಕಾರಣದಿಂದಾಗಿ ಇದು ಸಾಧ್ಯವಾಗುವುದಿಲ್ಲ. ಆದರೆ ಕೇರಳದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಅತ್ಯಾಚಾರ ಮಾಡಿ ಸೌದಿಯಲ್ಲಿ …

Read More »

ಶಾರ್ಜಾ: ಕಾಣೆಯಾದ ಭಾರತೀಯ ಬಾಲಕ ಅಜ್ಮಾನ್‌ನಲ್ಲಿ ಪತ್ತೆ

ಸಂದೇಶ ಇ-ಮ್ಯಾಗಝಿನ್: ಜುಲೈ 4 ರಿಂದ ನಾಪತ್ತೆಯಾಗಿದ್ದ ಭಾರತೀಯ ಬಾಲಕ ಮೊಹಮ್ಮದ್ ಪರ್ವೆಜ್ ಅಜ್ಮಾನ್‌ನಲ್ಲಿ ಪತ್ತೆಯಾಗಿದ್ದಾನೆ. ತಡರಾತ್ರಿ ಯುಟ್ಯೂಬ್ ವೀಕ್ಷಿಸಿದ್ದಕ್ಕಾಗಿ ತಾಯಿ ಗದರಿಸಿದ್ದರಿಂದ 15 ವರ್ಷದ ಬಾಲಕ ಶಾರ್ಜಾದ ಮುವೀಲಾ ಪ್ರದೇಶದಲ್ಲಿರುವ ತನ್ನ ಮನೆಯಿಂದ ನಾಪತ್ತೆಯಾಗಿದ್ದ. ನಂತರ ಬಾಲಕನ ತಂದೆ ಮೊಹಮ್ಮದ್ ಅಫ್ತಾಬ್ ಆಲಂ ತನ್ನ ಮಗನನ್ನು ಹುಡುಕಿಕೊಟ್ಟವರಿಗೆ 5,000 ದಿರ್ಹಾಮ್ ಬಹುಮಾನವನ್ನು ನೀಡುವುದಾಗಿ ಗುರುವಾರ ಘೋಷಿಸಿದ್ದಾರೆ. ಶಾರ್ಜಾ ಪೊಲೀಸ್ ವಕ್ತಾರ ಕ್ಯಾಪ್ಟನ್ ಅಹ್ಮದ್ ಅಲ್ ಹಮ್ಮಾದಿಯವರು ಈ ಬಗ್ಗೆ …

Read More »

ಕ್ರೈಸ್ಟ್ ಚರ್ಚ್ ದಾಳಿ ಸಂತ್ರಸ್ತರ 200 ಕುಟುಂಬಸ್ಥರಿಗೆ ದೊರೆ ಸಲ್ಮಾನ್ ರಿಂದ ಹಜ್ ಕೊಡುಗೆ

ಸಂದೇಶ ಇ-ಮ್ಯಾಗಝಿನ್: ಕ್ರೈಸ್ಟ್‌ಚರ್ಚ್ ಭಯೋತ್ಪಾದಕ ದಾಳಿಯ ಸಂತ್ರಸ್ತರ 200 ಕುಟುಂಬ ಸದಸ್ಯರಿಗೆ ಈ ಬಾರಿಯ ಹಜ್ ಆತಿಥ್ಯ ವಹಿಸುವಂತೆ ಸೌದಿ ಅರೇಬಿಯಾದ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಅಲ್ ಸೌದ್ ಆದೇಶ ನೀಡಿದ್ದಾರೆ. ಸೌದಿ ಇಸ್ಲಾಮಿಕ್ ವ್ಯವಹಾರಗಳ ಸಚಿವ ಶೇಖ್ ಅಬ್ದುಲ್ ಲತೀಫ್ ಬಿನ್ ಅಬುಲ್ ಅಝೀಝ್ ಅಲ್-ಅ ಶೇಖ್ ಮಂಗಳವಾರ ಈ ಘೋಷಣೆ ಮಾಡಿದ್ದಾರೆ. ಸೌದಿ ಅರೇಬಿಯಾ ಕ್ರೈಸ್ಟ್ ಚರ್ಚ್ ದಾಳಿಯ ಸಂತ್ರಸ್ತರ ಕುಟುಂಬಗಳಿಗೆ ಹಜ್ ಆತಿಥ್ಯ …

Read More »

ಹಜ್: ಶಾಂತಿ ಭಂಗ ಮಾಡುವವರ ವಿರುದ್ಧ ಕ್ರಮ; ಸಚಿವ ಸಂಪುಟದ ತೀರ್ಮಾನ

ಸಂದೇಶ ಇ-ಮ್ಯಾಗಝಿನ್: ಹಜ್ ಅನ್ನು ರಾಜಕೀಯಗೊಳಿಸುವ ಯಾವುದೇ ಕೃತ್ಯವು ಸ್ವೀಕಾರಾರ್ಹವಲ್ಲ ಎಂದು ಮಂಗಳವಾರ ಜಿದ್ದಾದಲ್ಲಿ ನಡೆದ ಸೌದಿ ಮಂತ್ರಿ ಪರಿಷತ್ತಿನ ಸಭೆಯಲ್ಲಿ ತೀರ್ಮಾನಿಸಲಾಯಿತು. ದೊರೆ ಸಲ್ಮಾನ್ ಅವರ ಅಧ್ಯಕ್ಷತೆಯಲ್ಲಿ ಜೆದ್ದಾದ ಅಲ್-ಸಲಾಮ್ ಅರಮನೆಯಲ್ಲಿ ಕ್ಯಾಬಿನೆಟ್ ಸಚಿವರ ಸಾಪ್ತಾಹಿಕ ಅಧಿವೇಶನ ನಡೆಯಿತು. ಅಧಿವೇಶನದ ನಂತರ ಸೌದಿ ಪತ್ರಿಕಾ ಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ, ಮಾಧ್ಯಮ ಸಚಿವ ತುರ್ಕಿ ಅಲ್-ಶಬಾನಾ, ಹಜ್ ಯಾತ್ರಾರ್ಥಿಗಳು ಯಾವುದೇ ರಾಜಕೀಯ ಅಥವಾ ಪಂಥೀಯ ಘೋಷಣೆಗಳನ್ನು ಕೂಗುವಂತಹ ಅಥವಾ ಇತರ …

Read More »

ಇಸ್ರೇಲ್ ದಾಳಿಗೆ ಹುತಾತ್ಮರಾದ ಫೆಲಸ್ತೀನಿಗಳ ಕುಟುಂಬಸ್ಥರಿಗೆ ಸೌದಿ ರಾಜನಿಂದ ಅಮೋಘ ಕೊಡುಗೆ

ಸಂದೇಶ ಇ-ಮ್ಯಾಗಝಿನ್: ಇಸ್ರೇಲಿ ಆಕ್ರಮಣದಿಂದ ಹುತಾತ್ಮರಾದವರ ಫೆಲಸ್ತೀನಿ ಕುಟುಂಬದ ಸುಮಾರು 1,000 ಸದಸ್ಯರ ಹಜ್ ಗೆ ಆಥಿತ್ಯ ವಹಿಸುವುದಾಗಿ ಸೌದಿ ರಾಜ ಸಲ್ಮಾನ್ ಆದೇಶ ಹೊರಡಿಸಿದ್ದಾರೆ. ಸೌದಿ ಪ್ರೆಸ್ ಏಜೆನ್ಸಿಯ ಪ್ರಕಾರ, ಸೌದಿ ದೊರೆ ಸಲ್ಮಾನ್ ಅವರ ವಿಶೇಷ ಅತಿಥಿಗಳ ಕೋಟಾದಡಿಯಲ್ಲಿ ಫೆಲಸ್ತೀನಿಯರಿಗೆ ತೀರ್ಥಯಾತ್ರೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಫೆಲಸ್ತೀನ್ ಮತ್ತು ಫೆಲಸ್ತೀನ್ ನಾಗರಿಕರ ಬಗ್ಗೆ ಉದಾರತೆ ಮೆರೆದಿದ್ದಕ್ಕಾಗಿ ಇಸ್ಲಾಮಿಕ್ ವ್ಯವಹಾರಗಳ ಸಚಿವ ಅಬ್ದುಲ್ಲತೀಫ್ ಅಲ್-ಆಶೈಕ್ ದೊರೆ ಸಲ್ಮಾನ್ ಅವರಿಗೆ …

Read More »

ಸೌದಿ ತಲುಪಿದ ಭಾರತದ ಪ್ರಥಮ ಹಜ್ ಯಾತ್ರಿಕರ ತಂಡ

ಸಂದೇಶ ಇ-ಮ್ಯಾಗಝಿನ್: 2019 ರ ಹಜ್‌ ನಿರ್ವಹಿಸಲು ಭಾರತದ ಪ್ರಥಮ ಹಜ್ ಯಾತ್ರಿಕರ ತಂಡ ಇಂದು ಸೌದಿ ಅರೇಬಿಯಾ ತಲುಪಿತು. ಸೌದಿ ತಲುಪಿದ ಭಾರತೀಯ ಹಜ್ ಯಾತ್ರಿಕರ ತಂಡವನ್ನು ಭಾರತೀಯ ಅಧಿಕಾರಿಗಳು ಆದರದಿಂದ ಸ್ವಾಗತಿಸಿದರು. ಇದಕ್ಕೂ ಮೊದಲು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ದೆಹಲಿ ಸರ್ಕಾರದ ಸಚಿವ ಕೈಲಾಶ್ ಗೆಹ್ಲೋಟ್ ಮತ್ತು ಇಮ್ರಾನ್ ಹುಸೇನ್ ಮತ್ತು ದೆಹಲಿ ಹಜ್ ರಾಜ್ಯ ಸಮಿತಿಯ ಹೊಸದಾಗಿ ಆಯ್ಕೆಯಾದ ಅಧ್ಯಕ್ಷ …

Read More »

ಸೌದಿ: ತನ್ನ ಕಫೀಲ್ ಮಗಳನ್ನು ಮದುವೆಯಾಗಿ ಇಕ್ಕಟ್ಟಿಗೆ ಸಿಲುಕಿದ ಹೈದರಾಬಾದ್ ಯುವಕ

ಸಂದೇಶ ಇ-ಮ್ಯಾಗಝಿನ್: ತೆಲಂಗಾಣ ರಾಜ್ಯದ ನಿರ್ಮಲ್ ಜಿಲ್ಲೆಯ ಮೂಲದ ಅಜೀಮುದ್ದೀನ್ ಎಂಬ 30 ವರ್ಷದ ಯುವಕ ತನ್ನ ಕಫೀಲ್ (ಪ್ರಾಯೋಜಕ) ಮಗಳಾದ ಸೌದಿ ಹುಡುಗಿಯನ್ನು ಮದುವೆಯಾದ ಕಾರಣ ಜೈಲಲ್ಲಿ ಕೊಳೆಯಬೇಕಾಗಿ ಬಂದ ಅಪರೂಪದ ಪ್ರಕರಣ ವರದಿಯಾಗಿದೆ. ಜೆದ್ದಾದ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ (ಸಿಜಿಐ) ಅಧಿಕಾರಿಗಳು ಕಫೀಲ್ ರನ್ನು ಸಂಪರ್ಕಿಸಿ ಅಜೀಮುದ್ದೀನ್ ವಿರುದ್ಧದ ಪ್ರಕರಣವನ್ನು ಹಿಂಪಡೆಯುವಂತೆ ಕೇಳಿಕೊಂಡರು. ಆದರೆ, ಕಫೀಲ್ ಅದನ್ನು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ. ಸೌದಿ ಅರೇಬಿಯಾದಲ್ಲಿ …

Read More »

ದುಬೈ ದೊರೆಯ ಪತ್ನಿ ಹಯಾ ಹುಸೇನ್ 31 ಮಿಲಿಯನ್ ಪೌಂಡ್‌ಗಳೊಂದಿಗೆ ಪರಾರಿ

ಸಂದೇಶ ಇ-ಮ್ಯಾಗಝಿನ್: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನ ಪ್ರಧಾನ ಮಂತ್ರಿ ಹಾಗೂ ದುಬಾಯಿ ದೊರೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಆರನೇ ಪತ್ನಿ ಜಾರ್ಡನ್ ರಾಜಕುಮಾರಿ ಹಯ ಬಿಂತ್ ಅಲ್ ಹುಸೇನ್ 31 ಮಿಲಿಯನ್ ಪೌಂಡ್‌ಳೊಂದಿಗೆ ದೇಶವನ್ನು ತೊರೆದಿದ್ದಾರೆ ಎಂದು ವರದಿಯಾಗಿದೆ. ಅವರು ತಮ್ಮ ಇಬ್ಬರು ಮಕ್ಕಳಾದ ಪ್ರಿನ್ಸಸ್ ಜಲೀಲಾ ಹಾಗೂ ಪ್ರಿನ್ಸ್ ಝಾಯೆದ್ ರೊಂದಿಗೆ ದೇಶವನ್ನು ತೊರೆದು ಲಂಡನ್‌ನಲ್ಲಿ ಅಭಯ ಯಾಚಿಸಿದ್ದಾರೆ ಎಂದು …

Read More »

ಅರಬರ ನಾಡಲ್ಲಿ ಸೇವೆ ಸಲ್ಲಿಸುತ್ತಿರುವ ಕನ್ನಡ ವೈದ್ಯರನ್ನು ಒಂದುಗೂಡಿಸಿದ ಡಾಕ್ಟರ್ಸ್ ಡೇ

ಸಂದೇಶ ಇ-ಮ್ಯಾಗಝಿನ್: ಡಾಕ್ಟರ್ಸ್ ಡೇ ಪ್ರಯುಕ್ತ ಹೆಮ್ಮೆಯ ಯುಎಇ ಕನ್ನಡಿಗರು ದುಬೈ ಕುಟುಂಬ ಮತ್ತು ಹೆಮ್ಮೆಯ ಯುಎಇ ಕನ್ನಡ ಡಾಕ್ಟರ್ಸ್ ಸಂಘವು ಜೂನ್ 28ರಂದು ಶೇಕ್ ಜಾಯೆದ್ ರಸ್ತೆಯಲ್ಲಿರುವ ಕೊನ್ರಾಡ್ ಹೋಟೆಲ್ ಸಭಾಂಗಣದಲ್ಲಿ ಕನ್ನಡ ನಾಡಿನ ವೈದ್ಯರನ್ನು ಒಂದೇ ಕಡೆ ಸೇರಿಸಿ ವೈದ್ಯರ ದಿನವನ್ನು ವಿಜೃಂಭಣೆಯಿಂದ ಆಚರಿಸಿದರು. ಹೆಮ್ಮೆಯ ಕನ್ನಡಿಗರು ಕುಟುಂಬ ಸದಸ್ಯರು ಮತ್ತು ಹಿರಿಯ ವೈದ್ಯರಾದ ಡಾ.ಗುರುಮಾಧವ ರಾವ್  ಅವರು ಸೇರಿ ದೀಪ ಬೆಳಗಿಸುದರೊಂದಿಗೆ  ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, …

Read More »