Friday , April 3 2020
Breaking News
Home / ಗಲ್ಫ್ ವಿಶೇಷ

ಗಲ್ಫ್ ವಿಶೇಷ

ಸೌದಿ ಅರೇಬಿಯಾ: ಯುಎಸ್ ಮಹಿಳೆ ಈ ಕಾರಣದಿಂದಾಗಿ ತನ್ನ ಮಗಳ ಪಾಲನೆಯ ಹಕ್ಕನ್ನು ಕಳೆದುಕೊಂಡರು

ಸಂದೇಶ ಇ-ಮ್ಯಾಗಝಿನ್: ಅಮೆರಿಕನ್ ಮೂಲದ ಮಹಿಳೆಯೊಬ್ಬರು ತನ್ನ ಮಾಜಿ ಪತಿ ತನ್ನ ಬಿಕಿನಿ ಫೋಟೋಗಳನ್ನು ಉಲ್ಲೇಖಿಸಿ ಆಕೆ ಮಕ್ಕಳನ್ನು ಸಾಕಲು ಯೋಗ್ಯಳಲ್ಲ ಎಂದು ವಾದ ಮಾಡಿದ್ದರಿಂದ ಕಾನೂನು ಹೋರಾಟದಲ್ಲಿ ತನ್ನ ಮಗಳನ್ನು ಕಳೆದುಕೊಂಡಿದ್ದಾರೆ. ಬೆಥನಿ ವಿಯೆರಾಳ ಮಾಜಿ ಪತಿ ಆಕೆಯ ಬಿಕಿನಿಯ ಯೋಗ ಮಾಡುವ ಫೋಟೋ ಮತ್ತು ಕೂದಲು ತೆರೆದಿಟ್ಟ ಫೋಟೋವನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ತನ್ನ ಹಾಗೂ ಬೆಥನಿ ವಿಯೆರಾಳ ಮಗಳಾದ ಝೈನಾ( 4 ವರ್ಷ)ಳನ್ನು ಬೆಳೆಸಲು ಬೆಥನಿ ಅನರ್ಹಳು …

Read More »

ಯುಎಇ: 25 ವರ್ಷ ದುಡಿದ ಉಳಿತಾಯದ ಹಣವನ್ನು ಕೇವಲ ನಿಮಿಷದಲ್ಲಿ ಎಗರಿಸಿದ ಕಳ್ಳರು

ಸಂದೇಶ ಇ-ಮ್ಯಾಗಝಿನ್: ಅಬ್ದುಲ್ ಕಯ್ಯೂಮ್ ಅಬ್ದುಲ್ ಹಕ್ 69 ವರ್ಷ ವಯಸ್ಸಿನ ಪಾಕಿಸ್ತಾನಿ ವ್ಯಕ್ತಿ ದುಬೈನಲ್ಲಿ ಕ್ರೇನ್ ಆಪರೇಟರ್ ಆಗಿ ಕಳೆದ 25 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. 1972 ರಲ್ಲಿ ತನ್ನ ಕುಟುಂಬವನ್ನು ಪೋಷಿಸುವ ಉದ್ದೇಶದಿಂದ ದುಬೈಗೆ ಬಂದ ಇವರು, ಹಣಕ್ಕೆ ಹಣ ಕೂಡಿಸಿ ತನ್ನ ಜೀವ ಮಾನದ ಉಳಿತಾಯವನ್ನು ಕೂಡಿಟ್ಟಿದ್ದರು. ಇದೀಗ ವಂಚನೆಗೊಳಗಾಗಿ ತನ್ನ ಎಲ್ಲಾ ಉಳಿತಾಯದ ಹಣವನ್ನು ಕೇವಲ 15 ನಿಮಿಷದಲ್ಲಿ ಕಳೆದುಕೊಂಡಿದ್ದಾರೆ. ಅರಬ್ ಎಮಿರೇಟ್ಸ್ ದಿರ್ಹಮ್ …

Read More »

ಮೇ 29 ರ ಮಧ್ಯಾಹ್ನ 2.18ರಂದು ಕಾಬಾ ಪರಿಸರದಲ್ಲಿ ಯಾರಿಗೂ ನೆರಳಿರಲಿಲ್ಲ-ಕಾರಣವೇನು ನೋಡಿ

Kaaba in Mecca Saudi Arabia

ಸಂದೇಶ ಇ-ಮ್ಯಾಗಝಿನ್: ಮೇ 29 ರಂದು ಬುಧವಾರದಿನ ಮಧ್ಯಾಹ್ಮ 2.18 ನಿಮಿಷಕ್ಕೆ ಮಕ್ಕಾದ ಕಾಬಾ ಪರಿಸರದಲ್ಲಿದ್ದ ಯಾರಿಗೂ ನೆರಳಿರಲಿಲ್ಲ. ಇದಕ್ಕೆ ಕಾರಣವೇನೆಂದರೆ ಈ ಸಮಯದಲ್ಲಿ ಸೂರ್ಯ ಪವಿತ್ರ ಕಾಬಾ ಭವನದ ಮಧ್ಯದಲ್ಲಿ ಬಂದಿತ್ತು ಎನ್ನುವುದಾಗಿದೆ. ಮಕ್ಕಾದ ಕಾಬಾ ಭವನವು ಭೂಮಿಯ ಮಧ್ಯ ಭಾಗದಲ್ಲಿದ್ದು, ಭೂಮಧ್ಯ ರೇಖೆ ಇದೇ ಜಾಗದಲ್ಲಿ ಸಂಧಿಸುತ್ತದೆ. ಆ ಕಾರಣದಿಂದಾಗಿ ಈ ಜಾಗವನ್ನು ಭೂಮಿಯ ಕೇಂದ್ರ ಬಿಂದು ಎಂದು ಕರೆಯುತ್ತಾರೆ. ಈ ಕಾರಣದಿಂದಾಗಿ ಸೂರ್ಯನ ಸುತ್ತ ಭೂಮಿ …

Read More »

ಯುಎಇ: ರಮದಾನ್‌ನಲ್ಲಿ ಬ್ರಿಟನ್ ಮಹಿಳೆಯಿಂದ ಇಸ್ಲಾಮ್ ಸ್ವೀಕಾರ

ಸಂದೇಶ ಇ-ಮ್ಯಾಗಝಿನ್: ಯುಕೆ ರಾಷ್ಟ್ರೀಯಳಾದ ಮ್ಯಾಕ್ಸಿನ್ ಬ್ರಾಡಾಕ್ ಯುಎಇಯಲ್ಲಿ ತಮ್ಮ ಜೀವನದ ಒಂಬತ್ತನೇ ರಮದಾನ್ ಉಪವಾಸ ವೃತಾಚರಣೆ ಮಾಡುತ್ತಿದ್ದಾರೆ. ಇದು ಆಕೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ರಮದಾನ್ ಆಗಿದೆ. – ಪವಿತ್ರ ತಿಂಗಳು ಪ್ರಾರಂಭವಾದ ಐದು ದಿನಗಳ ನಂತರ ಅವರು ಇಸ್ಲಾಮ್ ಧರ್ಮವನ್ನು ಸ್ವೀಕಾರ ಮಾಡಿದರು. ಈಗ ಆಕೆಯ ಮುಸ್ಲಿಂ ಹೆಸರು – ಇಮಾನ್ (ನಂಬಿಕೆ ಎಂದರ್ಥ) ಎಂದಾಗಿದೆ. 49 ವರ್ಷ ವಯಸ್ಸಿನ ಬ್ರಿಟನ್ ಮಹಿಳೆ ಖಲೀಜ್ ಟೈಮ್ಸ್ ಜೊತೆ …

Read More »

ಆಕೆ ತನ್ನ ಮಕ್ಕಳ ಹೊಟ್ಟೆ ತುಂಬಿಸಲು ಮದೀನಾದ ಬೀದಿಯಲ್ಲಿ ಟೀ ಮಾರುತ್ತಾಳೆ

ಸಂದೇಶ ಇ-ಮ್ಯಾಗಝಿನ್: ಇದು ಅಸಹಾಯಕ ತಾಯಿಯೊಬ್ಬಳ ನೈಜ ಜೀವನಗಾಥೆ. ಪತಿ ಮರಣ ಹೊಂದಿದ ನಂತರ ತನ್ನ ಸಣ್ಣವರಾದ ಆರು ಮಕ್ಕಳನ್ನು ಸಾಕಲು ಜುಮಾನಾ ಮಕ್ಕಿ ಯವರು ಹಲವು ಕಡೆ ಕೆಲಸ ಹುಡುಕಿದರು. ಆದರೆ ಆಕೆಗೆ ಎಲ್ಲೂ ಕೆಲಸ ಸಿಗಲಿಲ್ಲ. ಕೊನೆಗೆ ಆಕೆಗೆ ಹೊಳೆದ ಉಪಾಯ ರಸ್ತೆ ಬದಿಯಲ್ಲಿ ಟೀ ಮಾರಾಟ ಮಾಡುವುದು. ಮದೀನಾದ ಕಿಂಗ್ ಅಬ್ದುಲ್ ಅಝೀಝ್ ರಸ್ತೆಯಲ್ಲಿ ಜುಮಾನಾ ಮಕ್ಕಿಯವರು ಕಟ್ಟಿಗೆ ಸೌದೆಗಳನ್ನು ಬಳಸಿ ತಮ್ಮ ಸಣ್ಣ ಗಾಡಿಯಲ್ಲಿ …

Read More »

ಯುಎಇ: ಕಳೆದ ಆರು ವರ್ಷಗಳಿಂದ ರಮ್‌ಝಾನ್ ಉಪವಾಸಿಗರಿಗೆ ಇಫ್ತಾರ್ ಮಾಡಿಸುತ್ತಿದೆ ಗುರುದ್ವಾರ

ಸಂದೇಶ ಇ-ಮ್ಯಾಗಝಿನ್: ಯುಎಇಯ ಏಕೈಕ ಸಿಖ್ಖ್ ಗುರುದ್ವಾರ ಕಳೆದ ಆರು ವರ್ಷಗಳಿಂದ ಪವಿತ್ರ ರಮಝಾನ್ ತಿಂಗಳಲ್ಲಿ ಪ್ರತಿದಿನ ಉಪವಾಸಿಗರಿಗೆ ಇಫ್ತಾರ್ ಕೂಟ ಏರ್ಪಡಿಸುತ್ತಿದೆ. ದುಬಾಯಿಯ ಜಬಲ್ ಅಲಿ, ಅಲ್ ಮುಂತಝದಲ್ಲಿರುವ ಗುರುನಾನಕ್ ದರ್ಬಾರ್‌ನಲ್ಲಿ ಸಸ್ಯಹಾರಿ ಆಹಾರಗಳನ್ನು ನೀಡಿ ಉಪವಾಸಿಗರ ಇಫ್ತಾರ್ ಕಾರ್ಯ ಏರ್ಪಡಿಸುತ್ತಾ ಬಂದಿದೆ. ಗುರುದ್ವಾರದ ಚೇರ್‌ಮ್ಯಾನ್ ಸುರೇಂದರ್ ಸಿಂಗ್ ಕಂದಾರಿ ರವಿವಾರ ಬೈಸಾಕಿ ಉತ್ಸವದಂದು ಮಾಧ್ಯಮದವರ ಜೊತೆ ಮಾತನಾಡಿ ಗುರುದ್ವಾರದಲ್ಲಿ ಕಳೆದ ಆರು ವರ್ಷಗಳಿಂದ ಇಫ್ತಾರ್ ಕೂಟ ನಡೆಸುತ್ತಾ …

Read More »

ಪದವಿ ಪಡೆದ ತನ್ನ ಪತ್ನಿಗೆ ಪತಿ ನೀಡಿದ ಉಡುಗೊರೆ ಏನು ನೋಡಿ

ಸಂದೇಶ ಇ-ಮ್ಯಾಗಝಿನ್: ಸಾಮಾನ್ಯವಾಗಿ ಎಲ್ಲಾ ಪತಿಯಂತಿದಿರೂ ತಮ್ಮ ಪತ್ನಿಯರಿಗೆ ಏನಾದರೂ ಉಡುಗೊರೆಕೊಟ್ಟು ಅವರ ಮುಖದಲ್ಲಿ ನಗು ನೋಡಲು ಬಯಸುತ್ತಾರೆ. ಆದರೆ ಇಲ್ಲೊಬ್ಬ ಸೌದಿ ಪತಿ ತನ್ನ ಪತ್ನಿಗೆ ಉಡುಗೊರೆ ನೀಡಲು ಲಕ್ಷಾಂತರ ವ್ಯಯಿಸಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದಾನೆ. ನಾರ್ಥನ್ ಬಾರ್ಡರ್ ಯುನಿವರ್ಸಿಟಿಯಲ್ಲಿ ಪದವಿ ಪಡೆದ ಪತ್ನಿಯನ್ನು ಹೊಸ ಕಾರಿನಲ್ಲಿ ಪಿಕ್‌ಅಪ್ ಮಾಡಲು ಬಂದ ಪತಿ ಸ್ವಲ್ಪ ದೂರ ಹೋದ ನಂತರ ಆಕೆಯ ಬಳಿ ಇದು ನಾನು ನಿನಗೆ ಕೊಡುವ …

Read More »

ಮದೀನಾದ ಮಸೀದಿಯ 8 ಅಚ್ಚರಿದಾಯಕ ಅಪೂರ್ವ ಸಂಗತಿಗಳು

ಸಂದೇಶ ಇ-ಮ್ಯಾಗಝಿನ್: ಇಸ್ಲಾಮಿನ ಪವಿತ್ರ ನಗರವಾದ ಮದೀನಾವೆಂದರೆ ಪ್ರತಿಯೊಬ್ಬ ಮುಸಲ್ಮಾನನಿಗೂ ಒಂದು ತೆರನಾದ ಉತ್ಸಾಹ ಗರಿಗೆದರುತ್ತದೆ. ಮರುಭೂಮಿಯಾದರೂ ಅಲ್ಲಿನ ಸುಂದರ ಪರಿಸರ, ಆಹ್ಲಾದಕರ ಹವಾಮಾನ, ಎಲ್ಲಕ್ಕಿಂತ ಮುಖ್ಯವಾಗಿ ಪ್ರವಾದಿ(ಸ) ರವರ ಪಾವನ ಶರೀರ ದಫನಗೊಂಡಿರುವಂತ ಆ ಪುಣ್ಯಭೂಮಿಯಲ್ಲಿರುವ ಪ್ರವಾದಿಯವರ ಮಸೀದಿ ಎಂದೇ ಅರಿಯಲ್ಪಡುವ ಮಸ್ಜಿದುನ್ನಬವಿ ಇರುವ ಈ ಊರನ್ನು ನೋಡಲು ಪ್ರತಿಯೊಬ್ಬ ಮುಸ್ಲಿಮರೂ ಮನಸ್ಸಿನಲ್ಲಿ ಆಸೆ ಅದುಮಿಟ್ಟು ಕೊಂಡಿರುತ್ತಾರೆ ಎಂಬುದು ಸುಳ್ಳಲ್ಲ. ಮದೀನಾ ಇಸ್ಲಾಮಿನ ಇತರ ಪವಿತ್ರ ಭೂಮಿಗಳಾದ ಮಕ್ಕಾ, …

Read More »

ಮರುಭೂಮಿಯ ಕೃಷಿ ಮಾಂತ್ರಿಕ ನಾಸರ್ 40 ವರ್ಷಗಳ ಬಳಿಕ ಪ್ರವಾಸಿ ಬದುಕಿಗೆ ವಿದಾಯ ಹೇಳಿದರು

ಸಂದೇಶ ಇ-ಮ್ಯಾಗಝಿನ್: ನಾಲ್ಕು ದಶಕಗಳ ಬಳಿಕ ಕೇರಳದ ನಾಸಿರ್ ಅವರು ಕೊನೆಗೂ ತಮ್ಮ ಪ್ರವಾಸಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಪೊಣ್ಣಾನಿಯ ಪಲಪೆಟ್ಟಿಯವರಾದ ನಾಸರ್ 38 ವರ್ಷಗಳ ಕಾಲ ಅಬೂಧಾಬಿ ಪೊಲೀಸ್ ನಲ್ಲಿ ಕೆಲಸ ಮಾಡಿದ್ದಾರೆ. 1980 ರಲ್ಲಿ ಅರಬ್ ನಾಡಿಗೆ ಹೋದಾಗ ನಾಸಿರ್‌ಗೆ 17 ವರ್ಷ. ಮೈನರ್ ಪಾಸ್ ಪೋರ್ಟ್ ನಲ್ಲಿ ಹೋದ ನಾಸರ್‌ಗೆ ದೊರೆತ ಮೊದಲ ಕೆಲಸ ಇರಾನ್ ಇತಿಹಾಸವನ್ನು ಅಭ್ಯಾಸ ಮಾಡುವ ಸಂಶೋಧಕರೊಬ್ಬರ ಸೇವಕ. ಆ ಬಳಿಕ …

Read More »

ದುಬೈಯಲ್ಲಿ ನಿಧನರಾದ ಕೇರಳದ ಪ್ಲಂಬರ್: ಮನೆಗೆ ಬಂದು ನೆರವು ನೀಡಿದ ಕಂಪೆನಿ ಮಾಲಿಕ

ಸಂದೇಶ ಇ-ಮ್ಯಾಗಝಿನ್: ಗಲ್ಫ್ ನಾಡಿನಲ್ಲಿ ತಮ್ಮ ಕುಟುಂಬಸ್ಥರ ಸ್ವಸ್ಥ ಜೀವನಕ್ಕಾಗಿ ಪ್ರವಾಸಿ ಜೀವನದಲ್ಲಿ ತಮ್ಮ ಆಯುಷ್ಯವನ್ನು ವ್ಯಯಿಸುತ್ತಿರುವ ಪ್ರವಾಸಿಗಳ ಬಗ್ಗೆ ನಿಮಗೆ ಗೊತ್ತಿದೆ. ಅವರ ಕಷ್ಟ ಕಾರ್ಪಣ್ಯಗಳು ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತಹದ್ದೇ ಆಗಿರುತ್ತದೆ. ಇದೇ ರೀತಿ ಗಲ್ಫ್ ನಾಡು ದುಬಾಯಲ್ಲಿ ಪ್ರವಾಸಿಯಾಗಿ ದುಡಿಯುತ್ತಿದ್ದ ಕೇರಳದ ಚೇಗನ್ನೂರ್‌ನ ಬಿಜು ಎಂಬವರು ಇತ್ತೀಚೆಗೆ ಹೃದಯಾಘಾತದಿಂದ ನಿಧರಾಗಿದ್ದರು. ಬಿಜು ಕುಟುಂಬ ತೀರ ಬಡವರಾಗಿದ್ದು ಮನೆಯಲ್ಲಿರುವ ಗಂಡು ಮಕ್ಕಳಿಗೆ ಅಂತಹ ಹೇಳಿಕೊಳ್ಳುವಂತಹ ಉದ್ಯೋಗವೇನೂ ಇರಲಿಲ್ಲ. …

Read More »